Thought for the day

One of the toughest things in life is to make things simple:

10 Sept 2018

Special Press Note


-:: ಪತ್ರಿಕಾ ಪ್ರಕಟಣೆ ::-
-:: ಕುಖ್ಯಾತ  ಅಂತರ್ ರಾಜ್ಯ ವಾಹನಗಳ್ಳರ ಬಂಧನ ::-

     ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಕುಖ್ಯಾತ ಅಂತರ್ ರಾಜ್ಯ ವಾಹನಗಳ್ಳತನ ಮಾಡುವ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಜಿಲ್ಲೆಯ ಶಕ್ತಿನಗರ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ಹದ್ದಿಯಲ್ಲಿ ಇತ್ತೀಚಿಗೆ ಜರುಗಿದ ಟಿಪ್ಪರ್ ಮತ್ತು ಲಾರಿ ಕಳುವು ಪ್ರಕರಣಗಳ ಪತ್ತೆಗಾಗಿ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು  ರವರ ನೇತೃತ್ವದಲ್ಲಿ ಸೋಮಶೇಖರ ಎಸ್. ಕೆಂಚರೆಡ್ಡಿ ಪಿಎಸ್ಐ ಶಕ್ತಿನಗರ ಠಾಣೆ, ಜಿಲಾನಿ ಪಾಷಾ ಎಎಸ್ಐ ಹಾಗೂ ಸಿಬ್ಬಂದಿಯವರಾದ ಹುಸೇನ್ ಸಾಬ್ ಮುಲ್ಲಾ ಸಿ.ಹೆಚ್.ಸಿ. 299, ನಾಗಪ್ಪ ಸಿ.ಹೆಚ್.ಸಿ.74, ವೀರೇಶ ಸಿಪಿಸಿ 636, ಡಾಕಪ್ಪ ಸಿಪಿಸಿ 391, ಅಯ್ಯಣ್ಣ ಸಿಪಿಸಿ 400, ಬಸವರಾಜ ಸಿಪಿಸಿ 405, ಚಂದಾ ಪ್ರಕಾಶ ಶೆಟ್ಟಿ ಸಿಪಿಸಿ 650 ಹಾಗೂ ಯಂಕಪ್ಪ .ಪಿ.ಸಿ.183  ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ಈ ತಂಡವು ಹಗಲಿರಳು ಶ್ರಮಿಸಿ 04 ಜನ ಕುಖ್ಯಾತ  ವಾಹನಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಅವರಿಂದ
1] ಒಂದು ಟಿಪ್ಪರ್ .ಕಿ.ರೂ.18,00,000/-
2) ಒಂದು ಅಶೋಕ ಲೈಲ್ಯಾಂಡ್ ಕಂಪನಿಯ ಲಾರಿ .ಕಿ.ರೂ.6,00,000/- ಹೀಗೆ ಒಟ್ಟು ಎಲ್ಲಾ ಸೇರಿ ಒಟ್ಟು 24,00,000/- ಬೆಲೆ ಬಾಳುವ ವಾಹನಗಳನ್ನು, ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಕಾರ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
:: ಬಂಧಿತ ವಾಹನ ಕಳ್ಳರು ::

1] ಗಂಗಾಧರ ತಂದೆ ಕೃಷ್ಣ ||39ವರ್ಷ, ಸಾ||ಡೋರ್ ನಂ:2-50 ತಿಮ್ಮಾಪುರಂ, ಮಂಡಲ:ಕಾಕಿನಾಡ, ಜಿ||ಈಸ್ಟ್ ಗೋದಾವರಿ
2] ಸತೀಶ ತಂದೆ ರಮೇಶ ||26ವರ್ಷ, ಸಾ||ಕೊಂಡುವರಂ, ಮಂಡಲ:ಪೀಠಾಪುರ, ಜಾ||ಜಿ||ಈಸ್ಟ್ ಗೋದಾವರಿ (ಟಿ.ಎಸ್.)
3] ಮಹ್ಮದ್ ಮುಸ್ತಾಫಾ ತಂದೆ ಹುಸೇನ್ ಸಾಬ್ ಸಾ||ಯರ್ರಗಡ್ಡ ಬೋರಬಂಡಾ, ಖಾಜಾ ಗರೀಬ್ ನವಾಜ್ ದರ್ಗಾದ ಹತ್ತಿರ ಹೈದ್ರಾಬಾದ್
4] ಖಾಲೀದ್ ಅಖ್ತರ್ ತಂದೆ ಮಹ್ಮದ್ ಇಬ್ರಾಹಿಂ ||52ವರ್ಷ, ಸಾ|| ಮಹಾವೀರ ನಗರ ಗುಡ್ಡಿ ಮಲ್ಕಾಪೂರ ಹೈದ್ರಾಬಾದ್

     ಇವರು ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಲಾರಿ ಮತ್ತು ಟಿಪ್ಪರ್ ಗಳನ್ನು ಕಳ್ಳತನ ಮಾಡಿದ್ದು ಒಟ್ಟು 02 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕಳುವು ಮಾಡಿದ ವಾಹಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಎಸ್.ಪಿ. ಮತ್ತು ಹೆಚ್ಚುವರಿ ಎಸ್.ಪಿ. ರಾಯಚೂರು ರವರು  ಶ್ಲಾಘಿಸಿದ್ದಾರೆ.