Thought for the day

One of the toughest things in life is to make things simple:

14 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
:: ¥ÀwæPÁ ¥ÀæPÀluÉ ::
ದಿನಾಂಕ: 12-11-2018 ರಂದು 10-15 ಪಿ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ,  ಮೃತ ವ್ಯಕ್ತಿಯು ಅನಾಮದೇಯ ಅಂದಾಜು 60-65 ವರ್ಷದ ಗಂಡಸು ಇದ್ದು, ಈತನು ದಿನಾಂಕ: 10-11-2018 ರಂದು ರಾತ್ರಿ ಮದ್ಯ ಸೇವನೆ ಮಾಡಿ, ಆಹಾರ, ನೀರು ಇಲ್ಲದೇ ಪಿರ್ಯಾದಿಯ ತುರುವಿಹಾಳ ಸೀಮಾದ ಗಿರಿಮಲ್ಲಯ್ಯ ರವರ ಹೊಲದ ಬದುವಿಗೆ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕೆನಾಲ ಎಡಭಾಗದ ರಸ್ತೆಯ ಮೇಲೆ ಮಲಗಿಕೊಂಡು, ದಿನಾಂಕ: 11-11-2018 ರಂದು ಮದ್ಯಾಹ್ನ ತೀವ್ರ ಅಸ್ವಸ್ಥಗೊಂಡಿದ್ದನ್ನು ಪಿರ್ಯಾದಿ ತಮ್ಮ ಹೊಲಕ್ಕೆ ಹೋಗುವಾಗ ಗಮನಿಸಿ 108 ಆಂಬುಲೆನ್ಸ್  ಗೆ ಫೋನ್ ಮಾಡಿ ಮೃತನಿಗೆ ಆಂಬುಲೆನ್ಸ್ ನಲ್ಲಿ ಚಿಕಿತ್ಸೆ ಕುರಿತು ಕಳುಹಿಸಿಕೊಟ್ಟಿದ್ದು, ಮೃತನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ 2-30 ಪಿ.ಎಂಕ್ಕೆ ಸೇರಿಕೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:11-11-2018 ರಂದು ಸಂಜೆ 5-30 ಪಿ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದುದರಿಂದ ಮೃತ ದೇಹವನ್ನು ಶವಗಾರದಲ್ಲಿ ಆತನ ವಾರಸುದಾರರ ಪತ್ತೆ ಕುರಿತು ಕಾಯ್ದಿರಿಸಿದ್ದು, ಇಲ್ಲಿಯವರೆಗೆ ಮೃತನ ವಾರಸುದಾರರ ಪತ್ತೆಯಾಗಿರುವುದಿಲ್ಲಾ, ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಸಲ್ಲಿಸಿದ್ದು ಇದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ.19/2018 ಕಲಂ. 174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.
ಮೃತನ ಚಹರೆ ಪಟ್ಟಿ ಕೆಳಗಿನಂತಿರುತ್ತದೆ.
ಎತ್ತರ- 168 ಸೆಂ.ಮೀ, ಸಾದಾ ಕೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು, ಬಿಳುಪು ಅರ್ಧ ಇಂಚು ಕೂದಲು, ಮೃತನ ಚರ್ಮ ಒಣಗಿದಂತೆ ಹಾಗೂ ಸುಕ್ಕುಗಟ್ಟಿದಂತೆ ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ಜುಬ್ಬಾ ಶರ್ಟ, ಬನಿಯನ್ ಹಾಗೂ ದೋತಿ  ಧರಿಸಿರುತ್ತಾನೆ.

