Thought for the day

One of the toughest things in life is to make things simple:

28 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಸುಲಿಗೆ ಪ್ರಕರಣದ ಮಾಹಿತಿ.
ದಿನಾಂಕ:27.07.2019 ರಂದು ರಾತ್ರಿ 7.00 ಗಂಟೆಗೆ ಪಿರ್ಯಾದಿ ಶಿವಗ್ಯಾನಿ ಈತನು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಇಂದು ದಿನಾಂಕ:27-07-2019 ರಂದು ತಮ್ಮ ಇಬ್ಬರು ಮಕ್ಕಳ ಆಧಾರ್ ಕಾರ್ಡಗಳಲ್ಲಿ ತಿದ್ದುಪಡಿ ಮಾಡಿಸಲು ಮತ್ತು ತಮ್ಮ ತಂಗಿಯ ಇಬ್ಬರು ಮಕ್ಕಳ ಹಾಗೂ ತನ್ನ ತಂಗಿಯ ಸಂಬಂಧಿಕಳಾದ ಪಾರ್ವತಿ ರವರ ಇಬ್ಬರು ಮಕ್ಕಳ ಆಧಾರ್ ಕಾರ್ಡ ಮಾಡಿಸಲು ರಾಯಚೂರುಗೆ ಬಂದಿದ್ದು, ಬೆಳಿಗ್ಗೆ 9.00 ಗಂಟೆ ಸುಮಾರು ಸ್ಪಂದನಾ ಆಫಿಸ್ ನ ಹತ್ತಿರ ಕಾಯುತ್ತಿರುವಾಗ 1) ಫಾರೂಖ್ 2) ಈರಣ್ಣ 3) ಜಾಗಿರದಾರ್ ಎಂಬುವವರು ಪಿರ್ಯಾದಿದಾರರ ಹತ್ತಿರ ಬಂದು, ಇವತ್ತೆ ಆಧಾರ ಕಾರ್ಡ ಮಾಡಿಸುತ್ತೇವೆಂದು ಹೇಳಿ, ಬೆಳಿಗ್ಗೆ 9.00 ಗಂಟೆ ಸುಮಾರು 1200/- ರೂಪಾಯಿಗಳನ್ನು ಪಡೆದುಕೊಂಡಿದ್ದರು. ಮತ್ತು ಮಧ್ಯಾಹ್ನ 3.00 ಗಂಟೆ ಸುಮಾರು ಮತ್ತೆ 800/- ರೂಪಾಯಿಗಳನ್ನು ಕೊಟ್ಟರೆ ಮಾಡಿಸಿಕೊಡುತ್ತೇವೆಂದು ಹೇಳಿದಾಗ, ಮೊದಲು ಮಾಡಿಸಿಕೊಡು, ನಂತರ ಹಣ ಕೊಡುತ್ತೇನೆಂದು ಹೇಳಿದರೂ ಹೆಡ್ ಫೋಸ್ಟ್ ಆಫಿಸ್ ಹತ್ತಿರ ಜಬರ್ ದಸ್ತಿಯಿಂದ ಹೆದರಿಸಿ 800/- ರೂಪಾಯಿ ತೆಗೆದುಕೊಂಡಿದ್ದು, ಸಂಜೆ 5.00 ಗಂಟೆ ಸುಮಾರು ಜಾಗೀರದಾರ್ ಎಂಬುವವನು ಹೆಡ್ ಪೋಸ್ಟ್ ಆಫೀಸ್ ಹತ್ತಿರ ಸಿಕ್ಕಾಗ ಪಿರ್ಯಾದಿದಾರರು ಕಾರ್ಡ ಬಗ್ಗೆ ವಿಚಾರಿಸಿದ್ದು, ಆಗ ಆತನು ನೀವು ಹಣವೇ ಕೊಟ್ಟಿಲ್ಲವೆಂದು ಹೇಳಿರುತ್ತಾನೆ. ಪಿರ್ಯಾದಿದಾರರು ನಿಮ್ಮ ಮೇಲೆ ಕೇಸ್ ಮಾಡಿಸುತ್ತೇನೆಂದು ಹೇಳಿದಾಗ, ಕೇಸ್ ಮಾಡಿದರೆ ನಿಮ್ಮ ಜೀವ ಸಹೀತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ, ತಪ್ಪಿಸಿಕೊಂಡು ಹೋಗಿರುತ್ತಾನೆ. ಆ ಮೂರು ಜನರು ಇವತ್ತೆ ತಮಗೆ ಪರಿಚಯವಾಗಿದ್ದು, ಸದರಿ ಮೂರು ಜನರ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:44/2019, ಕಲಂ:384, 506 ಸಹೀತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:27/07/2019 ರಂದು ಮಧ್ಯಾಹ್ನ 02:00 ಗಂಟೆಗೆ ಪಿರ್ಯಾದಿ CAiÀÄå¥Àà  vÀAzÉ  ¹zÀÝ¥Àà ªÀÀAiÀÄ 40 eÁ PÀÄgÀ§gÀ   G  MPÀÌ®ÄvÀ£À ¸Á  ªÀĹzÁ¥ÀÄgÀ ರವರು ಠಾಣೆಗೆ ಹಾಜರಾಗಿ ಒಂದು ಗಣೀಕೃತ  