Thought for the day

One of the toughest things in life is to make things simple:

8 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ;-06/01/2019 ರಂದು ಸಾಯಾಂಕಾಲ 17.30 ಗಂಟೆಗೆ ಪಿರ್ಯಾಧಿದಾರಳು ಸಬ್ಜಮ್ಮ ಗಂಡ ಹುಸೇನ್ ಪೀರಸಾಬ 60 ವರ್ಷ ಜಾ-ಮುಸ್ಲಿಂ ಹೊಲಮನೆ ಕೆಲಸ ಸಾ-ತಿಪ್ಪನಹಟ್ಟಿ ಈಕೆಯು  ಠಾಣೆಗೆ ಹಾಜರಾಗಿ ಗಣಿಕಿಕೃತ ದೂರು ಹಾಜರು ಪಡಿಸಿದ್ದು. ಸಾರಂಶವೇನೆಂದರೇ, ಕಾಣೆಯಾದ ಹುಸೇನ್ ಪೀರಸಾಬ ಈತನು ಪಿರ್ಯಾಧಿ ಗಂಡನಿದ್ದು. 2 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತಿದ್ದು. ಈತನಿಗೆ ಇಬ್ಬರು ಹೆಂಡತಿಯರಿದ್ದು. ಇಬ್ಬರು ಹೆಂಡತಿಯರಿಗೆ ತಲಾ 4 ಎಕರೆ ಜಮೀನು ಕೊಟ್ಟಿದ್ದು. ತನ್ನ ಭಾಗಕ್ಕೆ 3 ಎಕರೆ ಜಮೀನು ಇಟ್ಟುಕೊಂಡಿರುತ್ತಾನೆ. ದಿನಾಂಕ-26/12/2018 ರಂದು ಬೆಳಗ್ಗೆ 10.00 ಗಂಟೆಗೆ ಹುಸೇನ ಪೀರಸಾಬ ಈತನು ಹೊಲಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು. ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು. ಕಾಣೆಯಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಲು ಪತ್ತೆಯಾಗದ ಕಾರಣ ದಿವಸ ದೂರು ಸಲ್ಲಿಸಿದ್ದು.ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತಾ ಇದ್ದ  ದೂರಿನ ಸಾರಾಂಶದ ಮೇಲಿಂದ ಠಾಣಾ ಅಪರಾಧ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 01/2019 .ಕಲಂ'' ಮನುಷ್ಯ  ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಅಲಕ್ಷ್ಯತನದಿಂದ ವಾಹನ ಚಲಾಯಿಸಿದ ಚಾಲಕರ ವಿರುದ್ದ ದಾಖಲಾದ ಪ್ರಕರಣದ ಮಾಹಿತಿ.
ದಿನಾಂಕ;- 06-01-2019 ರಂದು 1300 ಗಂಟೆಗೆ ಅಮರಪ್ಪ ಶಿವಬಲ್ ಪಿಎಸ್ಐ ನಗರ ಸಂಚಾರ ಪೊಲೀಸ್ ಠಾಣೆ ರವರು ವಾಹನ ಮತ್ತು ಆರೋಪಿತನೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ,  ಫಿರ್ಯಾದಿದಾರರು ದಿನಾಂಕ;-06-01-2019 ರಂದು 1245 ಗಂಟೆಗೆ ರಾಯಚೂರು ನಗರದಲ್ಲಿ ಪೆಟ್ರೊಲಿಂಗ್ ಮಾಡುತ್ತಾ ಆರ್.ಟಿ.ಓ ವೃತ್ತದಲ್ಲಿ  ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ,ಆರೋಪಿ ರವಿಕುಮಾರ ತಂದೆ ನರಸಿಂಹಲು ,ವಯ 22 ವರ್ಷ, ಜಾ: ಯಾದವ,: ಟಿಪ್ಪರ್ ಚಾಲಕ,ಸಾ|| ಪಂಚಲಿಂಗಲು,ತಾ||ಮಕ್ತಲ್ ಜಿ||ಮೆಹಬೂಬ್ ನಗರ (ಆಂದ್ರಪ್ರದೇಶ) ತನು ASHOK LEYLAND TIPPER NO. KA35A6141 ನೇದ್ದನ್ನು ಯರಗೇರಾ ಕಡೆಯಿಂದ ಜೆ.