Thought for the day

One of the toughest things in life is to make things simple:

12 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮದ್ಯ ಜಪ್ತಿ ಪ್ರಕರಣದ ಮಾಹಿತಿ.

            ದಿನಾಂಕ 11/04/2020 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಆರೋಪಿತನು ಹೀರಾಪೂರ ಗ್ರಾಮದಲ್ಲಿ ತನ್ನ ಕಿರಾಣಿ ಅಂಗಡಿಯ ಮುಂದೆ ಕೊರೊನ ವೈರಸ ಕೊವೀಡ್-19 ರೋಗದ ಹರಡುವಿಕೆಯನ್ನು ತಡೆಗಟ್ಟುವ  ನಿಟ್ಟಿನಲ್ಲಿ ಜಿಲ್ಲಾಅಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ರಾಯಚೂರು ರವರು ಮದ್ಯ ಮಾರಾಟವನ್ನು ನಿಷೇದಿಸಿ ಆದೇಶ ಹೊರಡಿಸಿದ್ದು ಗೊತ್ತಿದ್ದು ಸಹಾ ಆದೇಶವನ್ನು ಉಲ್ಲಂಘಿಸಿ ಯಾವುದೇ ಪರವಾನಿಗೆಯಿಲ್ಲದೇ  ಅಕ್ರಮವಾಗಿ ಮದ್ಯದ ಟೆಟ್ರಾ ಪ್ಯಾಕಗಳನ್ನು ಮಾರಾಟ ಮಾಡುತ್ತಿದ್ದಾಗ  ಚನ್ನಯ್ಯ.ಎಸ್.ಹಿರೇಮಠ ಸಿಪಿಐ ಯರಗೇರಾ ವೃತ್ತ ಮತ್ತು  ಸಿಬ್ಬಂದಿಯವರಾದ ಪಿ.ಸಿ-654,138,499 ಹಾಗೂ ಪಂಚರೊಂದಿಗೆ ದಾಳಿ ಮಾಡಿದ್ದು,ಆರೋಪಿತನಿಂದ HAYWARDS CHEERS WHISKY  90 ML 52 Tetra Pak Each Rs 30.32/- Total /- 1577/-   (4.6 ಲೀಟರ್) ಮದ್ಯವನ್ನು ವಶಕ್ಕೆ ಪಡೆದುಕೊಂಡು ಬಂದು ಪಂಚನಾಮೆ, ಮುದ್ದೆಮಾಲು, ಜ್ಞಾಪನ ಪತ್ರದೊಂದಿಗೆ ಆರೋಪಿತನನ್ನು ಹಾಜರಪಡಿಸಿದ್ದು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಯರಗೇರಾ ಠಾಣಾ  ಗುನ್ನೆ ನಂ 38/2020 ಕಲಂ 32.34 ಕೆ.  ಕಾಯ್ದೆ ಮತ್ತು 188 .ಪಿ.ಸಿ  ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

                ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಇದ್ದುದ್ದರಿಂದ ರೋಗ ಹರಡದಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಮಾಡಿ ಮದ್ಯ ಮಾರಾಟ ಮಾಡುವದನ್ನು ನಿಷೇಧಾಜ್ಞೆ ಮಾಡಿ ಆದೇಶ ಹೊರಡಿಸಿದ್ದರು ಹಟ್ಟಿ ಪಟ್ಟಣದ ಕೋಹಿನೂರು ಬಾರ್ ನಲ್ಲಿ ದಿನಾಂಕ 11.04.2020 ರಂದು ಬೆಳಗಿನ ಜಾವ 3.45 ಗಂಟೆ ಸುಮಾರಿಗೆ ಮೂರು ಜನ ಆರೋಪಿತರು ಬೀಗದ ಪತ್ತ ಮುರಿದು ಬಾರಿನಲ್ಲಿ ಕಳ್ಳತನ ಮಾಡುತ್ತಿದ್ದಾರೆ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿವರಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ 90 ಎಂ.ಎಲ್ ಇಂಪಿರಿಯಲ್ ಬ್ಲೂ ವಿಸ್ಕಿ 30 ಬಾಟಲಿಗಳು ಅಕಿರೂ 2700/- ರೂ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಮತ್ತು ರೂಪಾಯಿ 1,05,650 ಹಣವನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ಮುದ್ದುಮಾಲು, ಮೂರು ಜನ ಆರೋಪಿತರನ್ನು ಮತ್ತು ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  53/2020 ಕಲಂ: 457, 380, 269, 270, 188 L¦¹ & PÀ®A 21(1), 32, 34 PÉ.F PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