     ಮೇಲ್ಕಂಡ ಅನಾಮದೇಯ ಗಂಡಸಿನ ಭಾವಚಿತ್ರ ಹಾಗೂ ಚಹರೆಪಟ್ಟಿಯನ್ನು ಸ್ಥಳೀಯ ಹಾಗೂ ರಾಜ್ಯಮಟ್ಟದ ಕನ್ನಡ ಹಾಗೂ ಆಂಗ್ಲ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಿಡೀಯಾ ಗಳಲ್ಲಿ ಪ್ರಕಟಿಸಿ ಮೃತನ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಪಿ.ಎಸ್. ತುರುವಿಹಾಳ ಪೊಲೀಸ್ ಠಾಣೆ-  9480803864 , 08535-244233. turvihalrcr@ksp.gov.in
ಸಿಪಿಐ ಸಿಂಧನೂರು ವೃತ್ತ - 9480803836,  cpisindhanoor@gmail.com
ರಾಯಚೂರು ಜಿಲ್ಲಾ ನಿಸ್ತಂತು ಕೊಠಡಿ- 08532-235635, 9480803800, dcrcr@ksp.gov.in
-    - - - - - - - - - - - - - - - - - - - - - - - - - - - - - - - - - - - - - - - - -

ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿ.13.11.2018 ರಂದು ಮದ್ಯಾಹ್ನ 12-15 ಗಂಟೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ರವರು ಮರಳು ತುಂಬಿದ ಟ್ರಾಕ್ಟರ್ ದಾಳಿಯಿಂದ ಮರಳಿ ಠಾಣೆಗೆ ಬಂದು ಮರಳು ತುಂಬಿದ 1).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರಾ ಕಂಪನಿಯ 575 DI. ಟ್ರಾಕ್ಟರ್ ಇಂಜೀನ್  ನಂ.NABO3692CB ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಟ್ರಾಲಿ ಚೆಸ್ಸೀಸ್ ನಂ.97-06  ನೇದ್ದರ ಚಾಲಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. 2).ಕೆಂಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರಾ ಕಂಪನಿಯ 575 DI.ಟ್ರಾಕ್ಟರ್ ಇಂಜೀನ್ ನಂ.NABO3692CB ಇದಕ್ಕೆ ಅಳವಡಿಸಿದ ನಂಬರ್ ಪ್ಲೇಟ್ ಇಲ್ಲದ ಕೆಂಪು ಬಣ್ಣದ ಟ್ರಾಲಿ ಚೆಸ್ಸೀಸ್ ನಂ.97-06 ನೇದ್ದರ ಮಾಲಿಕ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾ. ಎರಡು ಟ್ರಾಕ್ಟರನ್ನು ಜಪ್ತಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದು ಸಾರಾಂಶವೇನೆಂದರೆ, ಮೇಲ್ಕಂಡ ಆರೋಪಿತನು ತನ್ನ ಟ್ರಾಕ್ಟರದಲ್ಲಿ ಕಲ್ಲೂರು ಹಳ್ಳದಿಂದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ರಾಯಲ್ಟಿ ತುಂಬದೆ, ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಪಗಡದಿನ್ನಿ ಕ್ಯಾಂಪಿನ ಕಡೆಗೆ ಹೋಗುತ್ತಿರುವ ಬಗ್ಗೆ ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ಪಗಡದಿನ್ನಿ ಪೈಕ್ಯಾಂಪಿನಲ್ಲಿ ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಗಂಟೆಗೆ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ.ದಾಳಿಯ ಕಾಲಕ್ಕೆ ಟ್ರಾಕ್ಟರ್ ಚಾಲಕನು ತಪ್ಪಿಸಿಕೊಂಡು ಹೋಗಿರುತ್ತಾನೆ ಚಾಲಕನು ತಮ್ಮ ಮಾಲಿಕನು ತಿಳಿಸಿದಂತೆ ಸರಕಾರದ ಸ್ವತ್ತಾದ ಮರಳನ್ನು ಅನಧಿಕೃತವಾಗಿ ಮತ್ತು ಕಳ್ಳತನದಿಂದ ಟ್ರಾಕ್ಟರದಲ್ಲಿ ತುಂಬಿಕೊಂಡು ಹೋಗುತ್ತಿರುವುದು ದೃಢಪಟ್ಟಿದ್ದರಿಂದ ಜಪ್ತಿ ಮಾಡಿಕೊಂಡು ಬಂದಿರುತ್ತದೆ ಅಂತಾ ಮುಂತಾಗಿ ಹಾಜರಪಡಿಸಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾನೆ ಗುನ್ನೆ ನಂ. 257/2018.  ಕಲಂ. 379  ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

ದಿನಾಂಕ 13/11/18 ರಂದು ಬೆಳಿಗ್ಗೆ 11-15 ಗಂಟೆಗೆ  ಜಿ, ಚಂದ್ರಶೇಖರ್. ಸಿ.ಪಿ.ಐ ಮಾನವಿ ವೃತ್ತ ರವರು & ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ   ವಾಪಾಸ ಬಂದು ತಮ್ಮ ವರದಿಯೊಂದನ್ನ ತಯಾರಿಸಿ ಬೆಳಿಗ್ಗೆ 11-30 ಗಂಟೆಗೆ  ಸ್ಪಂಜ್ ಐರನ್ ಲೋಡ್ ಮಾಡಿದ ಒಂದು ಲಾರಿ ಮತ್ತು ಆರೋಪಿತನನ್ನು ನೀಡಿ ಸದರಿ ಲಾರಿ  ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಹಾಗೂ ಪಂಚನಾಮೆ ಸಾರಾಂಶವೇನೆಂದರೆ, ಇಂದು ದಿನಾಂಕ 13/11/18 ರಂದು ಬೆಳಿಗ್ಗೆ 09.15 ಗಂಟೆಗೆ ಸರಕಾರಿ ಜೀಪ್ ನಂ ಕೆ..36/ಜಿ-384 ರಲ್ಲಿ ಚಾಲಕ ಈಶಪ್ಪ ಎ.ಹೆಚ್.ಸಿ. 84 ರವರಿಗೆ ಕರೆದುಕೊಂಡು ಹೊರಟು ಮಾನವಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ  ಬೆಳಿಗ್ಗೆ 10.00 ಗಂಟೆಗೆ ಮಾನವಿ - ರಾಯಚೂರ ರಸ್ತೆ ಹಿಡಿದು ಹೊರಟಾಗ ಮಾನವಿಯ  ತಿರುಮಲ ಹೋಂಡಾ ಶೋ ರೂಮ್ ಮುಂದಿನ ರಸ್ತೆಯಲ್ಲಿ  ಲಾರಿ ನಂ  AP28 TC-9649 ನೇದ್ದರ ಚಾಲಕನು  ರಸ್ತೆಗೆ ಅಡತಡೆಯಾಗುವ ರೀತಿಯಲ್ಲಿ   ತನ್ನ ಲಾರಿಯನ್ನು ನಿಲ್ಲಿಸಿಕೊಂಡು ನಿಂತಿದ್ದು  ನೋಡಿ ನಮ್ಮ ಜೀಪನ್ನು ನಿಲ್ಲಿಸಿ ನೋಡಲು ಸದರಿ ಲಾರಿಯ ಚಾಲಕನು ತನ್ನ ಲಾರಿಯಲ್ಲಿ  ಸ್ಪಂಜ್ ಐರನ್ ಲೋಡ್ ಮಾಡಿದ್ದು  ಕಂಡು ಬಂದಿದ್ದು. ಅದರ  ಚಾಲಕನು ಸಹ  ಅಲ್ಲಿಯೇ  ನಿಂತಿದ್ದನು. ಕೂಡಲೇ ಪಂಚರನ್ನು  ಬರಮಾಡಿಕೊಂಡು ಅವರ  ಸಮಕ್ಷಮದಲ್ಲಿ  ಸ್ಪಂಜ್ ಐರನ್ ಲೋಡ್ ಮಾಡಿದ ಲಾರಿಯನ್ನು ಪರಿಶೀಲಿಸಿ  ಅಲ್ಲಿಯೇ ಇದ್ದು ಅದರ ಚಾಲಕನ ಹೆಸರನ್ನು ಕೇಳಾಗಿ ಸದರಿಯವನು ತನ್ನ ಹೆಸರು ಆಂಜಿನೇಯಲು ತಂದೆ ಗಂಗಪ್ಪ , 35 ವರ್ಷಜಾತಿಃ ಮುನ್ನೂರ್ಲಾರಿ ನಂ  AP28 TC-9649 ನೇದ್ದರ ಚಾಲಕ ಸಾ: ಮುನ್ನೂರು ಓಣೆ ಕೊಸಗಿ  ತಾಃ ಕೊಡಂಗಲ್ ಜಿಲ್ಲಾ: ಮಹಿಬೂಬ್ ನಗರ (ಟಿ.ಎಸ್) ಅಂತಾ ತಿಳಿಸಿದ್ದು ಕಾರಣ  ರಸ್ತೆಗೆ ಅಡತಡೆಯಾಗುವ ರೀತಿಯಲ್ಲಿ  ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡಿದ ಸದರಿ ಲಾರಿ ಚಾಲಕ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಂಚನಾಮೆ ಮತ್ತು ವರದಿಯ ಸಾರಾಂಶದ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 331/18 ಕಲಂ 283 .ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಪ್ರಕರಣದ ಮಾಹಿತಿ.