ಜೆ. ವೃತ್ತದ ಕಡೆಗೆ ಹೋಗುವಾಗ ಚಾಲನ ಪತ್ರವಿಲ್ಲದೆ ಮತ್ತು  ಹಿಂದುಗಡೆ ನಂಬರ್ ಪ್ಲೇಟ್ ಇಲ್ಲದ ಟಿಪ್ಪರನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸುತ್ತಿದ್ದರಿಂದ ಈ  ಚಾಲಕನು ಯಾರಿಗಾದರೂ ಅಪಘಾತ ಮಾಡಬಹುದು ಅಂತಾ ತಿಳಿದು ವಾಹನವನ್ನು  ತಡೆದು   ನಿಲ್ಲಿಸಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ  ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ 02/2019 ಕಲಂ 279, 336  IPC  & 177, 3(1) ಸಹಿತ  181 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 06-01-2019 ರಂದು ಬೆಳಿಗ್ಗೆ 6-15 ಗಂಟೆ ಸಮಯದಲ್ಲಿ ಕರ್ನೂಲ್ ಕ್ರಾಸ  ಹತ್ತಿರ ಫೀರ್ಯಾದಿದಾರರು ²æà ಜಗದೀಶ ಕೆ.ಪಿ ಪಿ.ಎಸ್.ಐ  AiÀÄgÀUÉÃgÁ oÁuÉ ರವರು ಮತ್ತು ಸಿಬ್ಬಂದಿಯವರಾದ ಪಿ,ಸಿ-549  ರವರೊಂದಿಗೆ  ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ  ಕರ್ನೂಲ್ ಕಡೆಯಿಂದ  ಒಬ್ಬನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾಗ , ಕರ್ನೂಲ್ ಕ್ರಾಸ ಹತ್ತಿರ ಇದನ್ನು ತುರ್ತಾಗಿ ಕೈ ಮಾಡಿ ನಿಲ್ಲಿಸಿ ಚಾಲಕನಿಗೆ ವಿಚಾರಣೆ ಮಾಡಲು ಅವನು ತನ್ನ ಹೆಸರು ಭೀರಪ್ಪ ತಂದೆ ಹುಲಿಗಣ್ಣ 25 ವರ್ಷ ಜಾ:ಕುರಬರು  ಸಾ:ರಾಜೋಳ್ಳಿ ತಾ: ಮಾನ್ವಿ ಜಿ:ರಾಯಚೂರು ಅಂತಾ ತಿಳಿಸಿದ್ದು, ಆಟೋವನ್ನು ಪರಿಶಿಲಿಸಲು  ಆಟೋ ಅಪ್ಪೆ ನಂ ಕೆ.ಎ-36 ಬಿ-5288 ಇರುತ್ತದೆ. ಇವನ ವಿರುದ್ದ ಕಾನೂನು ಕ್ರಮಜರುಗಿಸಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಯರಗೇರ ಪೊಲೀಸ್ ಠಾಣಾ ಗುನ್ನೆ ನಂ 01/2019 ಕಲಂ:-279, 336 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 06-01-2019 ರಂದು 01-00 .ಎಮ್ ದಿಂದ 2-00 .ಎಮ್ ಅವದಿಯಲ್ಲಿ 4 ಜನ ಕಳ್ಳರು ಯರಗೇರಾ ಗ್ರಾಮದ ಪುಚ್ಚಲದಿನ್ನಿ ರಸ್ತೆಯಲ್ಲಿರುವ ಕೆ.ಮಾನರಡ್ಡಿ ರವರ ಮಳಿಗೆಯ ಸೆಟರ್ ಕೀಲಿಯನ್ನು ರಾಡಿನಿಂದ ಮೀಟಿ ಒಳಗೆ ಹೊಗಿ ಟ್ರಜರಿ ಸಹಾ ರಾಡಿನಿಂದ ಮೀಟಿ ತೆಗೆದು ಕಪಾಟಿನಲ್ಲಿಟ್ಟಿದ್ದ ಸುಮಾರು 6,000/- ಕಿಮ್ಮತ್ತಿನ 150 ಗ್ರಾಮ ಬೆಳ್ಳಿಯ ತಾಯತ, ಕುದರೆ,ತೊಟ್ಟಲ, ಸಣ್ಣ ಬೆಳ್ಳಿ ಉಂಗರ ಇವುಗಳನ್ನು ಕಳವು ಮಾಡಿಕೊಂಡು ಹೊಗಿದ್ದು, ಕಳುವಾದ ಬೆಳ್ಳಿಯ ಸಾಮಾನುಗಳನ್ನು ಮತ್ತು ಕಳ್ಳರನ್ನು ಪತ್ತೆ ಹಚ್ಚಿ ಕೊಡಲು ವಿನಂತಿ.ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 02/2019 ಕಲಂ 457.380 .ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುರ್ತಾರೆ.
