Thought for the day

One of the toughest things in life is to make things simple:

23 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ;- 21-02-2019 ರಂದು 1140  ಗಂಟೆಗೆ ಪಿಎಸ್ ಐ  ರವರು ಠಾಣೆಗೆ ವಾಹನ ದೊಂದಿಗೆ ಬಂದು ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ಪಿಎಸ್ಐ ರವರು ನಗರದಲ್ಲಿ ಸಂಚಾರ ಸುವ್ಯವಸ್ಥೆ ಮೇಲ್ವಿಚಾರಣೆ ಕುರಿತು ಪೆಟ್ರೋಲಿಂಗ್ ಮಾಡುತ್ತಾ ಚಂದ್ರಮೌಳೇಶ್ವರ ಸರ್ಕಲ್ ನಿಂದ ಕನಕದಾಸ  ಸರ್ಕಲ್ ಕಡೆಗೆ ಹೋಗುವಾಗ,  ಇಸಾಕ್ ಆಯಿಲ್ ಮಿಲ್  ಮುಂದಿನ ರಸ್ತೆಯಲ್ಲಿ ಅರೋಪಿತನು  ತನ್ನ ಜೀಪನ್ನು  ಸಾರ್ವಜನಿಕ ಸುಗಮ ಸಂಚಾರಕ್ಕೆ  ಅಡೆತಡೆ  ಉಂಟಾಗುವ ರೀತಿಯಲ್ಲಿ ನಿಲ್ಲಿಸಿದ್ದರಿಂದ ಪಿಎಸ್ಐ ರವರು ಕೂಡಲೇ ಜೀಪನ್ನು  ತೆರವುಗೊಳಿಸುವಂತೆ ಸೂಚಿಸಿ ಹೋದಾಗ್ಯೂ ಸಹ ಅರೋಪಿತನು ಜೀಪನ್ನು ತೆರವುಗೊಳಿಸದೆ ದಿನಾಂಕ:21.02.2019 ರಂದು ಬೆಳಿಗ್ಗೆ 1100 ಗಂಟೆಯಿಂದ 1120  ಗಂಟೆಯವರೆಗೆ  20  ನಿಮಿಷಗಳ ಕಾಲ TRAX TOOFAN JEEP  NO. KA36A4871 ನೇದ್ದನ್ನು ಅಡ್ಡಾದಿಡ್ಡಿಯಾಗಿ ಮಾನವ ಜೀವಕ್ಕೆ ಅಪಾಯಕರ & ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದರಿಂದ . ಸದರಿ ವಾಹನವನ್ನು ಸಂಜೀವಪ್ಪ ಪಿಸಿ 102 ಇವರ ಸಹಾಯದಿಂದ ತೆರವುಗೊಳಿಸಿ ಠಾಣೆಗೆ ತಂದು ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಕುರಿತು ಹಾಜರಪಡಿಸಿದ ದೂರಿನ ಸಾರಾಂಶದ ಮೇಲಿಂದ ರಾಯಚೂರ ನಗರ ಸಂಚಾರ ಠಾಣೆ ಗುನ್ನೆ ನಂ. 15/2019 ಕಲಂ 283 ಐಪಿಸಿ ಪ್ರಕಾರ ಗುನ್ನೆ ದಾಖಲ  ಮಾಡಿಕೊಂಡು ತನಿಖೆ ಕೈಕೊಂಡೆನು   .