                ದಿನಾಂಕ: 12-04-2020 ರಂದು 11-30 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:12-04-2020 ರಂದು 09-30 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ  ಜಲಾಲನಗರದ ನಲ್ಲಾರೆಡ್ಡಿ ಮನೆಯ ಹತ್ತಿರ ಯಾರೋ ಒಬ್ಬ ಹೆಣ್ಣು ಮಗಳು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಬೆಳಿಗ್ಗೆ 10-15 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ಮತ್ತು ಸೇಂದಿ ಮಾರಾಟ ಮಾಡುತ್ತಿದ್ದ ಒಬ್ಬ ಹೆಣ್ಣು ಮಗಳು ನಮ್ಮನ್ನು ನೋಡಿ ಓಡಿ ಹೋಗಿದ್ದು, ಓಡಿ ಹೋದ ಹೆಣ್ಣು ಮಗಳ ಬಗ್ಗೆ ಪೊಲೀಸ್  ಬಾತ್ಮಿದಾರರನ್ನು ವಿಚಾರಿಸಲಾಗಿ  ಆಕೆಯ ಹೆಸರು  ತಿಮಲಮ್ಮ@ಮುದ್ದಮ್ಮ ಗಂಡ ಮಲ್ಲಯ್ಯ, ವಯಾ: 50 ವರ್ಷ, ಜಾತಿ: ಕಬ್ಬೇರ, : ಮನೆ ಕೆಲಸ, ಸಾ: ಜಲಾಲನಗರ ರಾಯಚೂರು ಅಂತಾ ತಿಳಿಸಿದರುನಂತರ ಘಟನಾ ಸ್ಥಳದಲ್ಲಿ 35 ಪ್ಲಾಸ್ಟಿಕ್ ಕವರುಗಳಲ್ಲಿ 35 ಲೀ ಸೇಂದಿ .ಕಿ.ರೂ.350/-ರೂ ಬೆಲೆಬಾಳುವುದು ಇದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸದರಿ ಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 180 ಎಂಎಲ್ ಬಾಟಲಿಯಲ್ಲಿ ತುಂಬಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡರು. ಮತ್ತು ಉಳಿದ ಸೇಂದಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕೊಡಗಳ ಸಮೇತವಾಗಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಲಾಯಿತು, ಬೆಳಿಗ್ಗೆ  10-15 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 11-30 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.40/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

               
ಐ.ಪಿ.ಸಿ, ಪ್ರಕರಣದ ಮಾಹಿತಿ.
            ದಿನಾಂಕ 11-04-2020 ರಂದು ರಾತ್ರಿ 7-30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಗಣಕೀಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ತಮ್ಮೂರಿನ ಜನತಾ ಮನೆಯ ವಿಷಯದಲ್ಲಿ ಕೆಲವು ದಿನಗಳ ಹಿಂದೆ ಫಿರ್ಯಾದಿ ಮತ್ತು ಆರೋಪಿತನ ಮಧ್ಯ ಬಾಯಿ ಮಾತಿನ ಜಗಳವಾಗಿದ್ದು ಅದೇ ಸಿಟ್ಟಿನಿಂದ ದಿನಾಂಕ 08-04-2020 ರಂದು  ರಾತ್ರಿ 11-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ಆರೋಪಿತನ ಮನೆಯ ಮುಂದೆ ನಡೆದುಕೊಂಡು ಹೊರಟಿದ್ದಾಗ ಅರೋಪಿತನು ಫಿರ್ಯಾದಿದಾರನನ್ನು'' ಲೇ ಲಂಗಾ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಕ್ರಮವಾಗಿ ತಡೆದು ನಿಲ್ಲಿಸಿ ಕೈಗಳಿಂದ ಹೊಡೆಬಡೆ ಮಾಡಿ '' ಲೇ ಸೂಳೇ ಮಗನೇ ಇನ್ನೊಂದು ಸಾರಿ ನಿಮ್ಮ ಅಕ್ಕಳ ಮನೆಯ ವಿಷಯದಲ್ಲಿ ಅಡ್ಡ ಬಂದರೆ ನಿನ್ನನ್ನು  ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 64/2020 ಕಲಂ 341.504.323.506 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.