Thought for the day

One of the toughest things in life is to make things simple:

8 Sept 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:07-09-2018 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಗಿಲ್ಲೆಸೂಗೂರು ಎಲೇಬಿಚ್ಚಾಲಿ ರಸ್ತೆಯ ಮೇಲೆ ತುರುಕುನಡೋಣ ಕ್ರಾಸ್ ಹತ್ತಿರ ಆಟೋ ನಂ.ಎಪಿ 21 ಟಿ.ಜಡ್ 8084 ನೇದ್ದರ ಚಾಲಕ ಯಲ್ಲಪ್ಪ ತಂದೆ ರಾಜಪ್ಪ ಸಾ:ಎಲೇಬಿಚ್ಚಾಲಿ ಕ್ಯಾಂಪ್ ಈತನು ತನ್ನ ಆಟೋವನ್ನು ಎಲೆಬಿಚ್ಚಾಲಿಕಡೆಯಿಂದ ಗಿಲ್ಲೆಸೂಗೂರು ಕ್ಯಾಂಪಕಡೆ ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೊರಟು ಒಮ್ಮಲೇ ಬ್ರೇಕ್ ಹಾಕಿದ್ದರಿಂದ ಆಟೋ ಪಲ್ಟಿಯಾಗಿ  ಅದರಲ್ಲಿದ್ದ ಹೇಮಣ್ಣನಿಗೆ ತಲೆಗೆ ತೀವ್ರಸ್ವೂರಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಆಟೋದ್ದಲ್ಲಿದ್ದ ಇನ್ನು ಮೂರು ಜನರಿಗೆ ಸಣ್ಣಪುಟ್ಟಗಳಾಗಿದ್ದು ಇರುತ್ತದೆ.ಅಂತಾ ಮುಂತಾಗಿ ಶ್ರೀ ಜಯಮ್ಮ ಗಂಡ ಹೇಮಣ್ಣ ಗುಡದಿನ್ನಿ ವಯಾ:50 ವರ್ಷ ಜಾತಿ:ಮಾದಿಗ ಉ:ಕೂಲಿಕೆಲಸ ಸಾ:ಎನ್.ಹನುಮಪೂರು ತಾ:ಜಿ:ರಾಯಚೂರು ಇವರು ನೀಡಿದ ದೂರಿನ ಸಾರಂಶದ ಮೇಲಿಂದಾ ಯರಗೇರಾ ಠಾಣಾ ಗುನ್ನೆ ನಂ.163/2018 ಕಲಂ.279.337.304() ಐಪಿಸಿ ಅಡಿಯಲ್ಲಿ ಪ್ರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ: 08-09-2018 ರಂದು 6-00 .ಎಂ ಕ್ಕೆ ಠಾಣಾ ಎ.ಎಸ್.ಐ (ಹೆಚ್) ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆ, ದಿನಾಂಕ: 08-09-2018 ರಂದು 4-15 .ಎಂ 1) Mahindra 575 DI Tractor No. KA-36/TC-4865 , 2) Mahindra 575 DI Tractor No. KA-36/TC-3739 ನೇದ್ದರ ಚಾಲಕರು ತಮ್ಮ ಟ್ರಾಕ್ಟರ್ ಮಾಲೀಕರ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಂಪನಾಳ ಹಳ್ಳದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಟ್ರಾಕ್ಟರನಲ್ಲಿ ಸಿಂಧನೂರು ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ಎ.ಎಸ್.ಐ(ಹೆಚ್ ) ರವರು ಬೀಟ್ ಪಿ.