Thought for the day

One of the toughest things in life is to make things simple:

8 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್  ಜೂಜಾಟದ ಪ್ರಕರಣ ಮಾಹಿತಿ.
                ದಿನಾಂಕ 06.04.2020 ರಂದು 15.00 ಗಂಟೆ ಸುಮಾರಿಗೆ ಹಟ್ಟಿ ಕ್ಯಾಂಪಿನ ಕಮಿಟಿ ಹಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ರಿಂದ 7 ನೇದ್ದವರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿ ZÀ£Àߧ¸ÀªÀ vÀAzÉ DzÀ¥Àà ªÀAiÀiÁ: 31 eÁ: £ÁAiÀÄPÀ G: PÀÆ° ¸Á: ºÀnÖ¥ÀlÖt  ಹಾಗೂ ಇತರೆ 6 ಜನರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 5300/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು,  7 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 17/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  07.04.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 50/2020 PÀ®A: 87 PÉ.¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

                ದಿನಾಂಕ.06-04-2020 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಹೆಚ್.ಸಿದ್ದಾಪುರ ಗ್ರಾಮದ ಶಿವರಾಜ ತಂದೆ ನರಸಪ್ಪ ಇವರ ಹೊಲದ ಹತ್ತಿರದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ªÉAPÀmÉñÀ vÀAzÉ zÀÄgÀÄUÀ¥Àà PÁªÀ°,30 ªÀµÀð, eÁ-£ÁAiÀÄPÀ, ¸Á-ºÉZï.¹zÁÝ¥ÀÄg ಹಾಗೂ ಇತರು 5 ಜನರು ಸೇರಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಆರು ಜನ ಆರೋಪಿತರನ್ನು ಹಿಡಿದು, ಆರೋಪಿ ತರ ಹತ್ತಿರ 4500/-ರೂ.ನಗದು ಹಣ, ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.09/2020 ಕಲಂ.87 ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿತರ ವಿರುದ್ದ ಎಫ್..ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದುಕೊಂಡು ದಿನಾಂಕ.07/04/2020 ರಂದು ಬೆಳಿಗ್ಗೆ 09-30 ಗಂಟೆಗೆ ತಂದು ಹಾಜರುಪಡಿಸಿದ್ದರ ಮೇರೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 45/2020 PÀ®A.87 PÉ ¦ PÁ¬ÄzÉ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ/ಸೇಂಧಿ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ: 07-04-2020 ರಂದು 21-45  ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾ ಮೆಯೊಂದಿಗೆ ಆರೋಪಿ E¨Áæ»A vÀAzÉ C§Äݯï SÁzÀgï, 49 ªÀµÀð, ªÀÄĹèA, ¤gÀÄzÉÆåÃV, ¸Á: PÁ½zÁ¸À£ÀUÀgÀ gÁAiÀÄZÀÆgÀÄ ತನನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿ:07-04-2020 ರಂದು 19-45 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಕಾಳಿದಾಸನಗರದಲ್ಲಿ ಒಬ್ಬ ಮಹಿಳೆ ಮತ್ತು ಪುರುಷ ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಕೈ ಹೆಂಡವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ ತಂದೆ ಹುಲಿಗೆಪ್ಪ, 2] ಶ್ರೀನಿವಾಸ ತಂದೆ ಚಿದಾನಂದ ಹಾಗು ಸಿಬ್ಬಂದಿಯವರಾದ ಹೆಚ್.ಸಿ-58, ಪಿಸಿ-539, 589, 480 ಹಾಗು ಜೀಪ್ ಚಾಲಕ ಹೆಚ್.