Thought for the day

One of the toughest things in life is to make things simple:

20 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:19.02.2019 ರಂದು ರಾತ್ರಿ 9.20 ಗಂಟೆಗೆ ಮುದಗಲ್ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ  ಇದೆ ಅಂತಾ ಪೋನ ಮೂಲಕ ತಿಳಿಸಿದ ಮೇರೆಗೆ ಅಲ್ಲಿಗೆ ಹೋಗಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ºÀ£ÀĪÀÄAvÀ vÀAzÉ ªÀÄ®è¥Àà £ÁAiÀÄPï ªÀAiÀĸÀÄì:32 ªÀµÀð eÁ: ªÁ°äÃQ G: MPÀÌ®ÄvÀ£À ¸Á: wrUÉÆüÀ vÁ: ¹AzsÀ£ÀÆgÀÄ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ,  ಫಿರ್ಯಾದಿ & ಮೃತ ಹನುಮಂತ ಕೂಡಿಕೊಂಡು ಹನುಮಂತನ  ಹಿರೋ ಗ್ಲಾಮರ್ ಮೋಟಾರ ಸೈಕಲ್ ನಂ ಇಲ್ಲದ್ದು ಚೆಸ್ಸಿ ನಂ. MBLJA06ES9GM14420 ನೇದ್ದನ್ನು ತಗೆದುಕೊಂಡು ಮುದಗಲ್ಲ ಕಟ್ಟಿಗೆ ಅಡ್ಡೆಗೆ ಕೆಲಸಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸ ತಮ್ಮೂರಿಗೆ ಹೋಗುತ್ತಿರುವಾಗ ಮೃತನು ಮೋಟಾರ ಸೈಕಲ್ ನಡೆಸುತ್ತಿದ್ದು ಅದರ ಹಿಂದೆ ಫಿರ್ಯಾದಿದಾರನು ಕುಳಿತುಕೊಂಡು ಮುದಗಲ್  ಮಸ್ಕಿ ರಸ್ತೆ ಮುಖಾಂತರ ಹೋಗುತ್ತಿರುವಾಗ ದಿನಾಂಕ:19.02.2019 ರಂದು ರಾತ್ರಿ 8.20 ಗಂಟೆ ಸುಮಾರಿಗೆ ಮಸ್ಕಿ ರಸ್ತೆಯ ಮಹ್ಮದ ಗಾಜರಿ ರವರ ಹೊಲದ ಸಮೀಪ ರಸ್ತೆಯ ಮೇಲೆ ಮೃತ ಹನುಮಂತನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮುಂದೆ ಹೊರಟಿದ್ದ ಬಂಡಿ ಹಿಂಬಾಗಕ್ಕೆ ಮೋಟಾರ ಸೈಕಲ್ ದಿಂದ ಟಕ್ಕರ ಕೊಟ್ಟಿದ್ದರಿಂದ ಮೃತ ಹನುಮಂತ ತಲೆಗೆ & ಹಣೆಯ ಮುಂದೆ ರಕ್ತಗಾಯವಾಗಿ ಒಳಪೆಟ್ಟಾಗಿದ್ದು ಹಾಗೂ ಎಡಬಾಗದ ಹೊಟ್ಟೆಯ ಕೆಳಗಡೆ ಬಲವಾದ ಒಳಪೆಟ್ಟಾಗಿದ್ದು ಮತ್ತು ಫಿರ್ಯಾದಿಗೆ ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ 108 ವಾಹನದಲ್ಲಿ ಮೃತ ಹನುಮಂತನಿಗೆ ಮತ್ತು ಫಿರ್ಯಾದಿಗೆ ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದಾಗ ರಾತ್ರಿ 9.20 ಗಂಟೆಗೆ ಹನುಮಂತನಿಗೆ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿಕೊಳ್ಳದೆ & ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆಯು ಮೃತ ಹನುಮಂತನು ತನ್ನ ಮೋಟಾರ ಸೈಕಲ್ಲನ್ನು ಅತೀವೆಗಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಮುಂದೆ ಹೊರಟಿದ್ದ ಬಂಡಿಯ ಹಿಂಬಾಗಕ್ಕೆ ಟಕ್ಕರ ಮಾಡಿದ್ದರಿಂದ ಈ ಘಟನೆ ನಡೆದಿರುತ್ತದೆ ಕಾರಣ ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಾಸ ಠಾಣೆಗೆ  ಇಂದು ದಿನಾಂಕ:19.02.2019 ರಂದು ರಾತ್ರಿ 10.40 ಗಂಟೆಗೆ ಬಂದು ಸದರಿ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 19/2019 ಕಲಂ 