Thought for the day

One of the toughest things in life is to make things simple:

27 Oct 2018

Reported Crimes




ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 26.10.2018 ರಂದು 12-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪ್ರಶಾಂತ ನಗರದಲ್ಲಿರುವ ನೀರಿನ ಟ್ಯಾಂಕ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಶ್ರೀ ಮಂಜುನಾಥ. ಎಸ್ ಪಿ.ಎಸ್.(ಕಾ.ಸು), ಸಿಂಧನೂರು ನಗರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು 05 ಜನ ಆರೋಪಿತರು  ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 6630/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 132/2018, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ : 25-10-2018 ರಂದು 7-00 ಪಿ.ಎಂ ಕ್ಕೆ ದುರ್ಗಾಕ್ಯಾಂಪಿನ ಕೆನಾಲ್  ರಸ್ತೆಯಲ್ಲಿ ಆರೋಪಿ ±ÀAPÀgÀ¥Àà vÀAzÉ wgÀÄ¥ÀvÉ¥Àà, ªÀAiÀÄ-45, eÁ: F½UÉÃgï, G:ªÀÄmÁÌ¥ÀnÖ §gÉAiÀÄĪÀÅzÀÄ, ¸Á: zÀÄUÁðPÁåA¥ï, vÁ:¹AzsÀ£ÀÆgÀ ಈತನು ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದಾಗ ಠಾಣಾ ಪ್ರಭಾರದಲ್ಲಿರುವ .ಎಸ್. (ಹೆಚ್) ರವರು, ಬೀಟ್ ಪಿಸಿ 460 ರವರ ಖಚಿತ ಭಾತ್ಮಿ ಮೇರೆಗೆ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪ್ರೋ.ಪಿ.ಎಸ್. ಕು.ಶೀಲಾ ಹಾಗೂ ಪಿಸಿ-460, ಪಿಸಿ-679 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿನಿಗೆ ವಶಕ್ಕೆ ತೆಗೆದುಕೊಂಡು ಅವನ ವಶದಲ್ಲಿದ್ದ ನಗದು ಹಣ ರೂ. 610 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ನಂತರ ಅವನು ಬರೆದ ಮಟ್ಕಾಪಟ್ಟಿಯನ್ನು ಆರೋಪಿ ನಂ. 2 ¤gÀÄ¥Á¢ £ÁAiÀÄPÀ, ¸Á:ªÉÄʯÁ¥ÀÄgÀ vÁ:UÀAUÁªÀw ನೇದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದರಿಂದ, ಆರೋಪಿತನೊಂದಿಗೆ 8-30 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 33/2018 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಂದ ಪರವಾನಿಗೆ ಪಡೆದು ಇಂದು ದಿನಾಂಕ: 26-10-2018 ರಂದು 6-30 Pm ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರ್ವಿಹಾಳ ಠಾಣೆ ಗುನ್ನೆ ನಂ. 256/2018 ಕಲಂ             78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ .26-10-2018 ರಂದು ಮುಂಜಾನೆ 09-45 ಗಂಟೆಗೆ ಆರೋಪಿ ಹೋಟೆಲ್ ವೆಂಕಟೇಶ ತಂದೆ ಆಂಜನೇಯ್ಯ ಜಾತಿ-ಯಾದವ, ವಯ-38 ವರ್ಷ,   ಉ-ವ್ಯವಸಾಯ, ಸಾ:ನೀಲಗಲಕ್ಯಾಂಪ್  ಈತನು ನೀಲಗಲ ಕ್ಯಾಂಪದಲ್ಲಿ ಶ್ರೀರಾಮ ದೇವಸ್ಥಾನದ ಹತ್ತಿರ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಕಂಡು ಪಿರ್ಯಾದಿ ಶ್ರೀ ರಾಮಜೀ ಎ.ಎಸ್.ಐ.