ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಿಹಿಳೆ ಕಾಣೆ ಪ್ರಕರಣದ ಮಾಹಿತಿ:-
ದಿನಾಂಕ:06/10/2019 ರಂದು ಮಧ್ಯಾಹ್ನ 16:00 ಗಂಟೆಗೆ ಪಿರ್ಯಾದಿ ಠಾಣೆಗೆ
ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ತಂದು ಹಾಜರ ಪಡಿಸಿದ್ದರ ಸಾರಾಂಶ
ವೇನೆಂದರೆ ºÀ£ÀĪÀÄAvÀ vÀAzÉ §¸À¥Àà ªÀAiÀÄ40 eÁªÀiÁ¢UÀ G.PÀư
PÉ®¸À ¸Á ºÁ®zÀwð ಪಿರ್ಯಾದಿಯ ಅಣ್ಣ ರಾಮಣ್ಣ ಈತನು ದುಡಿಯಲು ವಿಕ್ರೋಲಿ
ಮುಂಬೈಯಲ್ಲಿದ್ದು ಆತನ ಮಗಳು ರೇಣುಕಾ ಈಕೆಯು ಕೆಲ
ತಿಂಗಳುಗಳಿಂದ ಪಿರ್ಯಾದಿಯ ಮನೆಯಲ್ಲಿ ಇದ್ದುಈಗ್ಗೆ 06 ತಿಂಗಳ ಹಿಂದೆ ಕಿರಣ ಮುಂಬೈ ಈತನೊಂದಿಗೆ
ಹಾಲದರ್ತಿಯಿಂದ ಹೋದ ಬಗ್ಗೆ ಮಾಹಿತಿ ತಿಳಿದು ಪಿರ್ಯಾದಿ ಮತ್ತು ಆತನ ಸಂಬಂಧಿಕರಾದ ಮೌನೇಶ ಮತ್ತು
ಹನುಮಂತ ಅಮರಾಪೂರ ಇವರು ಗಬ್ಬೂರು ಬಸ್ ನಿಲ್ಧಾಣದ
ಹತ್ತಿರ ಬಂದಾಗ ರೇಣುಕಾ ಮಾತ್ರ ಇದ್ದು ಕಿರಣ
ಮುಂಬೈ ಈತನು ತಪ್ಪಿಸಿಕೊಂಡಿದ್ದನು. ರೇಣುಕಳಿಗೆ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು
ಹೋಗಿದ್ದನು. ರೇಣುಕಾ ಈಕೆಯು ಆಗಾಗ ಫೋನಿನಲ್ಲಿ
ಹೆಚ್ಚು ಮಾತಾಡುತ್ತಿದ್ದು ಈ ರೀತಿ ಮಾತಾಡುವುದು
ಸರಿಯಲ್ಲ ಅಂತಾ ಪಿರ್ಯಾದಿ ಸಾಕಷ್ಟು ಸಲ ಬುದ್ದಿವಾದ ಹೇಳಿದ್ದನು ದಿನಾಂಕ 23-09-2019 ರಂದು ಊಟ ಮಾಡಿ ರಾತ್ರಿ 11-00
ಗಂಟೆ ವರೆಗೆ ಮಾತಾಡುತ್ತಾ ಕುಳಿತುಕೊಂಡು ನಂತರ
ಮನೆಯಲ್ಲಿ ಎಲ್ಲರು ಮಲಗಿಕೊಂಡಿದ್ದು ರಾತ್ರಿ 02-00 ಗಂಟೆಗೆ ಸುಮಾರಿಗೆ ಫಿರ್ಯಾದಿಯು ಕಾಲು ಮಡಿಯಲು ಎದ್ದು ನೋಡಲು ಆತನ ಅಣ್ಣನ ಮಗಳು ರೇಣುಕಾ ಈಕೆಯು
ಮಲಗಿಕೊಂಡು ಸ್ಥಳದಲ್ಲಿ ಇರಲಿಲ್ಲ ಹೊರಗಡೆ ಹೋಗಿರಬಹುದು ಎಂದು ಸುಮ್ಮನಾಗಿದ್ದು
ಎಷ್ಟೊತ್ತಾದರು ಬಾರದೆ ಇದ್ದಾಗ