279,337,304(ಎ) ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ  19-02-2019 ರಂದು ರಾತ್ರಿ 7-15 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಶಿವಮ್ಮ ಗಂಡ ಮೌಲಾಲಿ ವಯಾಃ 32 ವರ್ಷ ಜಾತಿಃ ನಾಯಕ ಉಃ ಮನೆ ಕೆಲಸ ಸಾಃ ಮಾಡಗಿರಿ ತಾಃ ಮಾನವಿ ರವರು ಠಾಣೆಗೆ ಬಂದು ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ. ದಿನಾಂಕ 19-02-2019  ರಂದು ತಮ್ಮ ಸಂಬಂದಿಕರಾದ ವೆಂಕಟೇಶ ನಾಯಕ ಸಾಃ ಹರವಿ ಇವರು ನೀರಮಾನ್ವಿ ಯಲ್ಲಮ್ಮ ದೇವರ ಕಾರ್ಯಕ್ರಮವಿದ್ದ ಪ್ರಯುಕ್ತ ಇಂದು ಫಿರ್ಯಾದಿ ಮತ್ತು ತನ್ನ ಗಂಡನಾದ ಮೃತ ಮೌಲಾಲಿ ಮತ್ತು ತಮ್ಮನಾದ ಗಂಗಪ್ಪ ಹಾಗೂ ತಮ್ಮೂರಿನ ಮೌನೇಶ ತಂದೆ ಹನುಮಂತ ನಾಯಕ ಎಲ್ಲರೂ ಕೂಡಿ ಬೆಳಿಗ್ಗೆ 10-30 ಗಂಟೆಗೆ ಮಾಡಗಿರಿ ಗ್ರಾಮದಿಂದ ನೀರಮಾನ್ವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿ ಸಂಬಂದಿಕರ ಕಾರ್ಯಕ್ರಮಕ್ಕೆ ಹಾಜರಾಗಿ ಮಧ್ಯಾಹ್ನ 3-00 ಗಂಟೆಗೆ ಎಲ್ಲರೂ ಊಟ ಮಾಡಿಕೊಂಡು ಪುನಾಃ ಮಾಡಗಿರಿ ಗ್ರಾಮಕ್ಕೆ ಹೋಗಬೇಕೆಂದು ಫಿರ್ಯಾದಿ ತನ್ನ ತಮ್ಮನಾದ ಗಂಗಪ್ಪ ಈತನ ಮೋಟರ್ ಸೈಕಲ್ ಮೇಲೆ ಮತ್ತು ತನ್ನ ಗಂಡನಾದ ಮೌಲಾಲಿ ಈತನು ಮೌನೇಶನ ಈತನ ಹೊಂಡಾ ಶೈನ್ ಮೋಟರ್ ಸೈಕಲ್ ನಂ  ಸೈಕಲ್ ನಂ ಕೆ.ಎ 36 ಈಆರ್ 9527 ನೇದ್ದರ ಹಿಂದುಗಡೆ ಕುಳಿತುಕೊಂಡು ನೀರಮಾನ್ವಿ ಯಲ್ಲಮ್ಮ ದೇವಸ್ಥಾನದಿಂದ ರಾಯಚೂರು- ಮಾನವಿ ಮುಖ್ಯ ರಸ್ತೆಯ ಮೇಲೆ ಹೊರಟು ನೀರಮಾನ್ವಿ ಕ್ರಾಸದಿಂದ ಸಿರಿವಾರ ರಸ್ತೆಯ ಮೇಲೆ ಫಿರ್ಯಾದಿ ಮೋಟರ್ ಸೈಕಲ್ ಮುಂದುಗಡೆ ಮೌನೇಶ ಈತನು ತನ್ನ  ಮೋಟರ್ ಸೈಕಲ್ ಹಿಂದುಗಡೆ ಮೌಲಾಲಿ ಈತನನ್ನು ಕೂಡಿಸಿಕೊಂಡು ಮೌನೇಶನು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಸೂಗರೇಶ್ವರ ಕಾಲೋನಿ ಹತ್ತಿರ  ಸಂಜೆ 4-00 ಗಂಟೆಯ ಸುಮಾರಿಗೆ ಮೋಟರ್ ಸೈಕಲನ್ನು ಪಲ್ಟಿ ಮಾಡಿದ್ದರಿಂದ ಹಿಂದೆ ಕುಳಿತ ಮೌಲಾಲಿ ಮತ್ತು ಚಾಲಕ ಮೌನೇಶ ಇಬ್ಬರು ರಸ್ತೆಯ ಮೇಲೆ ಬಿದ್ದುದ್ದು ಮೌಲಾಲಿ ಈತನಿಗೆ ತಲೆಗೆ ಮತ್ತು ಕುತ್ತಿಗೆ ಹಿಂಬಾಗದಲ್ಲಿ ಭಾರಿ ಒಳಪೆಟ್ಟಾಗಿ ಗದ್ದಕ್ಕೆ ಗಾಯವಾಗಿದ್ದು ಮತ್ತು ಮೌನೇಶನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ ಗಾಯಗೊಂಡ ಮೌಲಾಲಿ ಈತನಿಗೆ 108 ವಾಹನದಲ್ಲಿ ಮಾನವಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ ಆಸ್ಪತ್ರೆಯ ಸಮೀಪ ಸಂಜೆ 5-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವು ಮೌನೇಶ ತಂದೆ ಹನುಮಂತ ಸಾಃ ಮಾಡಗಿರಿ ಈತನ ನಿರ್ಲಕ್ಷತನದಿಂದ ಘಟನೆ ಜರುಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 50/2019 ಕಲಂ  279.  304 (A) IPC  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಾನಸಿಕ ತೊಂದರೆ ಪ್ರಕಣದ ಮಾಹಿತಿ.