ದಿನಾಂಕ 07/01/19 ರಂದು  ಬೆಳಿಗ್ಗೆ 09.0 ಗಂಟೆಗೆ ಫಿರ್ಯಾದಿ ಸೈಯದ್ ಇಸ್ಮಾಯಿಲ್  ತಂದೆ  ಸೈಯದ್  ಮಹಿಬೂಬ್. ಮುಸ್ಲಿಂ, 23 ವರ್ಷ, ಸೈಯದ್ ಕಂಪ್ಯೂಟರ್  & ಝಿರಾಕ್ಷ ಸೆಂಟರ್  ಮಾಲಿಕ  ಸಾ: ಇಸ್ಲಾಂ ನಗರ  ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು  ಮಾನವಿ ನಗರದ  ಬಸವ  ವೃತ್ತದ ಹತ್ತಿರ  ಇರುವ ತೋಟಗಾರಿಕೆ ಇಲಾಖೆ ಆಫೀಸಿನ ಮುಂದೆ ಕಂಪೌಂಡಿಗೆ ಹೊಂದಿಕೊಂಡು ಸೈಯದ್ ಕಂಪ್ಯೂಟರ್  & ಝಿರಾಕ್ಷ ಸೆಂಟರ್ ಮಾನವಿ ಹೆಸರಿನಲ್ಲಿ  ಒಂದು ಡಬ್ಬಿ ಅಂಗಡಿಯನ್ನು ಇಟ್ಟುಕೊಂಡು ಜಾಬ್ ವರ್ಕ್ಷ , ಇಂಟರನೆಟ್ ವರ್ಕ್ಸ ಹಾಗೂ ಝಿರಾಕ್ಷ  ಮಾಡಿಕೊಂಡಿರುತ್ತಾನೆ. ಎಂದಿನಂತೆ  ದಿನಾಂಕ  3/01/19  ರಂದು  ಕೆಲಸ ಹೆಚ್ಚು ಇದ್ದ ಕಾರಣ ಸಾಯಂಕಾಲ 7.30 ಗಂಟೆಗೆ ಫಿರ್ಯಾದಿ ಅಂಗಡಿ ಪತ್ತವನ್ನು  ಹಾಕಿಕೊಂಡು ಮನೆಗೆ ಹೋಗಿ ಮರುದಿವಸ ದಿನಾಂಕ 04/01/19  ಬೆಳಿಗ್ಗೆ 9.30 ಗಂಟೆಗೆ  ಅಂಗಡಿಗೆ ಬಂದಾಗ ಫಿರ್ಯಾದಿಯ ಕಂಪ್ಯೂಟರ್  & ಝಿರಾಕ್ಷ  ಡಬ್ಬಿ ಅಂಗಡಿಯ ಪತ್ತ  ಮುರಿದಿದ್ದು  ಕಂಡು ಬಂದಿದ್ದ ಆಗ ಫಿರ್ಯಾದಿಯು  ಗಾಭರಿಗೊಂಡು ತನ್ನ ಅಂಗಡಿಯ ಬಾಗಿಲನ್ನು ತೆರೆದು ನೋಡಲು  ಒಳಗೆ ಕಂಪ್ಯೂಟರ್  ಮತ್ತು ಝಿರಾಕ್ಷ ಮಷಿನ್ ಇರಲಿಲ್ಲ.. ಕಾರಣ ಯಾರೋ ತನ್ನ  ಅಂಗಡಿಯ ಬಾಗಿಲಿಗೆ ಹಾಕಿದ ಪತ್ತವನ್ನು ಮುರಿದು ಒಳಗಡೆ ಪ್ರವೇಶ ಮಾಡಿ  ಅಂಗಡಿಯಲ್ಲಿದ್ದ ಅಸೆಂಬಲ್ಡ  (ಲೋಕಲ್ ಕಂಪನಿಯ ಸಾಮಾನುಗಳನ್ನು ಖರೀದಿಸಿ ಜೋಡಿಸಿದ) ಕಂಪ್ಯೂಟರ್  ( ಸಿ.ಪಿ.ಯು. ಮಾನಿಟರ್, ಮೌಸ್, ಇಂಟನೆಟ್ ಮೋಡಮ್ ಹಾಗೂ ಕೀ ಬೋರ್ಡ ) ನ್ನು ಅಂ.ಕಿ 10000/- ರೂ  ಮತ್ತು Konica Minolta Bizhub 26MFP  ಕಂಪನಿಯ ಝಿರಾಕ್ಷ ಮಷಿನ್ ಅಂ.ಕಿ ರೂ 45,000/- ರೂ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಕಂಡು ಬಂದಿದ್ದು ಕಾರಣ ಕಳ್ಳತನಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ  ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 4/2019  ಕಲಂ 457,380 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು   ಕೈ ಕೊಂಡಿರುತ್ತಾರೆ.
gÉÊvÀ DvÀä ºÀvÉå ಪ್ರಕರಣ ಮಾಹಿತಿ.