ಗಾಬರಿಕೊಂಡು ಮನೆಯಲ್ಲಿದ್ದವರನ್ನು
ಎಬ್ಬಿಸಿ ರೇಣುಕಾಳು ಕಾಣುತ್ತಿಲ್ಲ ಅಂತಾ ಹೇಳಿ
ಎಲ್ಲರು ಊರಲ್ಲಿ ಹುಡುಕಾಡಲಾಗಿ ಎಲ್ಲಿಯು
ಪತ್ತೆಯಾಗಲಿಲ್ಲ ಸದರಿಯವಳು ಫೋನಿನಲ್ಲಿ ಮುಂಬೈನ ಕಿರಣ ಈತನೊಂದಿಗೆ ಸಲುಗೆಯಿಂದ ಇದ್ದು ಈತನೊಂದಿಗೆ ಹೋಗಿರಬಹುದು
ಅಂತಾ ಅನುಮಾನ ಇರುತ್ತದೆ. ಕಾಣೆಯಾದ
ಪಿರ್ಯಾದಿಯ ಅಣ್ಣನ ಮಗಳನ್ನು ಫಿರ್ಯಧಿ ಮತ್ತು
ಮೌನೇಶ ಹಾಗು ಹನುಮಂತ ಅಮರಪೂರ ಕೂಡಿಕೊಂಡು ತಮ್ಮ ಸಂಬಧಿಕರ ಊರುಗಳಿಗೆ ಹೋಗಿ
ಹುಡುಕಾಡಿದ್ದು ಅಲ್ಲದೆ ಪೋನ್ ಮಾಡಿ ಕೇಳಲಾಗಿ ಎಲ್ಲಿಯು ಪತ್ತೆ ಯಾಗದ ಕಾರಣ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ದಿನಾಂಕ
23-09-2019 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ 24-09-2019 ಬೆಳಗಿನ 02-00 ಗಂಟೆಯ ಮಧ್ಯಾದ ಅವದಿಯಲ್ಲಿ
ಕಾಣೆಯಾಗಿದ್ದು ಇರುತ್ತದೆ ಕಾರಣ ಕಾಣೆಯಾದ ಪಿರ್ಯಾದಿಯ
ಅಣ್ಣನ ಮಗಳು ರೇಣುಕಾ ಈಕೆಯನ್ನು ಹುಡುಕಿ ಕೊಡಲು ವಿನಂತಿ ಇರುತ್ತದೆ ಅಂತಾ ನೀಡಿದ
ಪಿರ್ಯಧಿ ಮೇಲಿಂದ UÀ§ÆâgÀÄ ¥Éưø ಠಾಣಾ ಗುನ್ನೆ ನಂ 72/2019 ಹುಡುಗಿ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಳ್ಳಲಾಗಿದೆ.
ರಸ್ತೆ
ಅಪರಘಾತ ಪ್ರಮಕರಣದ ಮಾಹಿತಿ :-
ದಿನಾಂಕ:06.10.2019 ರಂದು ಸಂಜೆ 4.50 ಗಂಟೆಗೆ ಮುದಗಲ್
ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ಎಂ.ಎಲ್.ಸಿ ಇದೆ ಅಂತಾ ತಿಳಿಸಿದ ಮೇರೆಗೆ ಅಲ್ಲಿಗೆ ಹೋಗಿ ಅಪಘಾತದಲ್ಲಿ
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿಯನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು
ಅದರ ಸಾರಾಂಶವೇನೆಂದೆರೆ ಫಿರ್ಯಾದಿ ಮತ್ತು ಆರೋಪಿ ಕೂಡಿಕೊಂಡು ಆರೋಪಿತನ ಮೋಟಾರ ಸೈಕಲ್ ನಂ.