ಸಿ 662 ರವರ ಮಾಹಿತಿ ಮೇರೆಗೆ ಮಾನ್ಯ ಸಿಪಿಐ ಸಿಂಧನೂರು ಸಾಹೇಬರ ನಿರ್ದೇಶನದಂತೆ ಪಿಸಿ-679 ಹಾಗೂ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಚಾಲಕರು ಅಲ್ಲಿಂದ ಓಡಿ ಹೋಗಿದ್ದು, ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ತುರುವಿಹಾಳ ಪೊಲಿಸ್ ಠಾಣೆ ಗುನ್ನೆ ನಂಬರ: 205/2018  U/s  379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 06.09.2018 ರಂದು ರಾತ್ರಿ 7.30 ಗಂಟೆಗೆ ಯಲಗಟ್ಟಾದ ಬಣಜಿಗರ ಹೊಟೇಲ್ ಹತ್ತಿರ ರಸ್ತೆಯಲ್ಲಿ ವಿರೇಶನು ತನ್ನ ಮೋಟಾರ್ ಸೈಕಲ್ ನಂ ಕೆ.ಎ 36 ಈಕೆ 3902 ನೇದ್ದರ ಹಿಂದೆ ಸೋಮನಾಥನಿಗೆ ಕೂಡಿಸಿಕೊಂಡು ನಿಧಾನವಾಗಿ ಬರುವಾಗ್ಗೆ ನಂಬರ್ ಇಲ್ಲದ ಟ್ರ್ಯಾಕ್ಟರ್ ಇಂಜನ್ ನಂ ಆರ್.ಈ.ಓ.ಎಸ್ 00545 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರರಿಗೆ ಡಿಕ್ಕಿಪಡಿಸಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಕ್ಟರನ್ನು ಬಿಟ್ಟು ಓಡಿ ಹೋಗಿದ್ದು ಸೋಮನಾಥನಿಗೆ ಎಡಗಡೆ ತೊಡೆಗೆ ರಕ್ತಗಾಯವಾಗಿದ್ದು, ಬೆನ್ನಿಗೆ ತೆರಚಿದ ಗಾಯವಾಗಿದ್ದು, ಬಲಗಡೆ ಪಕ್ಕಡಿಯಲ್ಲಿ ಎಲುಬು ಮುರುದಂತಾಗಿದ್ದು ಇರುತ್ತದೆ. ವಿರೇಶನಿಗೆ ನೋಡಲು ಹಣೆಗೆ ರಕ್ತಗಾಯವಾಗಿದ್ದು, ಎಡಗಾಲ ಹಿಮ್ಮಡಿಯ ಹತ್ತಿರ ರಕ್ತಗಾಯವಾಗಿದ್ದು ಗಾಯಗೊಂಡ ಇಬ್ಬರನ್ನು ಹರ್ಷವರ್ಧನ ಪಾಟೀಲ್ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಕಂಪ್ಯೂಟರ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 237/2018 PÀ®A 279, 337, 338 L¦¹ & 187 LJA« PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸರಕಾರದ ಆಸ್ತಿ ನಷ್ಟಮಾಡಿದ ಪ್ರಕರಣದ ಮಾಹಿತಿ.
ದಿನಾಂಕ:-08/09/2018 ರಂದು ರಾತ್ರಿ 01-00 ಗಂಟೆ ಸುಮಾರಿಗೆ ಪಿರ್ಯಾದಿ ಶ್ರೀ ಪ್ರಕಾಶ ಪಾಂಡುರಂಗ ಸಹಾಯಕ ಕಾರ್ಯಾನಿರ್ವಾಹಕ ಇಂಜಿನಿಯರ  ನಂಬರ 4 ನೀರಾವರಿ ಇಲಾಖೆ ಮಸ್ಕಿ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೇ ಪ್ರಕರಣದಲ್ಲಿಯ ಆರೋಪಿತರೆಲ್ಲರೂ ಜಾಲವಾಡಗಿ ಸೀಮಾ 55 ನೇ ಕಾಲುವೆ ಸರಪಳಿ 624 ಹತ್ತಿರ  ಕಾಲುವೆಯ ಎಡಗಡೆಯ ತುಬನ 1 ಪೀಟ ಪೈಪ ತೆಗೆದು ಹಾಕಿ 2 ಪೀಟನ ಪೈಪ ಹಾಕಿಕೊಂಡಿದ್ದು ಇದರಿಂದ ಕೆಳಭಾಗದ ರೈತರಿಗೆ ನೀರಿನ ಹರಿಯುವಿನಲ್ಲಿ ತೊಂದರೆ ಉಂಟಾಗಬಹುದಾಗಿದೆ ಇದು ಸರಕಾರದ ಆಸ್ತೀಆಗಿದ್ದರಿಂದ ಸುಮಾರು 60,000/- ರೂಪಾಯಿ ನಷ್ಟವಾಗಿರುತ್ತದೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದಾ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-117/2018 ಕಲಂ-143,147,427, ಸಹಿತ 149  ಐಪಿಸಿ & 53,55,ಕೆ ಐ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರೈತ ಆತ್ಮಹತ್ಯೆ