ಸಿ-126 ರವರೊಂದಿಗೆ 20-15 ಗಂಟೆಗೆ ಕಾಳಿದಾಸನಗರಕ್ಕೆ ಹೋಗಿ ಪಂಚರು ಮತ್ತು ಸಿಬ್ಬಂದಿಯರೊಂದಿಗೆ 20-30 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟದಲ್ಲಿ ತೊಡಗಿದ್ದ ಮಹಿಳೆಯು ಓಡಿಹೋಗಿದ್ದು ಇನ್ನೊಬ್ಬವ್ಯಕ್ತಿಯು ಸಿಕ್ಕಿ ಬಿದ್ದಿದ್ದು ವಿಚಾರಿಸಲಾಗಿ ತನ್ನ ಹೆಸರು ಇಬ್ರಾಹಿಂ ತಂದೆ ಅಬ್ದುಲ್ ಖಾದರ್, ವಯಾ:49 ವರ್ಷ, ಜಾ:ಮುಸ್ಲೀಂ, ಸಾ: ಕಾಳಿದಾಸನಗರ ರಾಯಚೂರು ಅಂತಾ ತಿಳಿಸಿದ್ದು ಓಡಿಹೋದ ಮಹಿಳೆಯ ಬಗ್ಗೆ ವಿಚಾರಿಸಲಾಗಿ ಆಕೆಯು ತನ್ನಹೆಂಡತಿ ಯಾಗಿದ್ದು ಆಕೆಯ ಹೆಸರು ನಜ್ಮಾ, ವಯಾ:45 :ಮನೆಕೆಸ, ಅಂತಾ ತಿಳಿಸಿದ್ದು ಈತನ ವಶದಿಂದ ಘಟನಾ ಸ್ಥಳದಲ್ಲಿ 60 ಪ್ಲಾಸ್ಟಿಕ್ ಕವರುಗಳಲ್ಲಿ ಪ್ರತಿಯೊಂದರಲ್ಲಿ 01 ಲೀಟರ್ ಸೇಂದಿಯಂತೆ ಒಟ್ಟು 60 ಇದ್ದು .ಕಿ.ರೂ.600/-ಬೆಲೆಬಾಳುವ ಸೇಂದಿಯನ್ನು ಜಪ್ತಿ ಮಾಡಿಕೊಂಡು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಎಲ್ಲಾಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿ ತೆಗೆದು  180 ಎಂಎಲ್ ಬಾಟಲಿಯಲ್ಲಿ ಶಾಂಪಲ್ ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ತಾಬಾಕ್ಕೆ ತೆಗೆದುಕೊಂಡು ಮತ್ತು ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷಮ ಕವರುಗಳ ಸಮೇತವಾಗಿ ಸ್ಥಳದಲ್ಲಿಯೇ ನಾಶಪಡಿಸಲಾಯಿತು. ನಂತರ ಆರೋಪಿತನನ್ನು ಮುಂದಿನ ಕ್ರಮ ಕುರಿತು ವಶಕ್ಕೆ ಪಡೆದುಕೊಂಡು ದಿನಾಂಕ:07-04-2020 ರಂದು 20-30 ಗಂಟೆಯಿಂದ 21-30 ಗಂಟೆವರೆಗೆ ಸ್ಥಳದಲ್ಲಿಯೆ ಪಂಚನಾಮೆಯನ್ನು ಪೂರೈಸಿ 21-45 ಗಂಟೆಗೆ ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆ, ಮುದ್ದೆಮಾಲು ಹಾಗು ಆರೋಪಿತನನ್ನು ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್  ಠಾಣಾ ಗು.ನಂ.37/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿ.07-04-2020 ರಂದು ಸಂಜೆ 6-00 ಗಂಟೆಗೆ ಆರೋಪಿತರು ಸಿರವಾರ ಪಟ್ಟಣದ ಹೊರ ವಲಯದಲ್ಲಿರುವ ಸಣ್ಣಕಾಲುವೆ ದಂಡೆಯ ಮೇಲೆ ಡ್ರಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪೌಚಗಳನ್ನಿಟ್ಟು ಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಸಮಯದಲ್ಲಿ ಪಿ.ಎಸ್.ಐ.ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯ ದೊಂದಿಗೆ ದಾಳಿ ಮಾಡಿದಾಗ ಮದ್ಯಮಾರಾಟದ್ಲಲಿ ತೊಡಗಿದ ಆರೋಪಿತರು ಪೊಲೀಸರ ಸಮವಸ್ತ್ರವನ್ನು ಕಂಡು ತಮ್ಮ ವಶದಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದು ಆರೋಪಿತರು ಬಿಟ್ಟು ಹೋದ ಪ್ಲಾಸ್ಟಿಕ್  ಚೀಲದಲ್ಲಿ 90 ಎಂ.ಎಲ್. ಅಳತೆಯ 120 ಓರಿಜಿನಲ್ ಚ್ವಾಯಿಸ್ ಮದ್ಯದ ಪೌಚಗಳು ಅ.ಕಿ.ರೂ.3,600/- ಬೆಲೆ ಬಾಳುವವುಗಳಿದ್ದು [ ಒಟ್ಟು 10 ಲೀಟರ್ 800 ಮೀ.] ಆಗಿದ್ದು ಇರುತ್ತದೆ ಅಂತಾ ಪಿ.ಎಸ್.ಐ.ರವರು ಠಾಣೆಗೆ ಬಂದು ನೀಡಿದ ವರದಿಯ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 42/2020 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣ ಮಾಹಿತಿ.
            ದಿನಾಂಕ 04.04.2020 ರಂದು ಮದ್ಯಾಹ್ನ 1.30 ಗಂಟೆಯಿಂದ ದಿನಾಂಕ 05.04.2020 ರ ಸಂಜೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಚಿಕ್ಕ ಹೆಸರೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಅಳವಡಿಸಿದ್ದ 1) ಒಂದು ಲೆನೋವೋ ಕಂಪ್ಯೂಟರ್, ಕೀ ಬೋರ್ಡ, ಮೌಸ್ ಸಮೇತ ಇರುವದು ರೂಪಾಯಿ 31,515 ಹಾಗೂ 2) ಒಂದು ಲೆನೋವೋ ಕಂಪ್ಯೂಟರ್, ಮೌಸ್ ಸಮೇತ ಇರುವದು ರೂಪಾಯಿ 31,000 ರೂ ಹೀಗೆ ಒಟ್ಟು 62,515 ರೂ ಬೆಲೆಬಾಳುವ ಎರಡು ಕಂಪ್ಯೂಟರ್ ಸಾಮಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಫಿರ್ಯಾದಿದಾರು ಘಟನೆ ಬಗ್ಗೆ ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಕಂಪ್ಯೂಟರ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 49/2020 PÀ®A: 454, 457, 380 L¦¹ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.