ಸಿರವಾರ ಪೊಲೀಸ್ ಠಾಣೆ ಹಾಗೂ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿದಾಗ ಮಟಕಾ ನಂಬರ ಬರೆಸಲು ಬಂದವರು ಮತ್ತು ಆರೋಪಿ ನಂ.2 ಶಾಂತಯ್ಯಸ್ವಾಮಿ ಸಾ:ನೀಲಗಲ್ ರವರು ಓಡಿ ಹೋಗಿದ್ದು ಆರೋಪಿ ನಂ.1 ರವರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದಿರುವ ಆರೋಪಿತನ ವಶದಿಂದ ಮಟಕಾ ಜೂಜಾಟದ ಹಣ ರೂ.1.820/-ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಹಾಗೂ ಒಂದು ಪೆನ್ನನ್ನು ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಪೂರೈಸಿಕೊಂಡು ಸಿಕ್ಕುಬಿದ್ದ  ಆರೋಪಿತನೊಂದಿಗೆ ಮುಂಜಾನೆ 11-15ಗಂಟೆಗೆ ಠಾಣೆಗೆ ಬಂದು ಮಟಕಾ ಜೂಜಾಟದ ಸಲಕರಣೆಗಳನ್ನು ಮುಂದಿನ ಕ್ರಮಕ್ಕಾಗಿ ತಮ್ಮ ವರದಿಯೊಂದಿಗೆ ಕೊಟ್ಟಿದ್ದು ಅದನ್ನು ಸ್ವೀಕರಿಸಿ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 221/2018 ಕಲಂ: 78[iii] .ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:26.10.2018 ರಂದು 1700 ಗಂಟೆಯ ಸುಮಾರಿಗೆ ಕಲಮಲ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ಗ್ರಾಮೀಣ ರಾಯಚೂರು. ರವರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸದರಿ ಆರೋಪಿ ಅಫಜಲ್ ಸಾಬ್ ತಂ: ಬಾಬಾಸಾಬ್ ವಯ:60 ವರ್ಷ, ಜಾ:ಮುಸ್ಲಿಂ, ಉ: ಒಕ್ಕಲುತನ, ಸಾ: ಕಲಮಲ ತಾ: ಜಿ: ರಾಯಚೂರು ಈತನು ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ 1730 ಗಂಟೆಯಿಂದ 18.30 ಗಂಟೆಯ ವರೆಗೆ ದಾಳಿ ಮಾಡಿ ಆರೋಪಿಯ ವಶದಿಂದ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 7260/- ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡಿದ್ದು ಬಗ್ಗೆ ಪಿಎಸ್ಐ ರವರು ನೀಡಿದ ವರದಿಯ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 231/2018 PÀ®A. 78(111) ಕೆ ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ 26/10/2018 ರಂದು 22.15 ಗಂಟೆಗೆ ಫಿರ್ಯಾದಿದಾರಳಾದ ಐಶ್ವರ್ಯ  ಈಕೆಯು ತನ್ನ ತಂದೆ ಹಾಗೂ ತಾಯಿಯೊಂದಿಗೆ ಠಾಣೆಗೆ ಬಂದು ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಗೆ ದಿನಾಂಕ 18/05/2017 ರಂದು ಸಾಯಿಬಾಬಾ ವೆಂಕಟೇಶ್ವರ ದೇವಸ್ಥಾನ ಮಾನವಿಯಲ್ಲಿ ತಿಮ್ಮೇಶ ತಂದೆ ಬೂದೆಪ್ಪ ಸಾ: ಮಾನವಿ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ .ಮದುವೆ ಕಾಲಕ್ಕೆ ಫಿರ್ಯಾದಿ ಮನೆಯವರು  ಗಂಡನ ಮನೆಯವರಿಗೆ 2 ತೊಲೆ ಬಂಗಾರ ಮತ್ತು ಒಂದು ಮೋಟಾರ್ ಸೈಕಲ್ ನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು  ಇರುತ್ತದೆ . ಸುಮಾರು 5 ತಿಂಗಳವರೆಗೆ ಗಂಡ ಹೆಂಡತಿ ಚೆನ್ನಾಗಿದ್ದು ನಂತರದಲ್ಲಿ ಗಂಡ. ಅತ್ತೆ, ಮಾವ ಹಾಗೂ ನಾದಿನಿ ಕೂಡಿ ಸಾಕಷ್ಟು ವರದಕ್ಷಿಣೆ ಕೊಟ್ಟಿಲ್ಲ ಅಂತಾ ವಿನಾಕಾರಣ ಕಿರಿಕಿರಿ ಮಾಡುತ್ತಾ ಮಾನಸಿಕವಾಗಿ ತೊಂದರೆ ನೀಡುತ್ತಾ ಬಂದಿದ್ದು ನಂತರ ಫಿರ್ಯಾದಿಯು ಗರ್ಭವತಿಯಾಗಿದ್ದು ಆಕೆಯು ಹೆರಿಗೆ ಸಲುವಾಗಿ ತನ್ನ ತವರು ಮನೆಗೆ ಹೋಗುವಾಗ ಗಂಡ. ಅತ್ತೆ, ಮಾವ ಹಾಗೂ ನಾದಿನಿ ಕೂಡಿ ನೀನು ತವರು ಮನೆಯಿಂದ ವಾಪಾಸ ಬರುವಾಗ ಹೆಚ್ಚುವರಿಯಾಗಿ 5 ತೊಲೆ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ತರಬೇಕು ಅಂತಾ ಹೇಳಿ ಕಳುಹಿಸಿದ್ದು ಇರುತ್ತದೆ.