Thought for the day

One of the toughest things in life is to make things simple:

11 Mar 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ  ಮಾಹಿತಿ.
ದಿನಾಂಕ.06-03-2020 ರಂದು ಮದ್ಯಾಹ್ನ 2-30ಗಂಟೆ ಸುಮಾರಿಗೆ ಮೋಟಾರ ಸೈಕಲ ಸವಾರ ರಾಮಪ್ಪ ಇತನು ತಾನು ನಡೆಸುತ್ತಿದ್ದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ:KA-36/ET-7080 ರ ಹಿಂದುಗಡೆ ಗಾಯಾಳು ಉಸ್ಮಾನಸಾಬ ಇತನನ್ನು ಕೂಡಿಸಿಕೊಂಡು ಬಲ್ಲಟಗಿ-ಮಲ್ಲಟ ರಸ್ತೆ ಯಲ್ಲಿ ಬಲ್ಲಟಗಿ ದಾಟಿ 2 ಕಿ.ಮೀ. ದೂರದಲ್ಲಿ ಮಲ್ಲಟ ಕಡೆಗೆ ಬರುವಾಗ ಮೋಟಾರ ಸೈಕಲನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿದ್ದರಿಂದ  ರಸ್ತೆಯಲ್ಲಿ ಮೋಟಾರ  ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದು ಉಸ್ಮಾನಸಾಬನಿಗೆ ಕುತ್ತಿಗೆಯ ಹಿಂಬದಿಯಲ್ಲಿ ನರ ಕಟ್ಟಾಗಿ, ಎಡಗಾಲು ಹಿಂಬಡದ ಹತ್ತಿರ ರಕ್ತಗಾಯವಾಗಿದೆ, ಎಡ ಮೊಣ ಕಾಲು ಕೆಳಗೆ ರಕ್ತಗಾಯ, ತಲೆಗೆ ರಕ್ತಗಾಯವಾಗಿದೆ, ಸೈಕಲ ಮೋಟಾರ ನಡೆಸುತ್ತಿದ್ದ ರಾಮಪ್ಪನಿಗೆ ತೆರಚಿದ ಗಾಯಗಳಾಗಿ ಮೋಟಾರ ಸೈಕಲ ಜಕಂಗೊಂಡಿದ್ದು ಭಾರಿ ಸ್ವರೂಪದ ಗಾಯಗೊಂಡಿರುವ ತನ್ನ ತಂದೆ ಉಸ್ಮಾನಸಾಬನನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ್  30/2020 ಕಲಂ: 279, 337, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕೊಲೆ ಪ್ರಕರಣದ ಮಾಹಿತಿ.
ದಿನಾಂಕ.11-03-2020 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಅನ್ನಮ್ಮ ಗಂಡ ಶೇಖರಪ್ಪ ಸಾ-ನಿಲಗಲ್ಲವರದೊಡ್ಡಿ (ಗಲಗ) ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಗಂಡನಾದ ಶೇಖರಪ್ಪನು ದಿನಾಂಕ 10-03-2020 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಕಾಟಮಳ್ಳಿ ಮೈಬುಸಾಬನೊಂದಿಗೆ ತಮ್ಮ ಕ್ರೂಷರ್ ಗಾಡಿ ನಂ ಎಪಿ-02 ಟಿಎ-1906 ನೇದ್ದನ್ನು ರಿಪೇರಿ ಮಾಡಿಸಿಕೊಂಡು ಬರಲು ಸಿರವಾರಕ್ಕೆ ಹೋದರು ಮರಳಿ ರಾತ್ರಿ 