ದಿನಾಂಕ: 15-10-2018 ರಂದು ಸಂಜೆ 5-00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಬೇಟಿನೀಡಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಶಾಲಂ ತಂದೆ ಸಾಯಿಬಾಬ, ಸಾ:ಕಾಳಿದಾಸನಗರ ರಾಯಚೂರು, ಈತನ ಹೇಳಿಕೆಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ ತಾನು 2017 ರಲ್ಲಿ ಕ್ವಿನಿಕ್ ಸಂಸ್ಥೆಕಡೆಯಿಂದ ಗುತ್ತಿಗೆ ಆದಾರದ ಮೇಲೆ ಡಾಟಾಎಂಟ್ರಿ ಆಪರೇಟರ ಅಂತಾ ನೇಮಕಾತಿಯಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಈಗ್ಗೆ 04 ತಿಂಗಳುಗಳಿಂದ ರಿಮ್ಸ್ ಆಸ್ಪತ್ರೆಯವರು ತನಗೆ ಮಾನಸಿಕ ತೊಂದರೆ ನೀಡಿ ತನಗೆ ಬರಬೇಕಾಗಿದ್ದ ಸಂಬಳ ನೀಡದೇ ಮತ್ತು 03 ಲಕ್ಷ ರೂ ನೀಡಿದರೆ ತನಗೆ ಪರ್ಮಿನೆಂಟ ಮಾಡುವದಾಗಿ ಮತ್ತು ತನಗೆ ರೌಡಿಶೀಟರ್ ಇದ್ದಿಯ ಅಂತಾ ಪ್ರಚಾರ ಮಾಡಿದ್ದರಿಂದ ಅದರಿಂದ ಮನನೊಂದು ದಿನಾಂಕ: 15-10-2018 ರಂದು ಮದ್ಯಾಹ್ನ 12-0 ಗಂಟೆಗೆ ನಮ್ಮ ಮನೆಯಲ್ಲಿದ್ದ ಯಾವುದೋ 40 ಗುಳಿಗೆಗಳನ್ನು ನುಂಗಿದ್ದು ಅಸ್ವಸ್ಥಗೊಂಡು ಇಲಾಜು ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ  ಮುಂತಾಗಿರುವ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.114/2018, ಕಲಂ. 309 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಪಹರಣ ಪ್ರಕರಣದ ಮಾಹಿತಿ.
ದಿನಾಂಕ.19-02-2019 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ ²æà CA§tÚ vÀAzÉ wªÀÄätÚ ¥ÁwAiÀĪÀgï, 30 ªÀµÀð eÁ-£ÁAiÀÄPÀ, G-PÀÆ° PÉ®¸À, ¸Á-AiÀÄgÀdAw(ªÀįÉèzÉÆrØ) vÁ-°AUÀ¸ÀÄUÀÆgÀÄ ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.17.02.2019 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರನು ತನ್ನ ಹೆಂಡತಿ, ಮಕ್ಕಳಾದ ನವೀನ್ ಕುಮಾರ ಮತ್ತು ರಾಮಕೃಷ್ಣನನ್ನು ಕರೆದುಕೊಂಡು ದೇವದುರ್ಗ ತಾಲೂಕಿನ ವೀರಗೋಟ ಗ್ರಾಮದಲ್ಲಿ ನಡೆಯುವ ಇಷ್ಟಲಿಂಗ ಪೂಜೆಗೆ ಬಂದಿದ್ದು, ದಿನಾಂಕ.18.02.2019 ರಂದು ಬೆಳಿಗ್ಗೆ ಇಷ್ಟಲಿಂಗ ಪೂಜೆಗೆ ತನ್ನ ಸಣ್ಣಮಗ ರಾಮಕೃಷ್ಣನನ್ನು ಕರೆದುಕೊಂಡು ಪೂಜೆಗೆ ಹೋಗಿದ್ದು, ನವೀನ್ ಕುಮಾರನನ್ನು ಗುಡಿಯ ಪಕ್ಕದಲ್ಲಿ ಕೂಡಿಸಿ ಹೋಗಿ ಪೂಜೆ ಮುಗಿಸಿಕೊಂಡು 10-00 ಗಂಟೆಗೆ ಸುಮಾರಿಗೆ  ಬಂದು ನೋಡಲಾಗಿ ಪಿರ್ಯಾದಿದಾರನ ಮಗ ಅಲ್ಲಿರುವದಿಲ್ಲ. ನಂತರ ಮಠದಲ್ಲಿ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಸುತ್ತಮುತ್ತ ಗ್ರಾಮಗಳಲ್ಲಿ ಮತ್ತು ಸಂಬಂದಿಕರಲ್ಲಿ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ಪಿರ್ಯಾದಿದಾರನು ತನ್ನ ಮಗನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿರಬಹುದು, ತನ್ನ ಮಗನನ್ನು ಪತ್ತೆ ಮಾಡಿಕೊಡಿ ಅಂತಾ ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 26/2019 ಕಲಂ:363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.