ನಂತರ ಫಿರ್ಯಾದಿಗೆ ಒಂದು ಮಗು  ಹುಟ್ಟಿದ್ದು ಅದಕ್ಕೆ ಮೂತ್ರ ವಿಸರ್ಜನೆ ತೊಂದರೆಯಿದ್ದು  ಕಾರಣ ಗಂಡನ ಮನೆಗೆ ಹೋದಾಗ ಅಲ್ಲಿ ‘’ ನೀನು ಎಂತಾ ಮಗನಿಗೆ ಜನ್ಮ ನೀಡಿದ್ದಿನೀನು ಅನಿಷ್ಠ’’  ಅಂತಾ ನನಗೆ ಹಿಯಾಳಿಸಿ ಬೈಯುತ್ತಾ  ಬಂದಿದ್ದು  ಈಗ ತವರು ಮನೆಗೆ ಬಂದಿದ್ದು ದಿನಾಂಕ 22/10/18 ರಂದು ಬೆಳಿಗ್ಗೆ 9.00 ಗಂಟೆಗೆ  ಫಿರ್ಯಾದಿಯು ತನ್ನ ತವರು  ಮನೆಯ ಮುಂದೆ ಇದ್ದಾಗ ಆರೋಪಿತರು  ಬಂದು  ದರಿದ್ರದವಳನ್ನುಮದುವೆಯಾಗಿದ್ದಕ್ಕೆ ಯಾವುದೇ ಲಾಭ  ಇಲ್ಲಾ, ನಾವು ಕೇಳಿದಷ್ಟು ವರದಕ್ಷಿಣೆ ಸಹ ಕೊಟ್ಟಿಲ್ಲಾ ಅಲ್ಲದೇ ಇವಳು ದರಿದ್ರ ಮಗುವನ್ನು ಹಡೆದಾಳ ಅಂತಾ ಎಲ್ಲರೂ ಕೂಡಿ ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಬಿಡಿಸಲು ಬಂದು ಫಿರ್ಯಾದಿ ತಾಯಿಗೆ ಸಹ ಹೊಡೆ ಬಡೆ ಮಾಡುತ್ತಾ ತಲೆ ಕೂದಲು ಹಿಡಿದು  ಎಳೆದಾಡಿ  ಚಪ್ಪಲಿಯಿಂದ ಹೊಡೆದಿದ್ದು ಅಲ್ಲದೆ  ಜೀವದ ಬೆದರಿಕೆಯನ್ನುಹಾಕಿದ್ದು ಇರುತ್ತದೆ. ಕಾರಣ ತನಗೆ ಮತ್ತು ತನ್ನ ತಾಯಿಗೆ ಒಳಪೆಟ್ಟು ಗಳಾಗಿವೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ  ಠಾಣೆ ಗುನ್ನೆ ನಂ 320/2018 ಕಲಂ 498 (), 323,355,504,506 ಸಹಿತ 34 .ಪಿ.ಸಿ. ಹಾಗೂ 3 & 4 ಡಿ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈ ಕೊಂಡಿರುತ್ತಾರೆ.
ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಪ್ರಕಣದ ಮಾಹಿತಿ.
ದಿ.26-10-2018ರಂದು ಮುಂಜಾನೆ 11-35ಗಂಟೆಗೆ ಪಿರ್ಯಾದಿ ²æà d£ÁzsÀð£À PÀĪÀiÁgÀ PÁ«ÄðPÀ ¤jÃPÀëPÀgÀÄ ತಮ್ಮ ತಂಡ ದವರೊಂದಿಗೆ ಸಿರವಾರ ಪಟ್ಟಣದಲ್ಲಿ ಮಾನವಿ ಕ್ರಾಸಿನಲ್ಲಿರುವ ಅನ್ನಪೂರ್ಣ ರೆಸ್ಟೋರೆಂಟ್  ತಪಾಸಣೆ ನಡೆಸಿದಾಗ ಸದರಿ ರೆಸ್ಟೋರೆಂಟ್ ದಲ್ಲಿ  ಸುಮಾರು 1 ವಾರದಿಂದ ವೀರೇಶ ತಂದೆ ವೀರೇಶ ಸಾ:ನವಲಕಲ್ ಹಟ್ಟಿ  ರೋಡ್ ಎಂಬ ಬಾಲ ಕಾರ್ಮಿಕನು ರೆಸ್ಟೋರೆಂಟದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವುದು ವಿಚಾರಣೆಯಿಂದ ಕಂಡು ಬಂದಿರು ತ್ತದೆ ಸದರಿ ಬಾಲ ಕಾರ್ಮಿಕನನ್ನು ರಕ್ಷಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲಕಲ ದಲ್ಲಿ ದಾಖಲಿಸಲಾಗಿದೆ ರೆಸ್ಟೋರೆಂಟ್ ಮಾಲೀಕನವಿರುದ್ದ ಕಾನೂನು ಪ್ರಕಾರ ಕ್ರಮಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 220/2018   ಕಲಂ: ಬಾಲ ಕಾರ್ಮಿಕ ಹಾಗೂ ಕಿಶೋರಾವಸ್ಥೆ [ನಿಷೇಧ ಮತ್ತು ನಿಯಂತ್ರಣ] ಕಾಯ್ದೆ 1986 ಕಲಂ:3, ಕಲಂ:14[] ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.