ಪಿರ್ಯಾದಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ಮಕ್ಕಳು ದಿನಾಂಕ 13-05-2019 ರಂದು ರಾತ್ರಿ  10-30 ಗಂಟೆಗೆ ಊಟ ಮಾಡಿ  ಮಲಗಿಕೊಂಡಾಗ ದಿನಾಂಕ 14-05-2019 ಮಧ್ಯ  ರಾತ್ರಿ 12-10 ಗಂಟೆಗೆ ಪಿರ್ಯಧಿಯ ಹೆಂಡತಿ  ಎಚ್ಚರವಾಗಿ ನೋಡಲು ತನ್ನ  ಪಕ್ಕದಲ್ಲಿ ಮಲಗಿದ್ದ ತನ್ನ ಮಗಳು ಬೂದೆಮ್ಮ  ಈಕೆಯು ಕಾಣದೆ ಇದ್ದಾಗ  ಫಿರ್ಯಾದಿಗೆ ಎಬ್ಬಿಸಿದ್ದು ಪಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಅಳಿಯ  ಎಲ್ಲರು  ಸೇರಿ ಹುಡುಕಾಡಲು ಬೂದೆಮ್ಮ ಸಿಕ್ಕಿರುವುದಿಲ್ಲ  ಪಿರ್ಯಾದಿಯ ಮಗಳು ದಿನಾಂಕ 13-07-2019 ರಂದು ರಾತ್ರಿ 10-30   ಗಂಟೆಯಿಂದ  ರಾತ್ರಿ  12-10 ಗಂಟೆಯ ಮಧ್ಯದ ಅವದಿಯಲ್ಲಿ ತನ್ನಮಗಳು ಬೂದೆಮ್ಮ ಈಕೆಯು ಮಸಿದಾಪೂರ ಗ್ರಾಮದತನ್ನ ಮನೆಯಿಂದ ಹೋದವಳು ವಾಪಸ್ ಬಾರದೆ ಕಾಣೆ ಯಾಗಿರುತ್ತಾಳೆ ,ಸದರಿಯವಳು ಕಾಣೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಮುಂತಾಗಿ ಇದ್ದ ಫಿರ್ಯಾದಿ ಮೇಲೀಂದ ಗಬ್ಬೂರು ಪೊಲೀಸ್ ಗುನ್ನೆ ನಂಬರ  ಪ್ರಕರಣ 53/2019 PÀ®A;  ªÀÄ»¼É PÁuÉ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ಈ ಪ್ರಕರಣದ ಪಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ಹುಲಿಗೆಪ್ಪ ಇವರಿಗೆ ಮತ್ತು ಆರೋಪಿ ಸಂತೋಷ ತಂದೆ ಬಸವರಾಜ ಹಾಗೂ ಇತರೆ 2 ಜನರೊಂದಿಗೆ ಹರವಿ ಗದ್ದಿಮಿಟ್ಟಿಕ್ಯಾಂಪಿನಲ್ಲಿ ಮನೆಯ ಮುಂದಿನ ಖಾಲಿ ಜಾಗೆಯ ವಿಷಯದಲ್ಲಿ ತಕರಾರು ಇದ್ದು ಅದೇ ವಿಷಯದಲ್ಲಿ ದಿನಾಂಕ.24-07-2019 ರಂದು ಮದ್ಯಾಹ್ನ 3-00ಗಂಟೆಯ ಸುಮಾರಿಗೆ ಹರವಿ ಗದ್ದಿಮಿಟ್ಟಿಕ್ಯಾಂಪದಲ್ಲಿ ಗುಂಟ್ರಾಳ ಹನುಮಂತನ ಹೊಟೆಲಗೆ ಚಹಾಕುಡಿಯಲು ಹೋದ ಪಿರ್ಯಾದಿದಾರರ ಗಂಡ ಹುಲಿಗೆಪ್ಪನೊಂದಿಗೆ ಆರೋಪಿತರು ಜಗಳ ತೆಗೆದು ತಮ್ಮ ಕೈಗಳಲ್ಲಿದ್ದ ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿ ಸೂಳೇ ಮಕ್ಕಳೆ ನೀವು ನಮ್ಮ ಜಾಗೆ ನಮಗೆ ಬಿಡದಿದ್ದರೆ ನಿಮ್ಮ ಜೀವ ತೆಗೆಯುತ್ತೇವೆಂದು  ಅವಾಚ್ಯ ವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಗಾಯಗೊಂಡ ತನ್ನ ಗಂಡನನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿವಸ ತಡವಾಗಿ ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 106/2019 ಕಲಂ-324,323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-27-07-2019 ರಂದು ಮದ್ಯಾಹ್ನ 4-30  ಗಂಟೆಯ ಸುಮಾರಿಗೆ ಠಾಣೆಯ ಲಿಂಗಸ್ಗೂರು ಪೊಲೀಸ್ ಠಾಣೆಯ ಪಿ.