ದಿನಾಂಕಃ 13-11-2018 ರಂದು  ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿ ಮಹ್ಮದ್ ಅಲ್ತಾಫ್ ತಂದೆ ಮಹ್ಮದ್ ಮಹೆಬೂಬ್ ವಯ 27 ವರ್ಷ, ಜಾತಿಃ ನಧಾಫ್ (ಪಿಂಜಾರ್ ) ಉಃ ಗಾದಿ ಮಾಡುವ ಕೆಲಸ ಸಾಃ ಅಂದ್ರೂನಖಿಲ್ಲಾ ರಾಯಚೂರು ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಯಂತ್ರದಲ್ಲಿ  ಬೆರಳಚ್ಚು ಮಾಡಿದ  ದೂರನ್ನು ಸಲ್ಲಿಸಿದ್ದು  ಸಾರಾಂಶವೆನೆಂದರೆ ದಿನಾಂಕಃ 12-11-2018 ರಂದು ಪ್ರತಿದಿನದಂತೆ  ಬೆಳಿಗ್ಗೆ 6.00 ಗಂಟೆಗೆ ನಮ್ಮ ತಂದೆ ಮಹ್ಮದ್ ಮಹೆಬೂಬ್ ಇವರು ನಮ್ಮ ಗಾದಿ ಅಂಗಡಿಗೆ ಹೋಗಿ ಅಂಗಡಿಯನ್ನು ತೆರೆದು ಕೆಲಸ ಪ್ರಾರಂಭಮಾಡಿದೆವು. ಅಂಗಡಿಯಲ್ಲಿ 1) ದಾನೀಶ 2) ಬಾಬು 3)ಹುಸೇನ್ 4) ಯಾಶಿ 5) ಅಕ್ಬರ್  ಇವರು ಗಾದಿ ಮಾಡುವ ಕೆಲಸ ಮಾಡಿಕೊಂಡಿದ್ದರು . ನಾನು ಬೆಳಿಗ್ಗೆ 10.00 ಗಂಟೆಗೆ  ನನ್ನ ಅಂಗಡಿಗೆ ಹೋಗಿ ಕೆಲಸವನ್ನು ಮಾಡುತ್ತಿರುವಾಗ ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ  ವಿದ್ಯುತ್ ವೈರ್ ನಲ್ಲಿ ಶ್ಯಾಟ್ ಸರ್ಕ್ಯೂಟ್ ಆಗಿ ಬೆಂಕಿ ಕಿಡಿಗಳು ಕೆಲಸ ಮಾಡುತ್ತಿರುವ ಕಾಟನ್ ಹತ್ತಿ ಮೇಲೆ ಬಿದ್ದು  ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು  ಅಂಗಡಿಯಲ್ಲಿದ್ದ ನಾವೆಲ್ಲರೂ ಬೆಂಕಿಯನ್ನು ಆರಿಸಲು ಪ್ರಯತ್ನ ಮಾಡಿದರೂ ಸಹಾ ಬೆಂಕಿ ಜಾಸ್ತಿಯಾಗಿದ್ದರಿಂದ ಅಗ್ನಿಶಾಮಕ ದಳಕ್ಕೆ ಮೊಬೈಲ್ ಫೋನ್ ಮೂಲಕ ನಾನು ತಿಳಿಸಿದ್ದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಸಾಯಂಕಾಲದ ವರೆಗೆ ಆರಿಸಿದರು ನಮ್ಮ ತಂದೆಯವರಿಗೆ  ಬೆಂಕಿ ಅಪಘಾತದಲ್ಲಿ ಎಲ್ಲಾ ಯಂತ್ರಗಳು ಸುಟ್ಟು ಹೋಗಿದ್ದರಿಂದ ಗಾಬರಿಗೊಂಡು ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿಕೊಂಡು  ತಡವಾಗಿ ಬಂದು ತನ್ನ ವರ್ಕ್  ಶಾಪ್ ಸುಟ್ಟು 1) ಕಾಟನ್ ವೇಸ್ಟ್ ಚಿಂದಿ 35 ಟನ್ .ಕಿ 15,75,000/- 2)  ಮ್ಯಾಟರ್ಸ್ ರಾ-ಮೆಟೆರೀಯಲ್  .ಕಿ  2,00,000/- 3) ಟಿನ್ ಶೆಡ್ಡ್  ಸುಟ್ಟು ಹೋಗಿದ್ದು  ,ಕಿ  3,50,000/- 4) ತೂಕ ಮಾಡುವ ಸಾಮಾನುಗಳು  .ಕಿ     50,000/-  5) ಅಶೋಕ್ ಲೆ-ಲ್ಯಾಂಡ್ ದೋಸ್ಟ್ ಗೂಡ್ಸ್ ವಾಹನ ಸುಟ್ಟಿದ್ದು .ಕಿ     20,000/-  ಒಟ್ಟು - 21,95,000/- ಮೇಲಿನಂತೆ ಲುಕ್ಸ್ ನಾಗಿದ್ದು  ಮುಂದಿನಕ್ರಮ ಜರುಗಿಸಿ ಸರ್ಕಾದಿಂದ  ಪರಿಹಾರ ಒದಗಿಸಲು ಇದ್ದ ದೂರಿನ ಸಾರಾಂಶಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಎಫ್. ನಂ 1/2018 ಕಲಂ ಆಕಸ್ಮಿಕ ಬೆಂಕಿ ಅಪಘಾತದ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ. ]