KA-29/EG-1435 ನೇದ್ದನ್ನು ತಗೆದುಕೊಂಡು ಅಡವಿಬಾವಿ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ವಾಪಾಸ
ಛಟ್ನಾಳ ಗ್ರಾಮಕ್ಕೆ ಹೋಗುವಾಗ ಆರೋಪಿತನು ತನ್ನ ಮೋಟಾರ ಸೈಕಲ್ಲನ್ನು ನಡೆಸುತ್ತಿದ್ದು ಫಿರ್ಯಾದಿದಾರನು
ಹಿಂದೆ ಕುಳಿತುಕೊಂಡಿದ್ದು ಆಶಿಹಾಳ ನಾಗರಾಳ ರಸ್ತೆ ಮುಖಾಂತರ ಹೋಗುವಾಗ ಆಶೀಹಾಳ ತಾಂಡಾ ದಾಟಿದ ಮೇಲೆ
ಆರೋಪಿತನು ತನ್ನ ಮೋಟಾರ ಸೈಕಲ್ ನಂ.
KA-29/EG-1435 ನೇದ್ದನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದು ಆಗ ಪಿರ್ಯಾದಿದಾರನು
ನಿದಾನವಾಗಿ ನಡೆಸು ಅಂತಾ ಹೇಳಿದರೂ ಸಹ ಆರೋಪಿತನು ಇಂದು ಸಂಜೆ 4.00 ಗಂಟೆ ಸುಮಾರಿಗೆ ತನ್ನ ಮೋಟಾರ
ಸೈಕಲ್ಲನ್ನು ಅತೀವೇಗವಾಗಿ ನಡೆಸಿಕೊಂಡು ಹೋಗಿ ಖೀರಪ್ಪ ರವರ ಹೊಲದ ಹತ್ತಿರ ಇರುವ ಬ್ರಿಡ್ಜ್ ಹತ್ತಿರ
ಮೋಟಾರ ಸೈಕಲ್ಲನ್ನು ಸ್ಕಿಡ್ಡ ಮಾಡಿ ಕೆಳಗಡೆ ಬಿದ್ದಿದ್ದರಿಂದ ಫಿರ್ಯಾದಿಗೆ ಎಡಗಡೆ ಕಣ್ಣಿನ ಹುಬ್ಬಿನ
ಹತ್ತಿರ ತೆರಚಿದ ರಕ್ತಗಾಯವಾಗಿದ್ದು ಆರೋಪಿತನಿಗೆ ತಲೆಗೆ ಬಲವಾದ ರಕ್ತಗಾಯವಾಗಿ ರಕ್ತ ಬಂದು ಸೋರುತ್ತಿದ್ದು
ಮಾತನಾಡುವ ಸ್ಥಿತಿಯಲ್ಲಿ ಇದ್ದಿಲ್ಲ. ನಂತರ ಯಾರೋ 108 ವಾಹನಕ್ಕೆ ಪೋನ ಮಾಡಿ ಕರೆಯಿಸಿ ಅದರಲ್ಲಿ ಹಾಕಿ
ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದರಿ ಅಪಘಾತವು ದ್ಯಾವಪ್ಪ
ಇತನು ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನೆಡೆಸಿಕೊಂಡು ಹೋಗಿ ಸ್ಕಿಡ್ಡ ಮಾಡಿ ಬಿಳಿಸಿದ್ದರಿಂದ
ಈ ಘಟನೆ ನಡೆದಿರುತ್ತದೆ. ಕಾರಣ ದ್ಯಾವಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸುವ ವಿನಂತಿ ಅಂತಾ ಮುಂತಾಗಿ
ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಂಜೆ 6.30 ಗಂಟೆಗೆ ಬಂದು ಸದರಿ ಹೇಳಿಕೆ ದೂರಿನ
ಸಾರಾಂಶದ ಮೇಲಿಂದ ªÀÄÄzÀUÀ¯ï ¥ÉÆÃ°Ã¸ï oÁuÉ UÀÄ£Éß. £ÀA 118/2019 PÀ®A 279,
337, 338 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.