Thought for the day

One of the toughest things in life is to make things simple:

27 Sep 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 26-09-2018 ರಂದು 06-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಜಿ ವೆಂಕಟರಾವ್ ಕಾಲೋನಿಯ ಜಿನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಮಂಜುನಾಥ. ಎಸ್ ಪಿ.ಎಸ್. (ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ ರವರು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು 09 ಜನ ಆರೋಪಿತರು  ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 8180/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 115/2018, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ: 26.09.2018 ರಂದು ಸಂಜೆ 5.30 ಗಂಟೆಯ ಸುಮಾರಿಗೆ ಫಿರ್ಯಾದಿ ವಿರೇಶ ತಂ: ಕೊಜ್ಜ ನರಸಿಂಹಲು ವಯ: 28 ವರ್ಷ, ಜಾ: ಮುನ್ನೂರ ಕಾಪು, : ಗಂಜಿನಲ್ಲಿ ಗುಮಾಸ್ತ, ಸಾ: ಮನೆ ನಂ: 10-6-111, ಮಕ್ತಲ್ ಪೇಟೆ, ರಾಯಚೂರು ಇವರ ತಾಯಿ ತಿಮಲಮ್ಮ ಹಾಗೂ ತಂದೆ ಕೊಜ್ಜ ನರಸಿಂಹಲು ತಂ: ಶಿವಣ್ಣ ವಯ: 48 ವರ್ಷ ರವರು ಬೆಲ್ಲಂ ಗುಂಡಪ್ಪ ರವರ ಕಾಟನ್ ಮಿಲ್ಲಿನ ಹತ್ತಿರದ ಬೈಪಾಸ್ ರಸ್ತೆಯ ಪಕ್ಕದಲ್ಲಿನ ಹೊಲ ಸರ್ವೆ ನಂ: 158 ಹಿಸ್ಸಾ 1 ಹಾಗೂ 158 ಹಿಸ್ಸಾ 2 ನೇದ್ದರ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದಾಗ್ಗೆ ಮೋಡ ಕವಿದ ವಾತಾವರ್ಣದಿಂದ ಕೂಡಿದ್ದು, ಒಮ್ಮೆಲೆ ಗುಡುಗಿನಿಂದ ದೊಡ್ಡ ಶಬ್ದ ಬಂದು ಒಮ್ಮೆಲೆ ಸಿಡಿಲು ಬಡಿದು ಹೊಟ್ಟೆಯ ಹಾಗೂ ಎದೆಯ ಭಾಗದಲ್ಲಿ ಸಿಡಿಲು ಬಡಿದ ಕಂದುಬಣ್ಣದ ಕಲೆ ಇದ್ದು ಫಿರ್ಯಾದಿದಾರರ ತಂದೆಯು ಸ್ಥಳದಲ್ಲಿಯೇ ಮೃತಪಟ್ಟಿದ್ದು ಆದಾಗ್ಯೂ ಮೃತನಿಗೆ ಒಂದು ಅಂಬ್ಯುಲೆನ್ಸನಲ್ಲಿ ರಿಮ್ಸ ಆಸ್ಪತ್ರೆಗೆ ತಂದು ವೈದ್ಯರಲ್ಲಿ ತೋರಿಸಲಾಗಿ ವೈದ್ಯರು ಪರೀಕ್ಷಿಸಿ ನೋಡಿ ತಮ್ಮ ತಂದೆಯವರು ಮೃತಪಟ್ಟಿದ್ದಾಗಿ ಖಾತ್ರಿ ಪಡಿಸಿದರು ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರರ ಫಿರ್ಯಾದುವಿನ ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥Éưøï oÁuÉ ಯು.ಡಿ.ಆರ್. ನಂ. 