ಎಸ್. ಶ್ರೀ ಪ್ರಕಾಶರೆಡ್ಡಿ ಡಂಬಳ ರವರು ಮರಳು ತುಂಬಿದ ಒಂದು ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆಯ ಮೂಲಕ ಜಪ್ತುಪಡಿಸಿಕೊಂಡು ಸದರಿ ಟ್ರ್ಯಾಕ್ಟರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಜಪ್ತಿ ಪಂಚನಾಮೆಯೊಂದಿಗೆ  ತಮ್ಮ ವರದಿಯನ್ನು ನೀಡಿದ್ದು, ಸದರಿ ವರದಿಯ ಸಾರಾಂಶವೇನೆಂದರೆ , “ ದಿವಸ ದಿನಾಂಕ-27-07-2019 ರಂದು ಮದ್ಯಾಹ್ನ 2-20 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಗುರುಗುಂಟಾ ರಸ್ತೆಯ ಮೂಲಕ ಲಿಂಗಸ್ಗೂರು ಕಡೆ ಟ್ರ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ  ಮೇರೆಗೆ ಮಾನ್ಯ ಡಿ.ಎಸ್.ಪಿ ಮತ್ತು ಸಿ.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಠಾಣೆಗೆ ಇಬ್ಬರು ಪಂಚರನ್ನು ಕರೆಯಿಸಿಕೊಂಡು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪಿನಲ್ಲಿ  ಲಿಂಗಸ್ಗೂರು-ಗುರುಗುಂಟಾ ರಸ್ತೆಯಲ್ಲಿ ಬರುವ  ಅಮರೇಶ್ವರ ಕ್ರಾಸ ಹತ್ತಿರ ಇರುವ ಬಸ್ಸ ನಿಲ್ದಾಣದ ಹತ್ತಿರ ಹೋಗಿ, ಜೀಪನ್ನು ಬಸ್ಸ ನಿಲ್ದಾಣದ ಮರೆಯಲ್ಲಿ ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಟ್ರ್ಯಾಕ್ಟರ ಬರುವದನ್ನು  ಕಾಯುತ್ತಾ ನಿಂತ್ತಿರುವಾಗ ಮದ್ಯಾಹ್ನ-3-00 ಗಂಟೆಯ ಸುಮಾರಿಗೆ ಗುರುಗುಂಟಾ ರಸ್ತೆಯ ಕಡೆಯಿಂದ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವ ಟ್ರ್ಯಾಕ್ಟರ ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೊಂದಿಗೆ ಸದರಿ ಟ್ರ್ಯಾಕ್ಟರದ ಮೇಲೆ ದಾಳಿ ಮಾಡಲಾಗಿ, ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದು ,ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಮಹೇಂದ್ರ ಡಿ. 575 ಟ್ರ್ಯಾಕ್ಟರನ ನೊಂದಣಿ ಸಂಖ್ಯೆ- ಕೆ.-36 ಟಿ.ಸಿ-1017 ಅಂತಾ ಇದ್ದು. ಸದರಿ ಟ್ರ್ಯಾಕ್ಟರನ ಟ್ರಾಲಿಯಲ್ಲಿ  .ಕಿ.ರೂ-2000/- ರೂ ಬೆಲೆ ಬಾಳುವ ಮರಳನ್ನು ತುಂಬಿಕೊಂಡು ಬಂದಿದ್ದು . ನಂತರ ಸದರಿ ಟ್ರ್ಯಾಕ್ಟರನ್ನು ಖಾಸಗಿ ಚಾಲಕನ್ನನ್ನು  ಸ್ಥಳಕ್ಕೆ ಬರಮಾಡಿಕೊಂಡು ಘಟನಾ ಸ್ಥಳದಿಂದ ಠಾಣೆಗೆ ತಗೆದುಕೊಂಡು ಬಂದಿದ್ದು ಇರುತ್ತದೆಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾನೆ ಗುನ್ನೆ ನಂಬರ 178/2019  PÀ®A. 379 L.¦.¹ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.