ದಿನಾಂಕ: 07-09-2018  ರಂದು 7-15 ಎ.ಎಂ ಗಂಟೆಗೆ ಪಿರ್ಯಾಧಿ ²æà ªÀÄw ¤AUÀªÀÄä UÀAqÀ CªÀÄgÉñÀ ªÀAiÀiÁ:40 ªÀµÀð eÁ:°AUÁAiÀÄvï.G:ºÉÆ®ªÀÄ£ÉPÉ®¸À ¸Á:agÀvÀ£Á¼À vÁ:¹AzsÀ£ÀÆgÀ. ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು  ಅದರ ಸಾರಾಂಶವೇನಂದರೆ, ಪಿರ್ಯಾಧಿಯು ಮೃತನ ಹೆಂಡತಿಯಿದ್ದು ಮೃತ ಅಮರೇಶನು ಚಿರತನಾಳ ಗ್ರಾಮದ ನಿವಾಸಿಯಿದ್ದು ತನ್ನ ಹೆಂಡತಿ ಮಗನೊಂದಿಗೆ ವಾಸವಿದ್ದು ಉಪ್ಪಲದೊಡ್ಡಿ ಸೀಮಾ ಸರ್ವೆ ನಂಬರ್-23 ರಲ್ಲಿನ ತಮ್ಮ ಚಿಕ್ಕಪ್ಪನ 2 ಎಕರೆ ಹೊಲವನ್ನು  ವ್ಯವಸಾಯ ಮಾಡಿಕೊಂಡಿದ್ದು ಬೆಳೆ ಖರ್ಚಿಗಾಗಿ ಹಾಗೂ ಕಳೆದ 2 ವರ್ಷಗಳ ಹಿಂದೆ ತನ್ನ ಹೆಣ್ಣು ಮಕ್ಕಳ ಮದುವೆ ಖರ್ಚಿಗಾಗಿ ಮತ್ತು ಕೌಟಂಬಿಕ ಜೀವನ ನಿರ್ವಹಣೆಗಾಗಿ ಒಟ್ಟು 1,10,000 ರೂ ಗಳನ್ನು ಖಾಸಗಿಯಾಗಿ ಕೈ ಸಾಲ ಮಾಡಿಕೊಂಡಿದ್ದು,ಇತ್ತಿಚಿಗೆ ಒಂದೇ ಬೆಳೆ ಆಗಿದ್ದರಿಂದ ಮತ್ತು ಹೊಲಕ್ಕೆ ನೀರು ಸರಿಯಾಗಿ ಸಿಗದೇ ಇದ್ದದ್ದುರಿಂದ ಆತಂಕಗೊಂಡು ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂದು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:-06-09-2018 ರಂದು 12-20 ಪಿಎಂ ಗಂಟೆ ಸುಮಾರು ಚಿರತನಾಳ ಗ್ರಾಮದ ಶಂಕ್ರಪ್ಪ ಕಲ್ಮಂಗಿ ಇವರ ಹೊಲದ ಹತ್ತಿರ ಹಳ್ಳದ ದಂಡೆಯಲ್ಲಿ ಮೃತನು ಸಾಲಭಾದೆಯಿಂದ ಹೊಲಕ್ಕೆ ಸಿಂಪಡಿಸುವ ಕ್ರಿಮಿನಾಶಕ ವಿಷವನ್ನು ಕುಡಿದಿದ್ದರಿಂದ ಪಿರ್ಯಾಧಿಯು ಆತನಿಗೆ ಚಿಕಿತ್ಸೆ ಕುರಿತು ದಿನಾಂಕ 06-09-2018 ರಂದು 3-00 ಪಿಎಂ ಗಂಟೆ ಸುಮಾರು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ಸೇರಿಕೆ ಮಾಡಿದ್ದು ಮೃತನು ಚಿಕಿತ್ಸೆಯಿಂದ ಗುಣಮುಖನಾಗದೇ 7-50 ಪಿಎಂ ಕ್ಕೆ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.ಮೃತನ  ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 11/2018 PÀ®A.174 ¹.Dgï.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

      .