        ದಿನಾಂಕ- 21/02/2019 ರಂದು ಬೆಳಗ್ಗೆ 10:00 ಗಂಟೆಗೆ ಬಸವರಾಜ ತಂದೆ ನರಸಯ್ಯ ವಯ:45 ವರ್ಷ ಜಾ: ಈಳಿಗೇರ ಸಾ: ಬುದ್ದಿನ್ನಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ನಿನ್ನೆ ದಿನಾಂಕ: 20/02/2019 ರಂದು ಪಿರ್ಯಾಧಿದಾರರು ತಮ್ಮ ಸಂಬಂದಿಕರ ಊರಾದ ಚಿಕ್ಕ ಹೆಸರೂರು ಗ್ರಾಮಕ್ಕೆ ಹೋಗಿ ಪುನ್ ವಾಪಸ್ ತಮ್ಮೂರು ಬುದಿನ್ನಿ ಗ್ರಾಮಕ್ಕೆ ಬರುತ್ತಿದ್ದಾಗ ಸಯಾಂಕಾಲ 7:00 ಗಂಟೆಯ ಸುಮಾರಿಗೆ ಬೆಂಚಮರಡಿ ಗ್ರಾಮ ದಾಟಿ ಸುಮಾರು ಬೆಂಚಮರಡಿ ಗ್ರಾಮದಿಂದ ½ ಕಿ.ಮೀ. ಅಂತದಲ್ಲಿ ಹೋಗುತ್ತಿರುವಾಗ ರಸ್ತೆಯ ಮಧ್ಯದಲ್ಲಿ ಒಂದು ಟ್ರಾಕ್ಟರ್ ನಿಂತುಕೊಂಡಿದ್ದು ಸದರಿ ಟ್ರಾಕ್ಟರ್ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ನಮ್ಮೂರಿನ ನಿಂಗಮ್ಮಳು ಕೂಡ ಬಿದ್ದಿದ್ದು ಇತ್ತು. ಆಗ ನಿಂಗಮ್ಮಳ ಸಂಬಂದಿಯಾದ ನಾಗರೆಡ್ಡೆಪ್ಪ ತನಿಗೆ ಪೋನ್ ಮಾಡಿ ವಿಷಯವನ್ನು ತಿಳಿಸಲು ಅಲ್ಲಿಗೆ ನಾಗರೆಡ್ಡೆಪ್ಪ ಮತ್ತು ಶಿವಪ್ಪ ಪಾಳೇದ್ ಇವರುಗಳು ಬಂದು ನೋಡಿ ನಿಂಗಮ್ಮಳನ್ನು ಎತ್ತಿ ವಿಚಾರಿಸಲು ಟ್ರಾಕ್ಟರ್ ಹಿಂದಿನಿಂದ ಗುದ್ದಿದ್ದು ಅಂತಾ ತಿಳಿಸಿದಾಗ ಪಿರ್ಯಾಧಿದಾರರು ಟ್ರಾಕ್ಟರ್ ನ್ನು ನೋಡಲು ಅದು ಕೆಂಪು ಬಣ್ಣದ ಮಹಿಂದ್ರಾ 575 DI ಅಂತಾ ಇದ್ದು ಅದಕ್ಕೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲಾ ಕಾರಣ ಸದರಿ  ಟ್ರಾಕ್ಟರ್ ಇಂಜಿನ್ ನಂಬರ್ ನ್ನು ಪರಿಶೀಲಿಸಲು  EBW0L1251 ಅಂತಾ ಇರುತ್ತದೆ. ನಂತರ  ಪಿರ್ಯಾಧಿದಾರರು ಹಾಗೂ ನಾಗರೆಡ್ಡಪ್ಪ ವರುಗಳು ನಿಂಗಮ್ಮಳನ್ನು ಎತ್ತಿಕೊಂಡು ತಮ್ಮೂರು ಬುದ್ದಿನ್ನಿ ಗ್ರಾಮಕ್ಕೆ ತಮ್ಮ ಮೋಟರ್ ಸೈಕಲ್ ಮೇಲೆ ಹೋಗಿ ತಮ್ಮೂರಿನಿಂದ ಚಿಕಿತ್ಸೆ ಕುರಿತು 108 ಅಂಬ್ಯೂಲೆನ್ಸ್ ವಾಹನದಲ್ಲಿ ನಾಗರೆಡ್ಡೆಪ್ಪ ಮತ್ತು ನಿಂಗಮ್ಮಳ ಸಂಬಂದಿಕರು ಆಕೆಯನ್ನು ಚಿಕಿತ್ಸೆ ಕುರಿತು ಮಸ್ಕಿ ಗೆ ಕರೆದುಕೊಂಡು ಹೋದರು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ರಾತ್ರಿ 1:30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅಂತಾ ಇಂದು  ದಿನಾಂಕ: 21/02/2019 ರಂದು ಬೆಳಗ್ಗೆ 6:00 ಗಂಟೆಗೆ ನನಗೆ ನಾಗರೆಡ್ಡೆಪ್ಪ ತನು ಫೊನ್ ಮಾಡಿ ತಿಳಿಸಿದನು. ಕಾರಣ ಸದರಿ ನಿಂಗಮ್ಮಳು ಟ್ರಾಕ್ಟರ್ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದು ಕಾರಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ಪಿರ್ಯಾಧಿದಾರರು ತಂದು ಹಾಜರುಪಡಿಸಿದ ಗಣಕೀಕೃತ ಪಿರ್ಯಾಧಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ 22/2019 ಕಲಂ 279, 304() ಐಪಿಸಿ ಮತ್ತು ಕಲಂ 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