21/2018 ಕಲಂ 174 ಸಿಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ: 26-09-2018 ರಂದು ಬೆಳಿಗ್ಗೆ 0830 ಗಂಟೆ ಸುಮಾರಿಗೆ ಫಿರ್ಯಾದಿ ಲಚಮಣ್ಣ ತಂದೆ ತಿಮ್ಮಯ್ಯ, ವಯಾ: 40 ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: ಚಂದ್ರಬಂಡಾ ಹಾಗೂ ಇತರೇ ಸಾಕ್ಷಿದಾರರು ಚಂದ್ರಬಂಡಾ ಗ್ರಾಮದ ಸೊಸೈಟಿ ಗೊಡಾನಿನ ಮೇಲ್ಚಾವಣಿಗೆ ಹಾಕಿದ ಟಿನಗಳು ನಿನ್ನೆ ರಾತ್ರಿ ಸುರಿದ ಗಾಳಿ ಮಳೆಯಿಂದ ಕಿತ್ತು ಹೋಗಿದ್ದು, ಫಿರ್ಯಾದಿದಾರನು ಮತ್ತು ಇತರರು ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ  ಲೇ ಸೂಳೆ ಮಕ್ಕಳೆ ಇಲ್ಲಿಗೆ ಏಕೆ ಬಂದಿರಿ ಇದು ನಮ್ಮ ಜಾಗ   ಅಂತಾ ಅವಾಚ್ಚವಾಗಿ ಬೈಯುತ್ತಿದ್ದಾಗ ಫಿರ್ಯಾದಿಯೂ ನೀವು ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಲು ಅವರಲ್ಲಿ ಆರೋಪಿ ನಂ 01 ಸೂರ್ಯಕಾಂತರೆಡ್ಡಿ ತಂದೆ ರಾಮರೆಡ್ಡಿ ಈತನು ಲೇ ಬ್ಯಾಡರ ಸೂಳೆ ಮಗನೆ ನಿನ್ಯಾರಲೇ ಕೇಳೊಕೆ ಅಂತಾ ಜಾತಿ ನಿಂದನೆ ಮಾಡಿ ಆರೋಪಿ ನಂ 02 ರಂಜಿತಾ ಗಂಡ ಸೂರ್ಯಕಾಂತರೆಡ್ಡಿ ರವರು ಕಲ್ಲಿನಿಂದ ಎಡಗಣ್ಣಿಗೆ ಹೊಡೆದು, ಮತ್ತು ಬಿಡಿಸಲು ಬಂದ ನಾಗೇಶ ಮತ್ತು ಮಹೇಶನಿಗೆ ಆರೋಪಿತರು ಕೈಯಿಂದ ಮೈಕೈಗೆ ಹೊಡೆದು ಮೂಕಪೆಟ್ಟುಗೊಳಿಸಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿರ್ಯಾದಿಯ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲಿಸ್ ಠಾಣೆ ಗುನ್ನೆ ನಂಬರ PÀ®A, 143, 147, 323, 324, 504, 506 ಸಹಿತ 149 L¦¹ ಮತ್ತು 3(1)(r)(s), 3(2), (va) sc/st PÁAiÉÄÝ.1989 amendment ordinance 2014 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ: 26-09-2018 ರಂದು ಬೆಳಿಗ್ಗೆ 0930 ಗಂಟೆ ಸುಮಾರಿಗೆ ಫಿರ್ಯಾದಿ ರಂಜಿತಾ ಗಂಡ ಸೂರ್ಯಕಾಂತರೆಡ್ಡಿ, 45 ವರ್ಷ, ಜಾ: ರೆಡ್ಡಿ, : ಮನೆಗೆಲಸ, ಸಾ: ಚಂದ್ರಬಂಡಾ ಹಾಗೂ ಫಿರ್ಯಾದಿ ಮಗ ತಮ್ಮ ಹೊಲದಲ್ಲಿ ಟಿಲ್ಲರ ಹೊಡೆಯಲು ಹೋದಾಗ ತಮ್ಮ ಹೊಲದಲ್ಲಿರುವ ಸೊಸೈಟಿ ಗೊಡಾನಿನ ಮೇಲ್ಚಾವಣಿಗೆ ಹಾಕಿದ ಟಿನಗಳು ನಿನ್ನೆ ರಾತ್ರಿ ಸುರಿದ ಗಾಳಿ ಮಳೆಯಿಂದ ಕಿತ್ತು ತಮ್ಮ ಹೊಲದಲ್ಲಿ ಬಿದಿದ್ದು ಅದನ್ನು ಕೇಳಲು ಹೋದ ಫಿರ್ಯಾದಿಗೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಇಲ್ಲಿ ನಿನ್ನದೇನಾದ ಜಾಗ ನಿನ್ನದಲ್ಲ ಚಿಲ್ಲರ ಸೂಳೆ ಅಂತಾ ಅವಾಚ್ಚವಾಗಿ ಬೈದಿದಲ್ಲದೇ ಫಿರ್ಯಾದಿಯ ಸೀರೆ ಎಳೆದಾಡಿ ಮಾನಕ್ಕೆ ಕುಂದುಂಟು ಮಾಡಿ ಕೈಯಿಂದ ಹೊಡೆಬಡೆ ಮಾಡಿ ಮೂಕಪೆಟ್ಟುಗೊಳಿಸಿದರು, ಬಿಡಿಸಲು ಬಂದ ಇತರ ಸಾಕ್ಷಿದಾರರಿಗೆ ಆರೋಪಿತರು ಕೈಯಿಂದ ಹೊಡೆದು, ಕಾಲಿನಿಂದ ಒದ್ದಿದಲ್ಲದೇ, ಕಲ್ಲಿನಿಂದ ಹೊಡೆದು ಮೂಕಪೆಟ್ಟುಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಪಿರ್ಯಾದಿಯ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 90/2018 PÀ®A, 143,147,323,324,354,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ಶಾಂತತ ಭಂಗವನ್ನುಂಟು ಮಾಡಿದ ಪ್ರಕರಣದ ಮಾಹಿತಿ.
ದಿನಾಂಕ: 27-09-2018 ರಂದು ಬೆಳಿಗ್ಗೆ 11.00 ಗಂಟೆಗೆ ನಾನು ಎಸ್.ಹೆಚ್. ಕರ್ತವ್ಯದಲ್ಲಿದ್ದಾಗ  ಫಿರ್ಯಾದಿ J¯ï.© CVß ¦.J¸ï.L(PÁ.¸ÀÄ) ªÀiÁPÉðmï AiÀiÁqÀð ¥Éưøï oÁuÉ gÁAiÀÄZÀÆgÀÄ ಠಾಣೆಯಲ್ಲಿ ಹಾಜರಾಗಿ ಒಂದು ಲಿಖತ ಫಿರ್ಯಾದಿನೀಡಿದ ಸಂಕ್ಷಿಪ್ತ ಸಾರಾಂಶವೆನೆಂದರೆ  ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ದಿನಾಂಕಃ 25-09-2018 ರಂದು ಸಾಯಂಕಾಲ 18 .00 ಗಂಟೆಗೆ  ಅಸ್ಕಿಹಾಳ್ ಗ್ರಾಮದಲ್ಲಿ ನಡೆಯು 13ನೇ ದಿನದ ಗಣೇಶ ವಿಸರ್ಜನೆ  ಬಂದೋಬಸ್ತ್ ಕುರಿತು  ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಹೋಗಿದ್ದು  ರಾತ್ರಿ 11.30 ಗಂಟೆಗೆ ಮೇಲ್ಕಂಡ ಎಲ್ಲಾ ಆರೋಪಿ ಶ್ರೀನಿವಾಸ್ ತಂದೆ ವೆಂಕಟೇಶ ವಯ 28 ವರ್ಷ, ಜಾತಿಃ ನಾಯಕ, ಉಃ ವಿದ್ಯಾರ್ಥಿ ಹಾಗೂ ಇತರೆ 8 ಜನರು ಸೇರಿ ಆಕ್ರಮ ಕೂಟ ರಚಿಸಿಕೊಂಡು  ಗಣೇಶ ವಿಸರ್ಜನೆ ಕಾಲಕ್ಕೆ ನೆರೆದಿದ್ದ ಸಾರ್ವಜನಿಕರಿಗೆ  ಶಾಂತತ ಭಂಗವನ್ನುಂಟು ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಸಾರ್ವಜನಿಕರಿಗೆ ರಸ್ತೆಯಲ್ಲಿ ಅಡ್ಡಲಾಗಿ ನಿಂತುಕೊಂಡು ಸಾರ್ವಜನಿಕರಿಗೆ ತೊಂದರೆ  ನೀಡಿದ್ದು ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ತಡವಾಗಿ ಬಂದು ಫಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 129/2018 ಕಲಂ 143,147, 504, 341 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂಡಿರುತ್ತಾರೆ.