11-00 ಗಂಟೆ ಸುಮಾರಿಗೆ ಗಾಡಿಯೊಂದಿಗೆ ಮನೆಗೆ ಬಂದಾಗ ತನ್ನ ಗಂಡ ಮತ್ತು ಮೈಬುಸಾಬನೊಂದಿಗೆ ಇನ್ನು ಇಬ್ಬರು ಬಂದಿದ್ದರು ಅವರ ಮೈಮೇಲೆ ಸರಿಯಾಗಿ ಬಟ್ಟೆ ಇರಲಿಲ್ಲ, ತನ್ನ ಗಂಡನು ಅವರಿಗೆ ಬಟ್ಟೆಕೊಟ್ಟು ನೀರು ಕುಡಿಸಿ ನಂತರ ಎಲ್ಲಾರು ಸೇರಿ ತನ್ನ ಗಂಡನನೊಂದಿಗೆ ಬೈಕ್ ತರೋಣ ಅಂತ ಹೋದರು, ದಿನಾಂಕ 11-03-2020 ರಂದು ಬೆಳಗಿನ ಜಾವ 03-00 ಗಂಟೆಗೆ ತನ್ನ ಗಂಡನ ಮೋಟಾರ್ ಸೈಕಲ್ ತೆಗೆದುಕೊಂಡು ಕಾಟಮಳ್ಳಿ ಮೈಬುಸಾಬ ಮತ್ತು ಆತನೊಂದಿಗೆ ಇನ್ನೊಬ್ಬ ವ್ಯಕ್ತಿ ನಮ್ಮ ಮನೆಗೆ ಬಂದಿದ್ದು ಆಗ ಅವರಿಗೆ ತನ್ನ ಗಂಡನ ಬಗ್ಗೆ ವಿಚಾರಿಸಿದಾಗ ಆತನು ಹಿಂದೆ ಬರುತ್ತಾನೆ ಎಂದು ಹೇಳಿ ತಮ್ಮ ಮನೆಗೆ ಮ್ಯಾಳಿಗೆ ಮೇಲೆ ಮಲಗಿದರು,  ಬೆಳಗಾದರು ಬರಲಿಲ್ಲ ತನ್ನ ಗಂಡನ ಮೋಬೈಲ್ ಗೆ ಪೋನ್ ಮಾಡಿದಾಗ ಪೋನ್ ಎತ್ತಲಿಲ್ಲ, ಆಗ ಮೈಬೂಬನಿಗೆ ವಿಚಾರಿಸಿದಾಗ ತಾನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಆತನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋದನು, ಬೆಳಿಗ್ಗೆ 6-00 ಗಂಟೆ ಸುಮಾರಿಗೆ ತನ್ನ ಮೈದುನ ನಾಗರಾಜನು ಮನೆಯಲ್ಲಿಗೆ ಬಂದು ಹೇಳಿದ್ದೆನೆಂದರೆ, ನನ್ನ ಗಂಡನ ಶವ ಕಜ್ಜಿಬಂಡಿ ರಸ್ತೆಯಲ್ಲಿ ಅಂಜುಳ ಸಾಹುಕಾರ ರವರ ಹೊಲದ ಹತ್ತಿರ ಬಿದ್ದಿದ್ದು ಯಾರೋ ಕೊಲೆ ಮಾಡಿರುತ್ತಾರೆ ಆತನ ಮೈಮೇಲೆ ಗಾಯಗಳು ಇರುತ್ತವೆ ಅಂತ ತಿಳಿಸಿದ್ದು ನಾವೆಲ್ಲಾರು ನೋಡಲಾಗಿ ನನ್ನ ಗಂಡನ ಮೂಗಿನಿಂದ ರಕ್ತ ಬಂದಿದ್ದು ಎಡ ಎದೆಗೆ, ಕೈಗಳಿಗೆ, ಕಾಲುಗಳಿಗೆ ಕಂದುಗಟ್ಟಿದ ಗಾಯಗಳಾಗಿದ್ದು ತಲೆಯ ಹಿಂಭಾಗದಲ್ಲಿ ಬಾವುಬಂದಂತೆ ಇತ್ತು ನನ್ನ ಗಂಡನನ್ನು ಕಾಟಮಳ್ಳಿ ಮೈಬೂಸಾಬ ಇತರರು ಸೇರಿ ಯಾವುದೋ ದುರುದ್ದೇಶದಿಂದ ಯಾವುದೋ ವಸ್ತುವಿನಿಂದ ಮೈಮೇಲೆ ಗಾಯಗಳಾಗದಂತೆ ಹೊಡೆದು ಒಳಪೆಟ್ಟುಗೊಳಿಸಿ ಕೊಲೆ ಮಾಡಿ ಸಾಕ್ಷಿ ಪುರಾವೆ ನಾಶಪಡಿಸುವ ಉದ್ದೇಶದಿಂದ ರಸ್ತೆ ಅಪಘಾತದಲ್ಲಿ ಸತ್ತಂತೆ ಕಂಡು ಬರುವ ರೀತಿಯಲ್ಲಿ ಶವವನ್ನು ರಸ್ತೆಯ ಮೇಲೆ ಹಾಕಿ ಹೋಗಿದ್ದು ಇರುತ್ತದೆ. ಅಂತ ಇತ್ಯಾದಿಯಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.