ದಿನಾಂಕ:06.01.2019 ರಂದು ರಾತ್ರಿ 10.15 ಗಂಟೆಗೆ ಹೆಚ್.ಜಿ-604 ರವರು ಠಾಣೆಗೆ ಹಾಜರಾಗಿ .ಎಸ್. (ಬಿ) ರವರು ಲಿಂಗಸಗೂರು ಸರಕಾರಿ ಆಸ್ಪತ್ರೆಯಲ್ಲಿ ºÀA¥ÀªÀÄä UÀAqÀ °AUÀ£ÀUËqÀ ªÀiÁ°Ã ¥ÁnÃ¯ï ªÀAiÀĸÀÄì:40 ªÀµÀð eÁ: °AUÁAiÀÄvï G: ºÉÆ® ªÀÄ£É PÉ®¸À ¸Á: PÁZÁ¥ÀÆgÀÄ UÁæªÀÄ  ಈವರು ನೀಡಿದ ದೂರನ್ನು ಸ್ವಿಕರಿಸಿಕೊಂಡ ಮುಂದಿನ ಕ್ರಮಕ್ಕಾಗಿ ಕಳುಹಿಸಿದ್ದು, ಅದರ ಸಾರಾಂಶವೇನೆಂದರೆ,  ಮೃತ ಲಿಂಗನಗೌಡ ಇತನದು ಕಾಚಾಪೂರು ಸೀಮಾ ಸರ್ವೆ ನಂ. 34 ರಲ್ಲಿ  08 ಎಕರೆ 34 ಗುಂಟೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ವಿಜಯ ಬ್ಯಾಂಕ ಲಿಂಗಸಗೂರುದಲ್ಲಿ ರೂ.80000/- ಗಳ ಬೆಳೆ ಸಾಲವನ್ನು ಮಾಡಿದ್ದು ಇರುತ್ತದೆ. ಸದರಿ ಬೆಳೆ ಸಾಲವನ್ನು ಇಲ್ಲಿಯವರೆಗೆ ತೀರಿಸಲಾಗದೇ ಸಾಲದ ಚಿಂತೆಯಲ್ಲಿ ಇರುತ್ತಿದ್ದು ಮತ್ತು ವರ್ಷವು ಮಳೆಯು ಸರಿಯಾಗಿ ಆಗದ ಕಾರಣ ಹೊಲದಲ್ಲಿ ಬೆಳೆಯು ಬರದೆ ಇರುವುದರಿಂದ ಬೆಳೆಯು ನಷ್ಟವಾಗಿದ್ದರಿಂದ ಬ್ಯಾಂಕಿನ ಸಾಲವನ್ನು ಹೇಗೆ ತಿರಿಸೋದು ಅಂತಾ ಚಿಂತೆಯಲ್ಲಿಯೇ ಇರುತ್ತಿದ್ದನು. ಸಾಲ ತಿರಿಸಲಾಗದೇ ಮತ್ತು ಬೆಳೆ ನಷ್ಟವಾಗಿದ್ದರಿಂದ ಜೀವನದಲ್ಲಿ ಮನನೊಂದು ಇಂದು ದಿನಾಂಕ:06.01.2019 ರಂದು ಸಂಜೆ 6.30 ಗಂಟೆಗೆ ಕಾಚಾಪೂರು ಗ್ರಾಮದ  ತನ್ನ ಮನೆಯಲ್ಲಿ ದೋತರದಿಂದ ನೇಣು ಹಾಕಿಕೊಂಡಿದ್ದು ಅದನ್ನು ನೋಡಿದ ಮೃತನ ಅಣ್ಣ ದೇವನಗೌಡ ಮತ್ತು ಫಿರ್ಯಾದಿ ಕೂಡಿ ಮೃತನನ್ನು ಕೆಳಗಡೆ ಇಳಿಸಿದಾಗ ಇನ್ನು ಜೀವವಿದ್ದರಿಂದ ಚಿಕಿತ್ಸೆಗಾಗಿ ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ತಂದಾಗ ದಿನಾಂಕ:06.01.2019 ರಂದು ರಾತ್ರಿ 7.15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನು ವಿಜಯಾ ಬ್ಯಾಂಕಿನಲ್ಲಿ ಬೆಳೆ ಸಾಲ ಮಾಡಿದ್ದರಿಂದ ಅದನ್ನು ಕಟ್ಟಲಾಗದೇ ಮತ್ತು ಬೆಳೆ ನಷ್ಟದಿಂದ ಜೀವನದಲ್ಲಿ ಮನನೊಂದಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಯು.ಡಿ.ಆರ್. ನಂಬರ 01/2019 PÀ®A 174 ¹,Dgï,¦,¹  (gÉÊvÀ DvÀä ºÀvÉå) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.