ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮರಳು ಕಳುವಿನ ಪ್ರಕರಣದ ಮಾಹಿತಿ
ದಿನಾಂಕ: 24.02.2020 ರಂದು
ಮದ್ಯರಾತ್ರಿ 12-00 ಗಂಟೆಗೆ ²æÃ ¥ÀæPÁ±À gÉrØ qÀA§¼À ¦.J¸ï.L °AUÀ¸ÀÆÎgÀÄ ¥Éưøï oÁuÉ ರವರು ನೇದ್ದವರು
ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಗುರುಗುಂಟಾ ಕಡೆಯಿಂದ ಲಿಂಗಸುಗೂರ ಕಡೆಗೆ ಮರಳನ್ನು ಕಳ್ಳತನದಿಂದ ಟಿಪ್ಪರ ನಲ್ಲಿ ತುಂಬಿಕೊಂಡು ಸಾಗಾಣಿಕೆ
ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ¦.J¸ï.L °AUÀ¸ÀÆÎgÀÄ ¥Éưøï oÁuÉ ಹಾಗೂ ಪಂಚರು ಮತ್ತು
ಸಿಬ್ಬಂದಿ ಇವರೊಂದಿಗೆ ಲಿಂಸುಗೂರಿನ
ಬಸವ ಸಾಗರ ಕ್ರಾಸ್ ಹತ್ತಿರ ಮರೆಯಾಗಿ ನಿಂತ್ತು ಕಾಯುತ್ತಿದ್ದಾಗ ಮದ್ಯರಾತ್ರಿ
00-30 ಗಂಟೆ ಸುಮಾರಿಗೆ ಹೊನ್ನಳ್ಳಿ ಕಡೆಯಿಂದ ಒಂದು ಟಿಪ್ಪರನಲ್ಲಿ
ಮರಳು ತುಂಬಿಕೊಂಡು ಲಿಂಗಸುಗೂರ ಕಡೆ ಬರುತ್ತಿರುವಾಗ ಬಸವ ಸಾಗರ ಕ್ರಾಸ್ ನಲ್ಲಿ ತೆಗೆಡೆದು ನಿಲ್ಲಿಸಿ ಚೆಕ್ ಮಾಡಿದ್ದು ಅದರ ಮೇಲೆ ನಮೂದಿಸಿದ ಟಿಪ್ಪರ
ಚಾಲಕ ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಮಾಲೀಕನು ಹೇಳಿದಂತೆ ಕಳ್ಳತನದಿಂದ ಉಸುಕು ಸಾಗಾಣಿಕೆ ಮಾಡುತ್ತಿದ್ದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮ ಟಿಪ್ಪರ ನಂ ಕೆಎ 36 ಬಿ 5994 ನೇದ್ದು ಮತ್ತು ಅದರಲ್ಲಿದ್ದ ಸುಮಾರು 15,000/- ಬೆಲೆ
ಬಾಳುವ ಉಸುಕನ್ನು ಜಪ್ತಿ ಮಾಡಿಕೊಂಡು ಆರೋಪಿತನನ್ನುದಸ್ತಗಿರಿ ಮಾಡಿಕೊಂಡು ಬಂದು ಗುನ್ನೆ ದಾಖಲು
ಮಾಡಲು ಪಿರ್ಯಾದಿಕೊಟ್ಟಿದ್ದು ಸದರಿ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು
ಪೊಲೀಸ್ ಠಾಣೆ ಗುನ್ನೆ 45/2020 PÀ®A. 379 L.¦.¹ ಅಡಿಯಲ್ಲಿ ಪ್ರಕಣದ ದಾಖಲು
ಮಾಡಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ.24-02-2020 ರಂದು
ಮಧ್ಯಾಹ್ನ 01-00 ಗಂಟೆಗೆ
ಫಿರ್ಯಾದಿ Dgï.JA £ÀzÁ¥sï ¹.¦.L zÉêÀzÀÄUÀð ರವರು
ಪೊಲೀಸ್
ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.24-02-2020 ರಂದು ಬೆಳಿಗ್ಗೆ 10-30 ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಇದ್ದಾಗ
ಬಾಗೂರು ಕೃಷ್ಣಾ ನದಿಯಿಂದ 1) ಟಿಪ್ಪರ್ KA-28 C-7863 ಮತ್ತು 2) ಟಿಪ್ಪರ್
ನಂ KA-28
C-8809 ನೇದ್ದರ
ಚಾಲಕ ಮತ್ತು ಮಾಲಿಕರು ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ
ಇಲ್ಲದೆ ಕಳ್ಳತನದಿಂದ ಕೃಷ್ಣಾ ನದಿಯಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಗಳ ಮೇಲೆ ದಾಳಿ
ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ಗಳನ್ನು ತಂದು ಹಾಜರು ಪಡಿಸಿದ ಮೇಲಿಂದ ಟಿಪ್ಪರ್
ಗಳ ಚಾಲಕ ಮತ್ತು ಮಾಲಿಕರ ವಿರುದ್ದ ಜಾಲಹಳ್ಳಿ
ಪೊಲೀಸ್ ಠಾಣಾ ಗುನ್ನೆ ನಂಬರ 19/2020 PÀ®A:379
IPC ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ
ದಿನಾಂಕ:23-02-2020 ರಂದು 18-00 ಗಂಟೆಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ಚಿಕಿತ್ಸೆ
ಪಡೆಯುತ್ತಿದ್ದ ಸೈಯದ್ ನಸೀಮೂನ್ ತಂದೆ ಸೈಯದ ಅಬ್ದುಲ್ ಅಹ್ಮದ್, ಸಾ|| ಹಳೆಆಶ್ರಯ
ಕಾಲೋನಿ ರಾಯಚೂರು ಈಕೆಯನ್ನು ಭೇಟಿಯಾಗಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು,
ಸಾರಾಂಶವೇನೆಂದರೆ, ದಿನಾಂಕ: 20.02.2020 ರಂದು ತಮ್ಮ ತಾಯಿಯವರು ನಮ್ಮ ತಂಗಿಗೆ ಸೀರೆ ಉಡಿಸಲು ಮನೆಗೆ ಬಂದಿದ್ದು ನಮ್ಮ ಮನೆಯ ಕಂಪೌಂಡನಲ್ಲಿದ್ದ ಸಾಮಾನುಗಳು ಕಳುವಾಗಿದ್ದವು, ದಿನಾಂಕ:
21.02.2020 ರಂದು ಬೆಳಿಗ್ಗೆ 7-30 ಗಂಟೆ ಸುಮಾರು ಫಿರ್ಯಾದಿದಾರರ
ತಾಯಿಯಾದ ಸೈಯದ ಫಾತಿಮಾ ಬೀ ಇವರು ಕಳುವಾದ ಸಾಮಾನುಗಳ ಬಗ್ಗೆ ಕೇಳಲು ಆರೋಪಿ ವಿರೇಶ ಸ್ವಾಮಿ ಇವರ ಮನೆಯ ಹತ್ತಿರ ಹೋದಾಗ ಆರೋಪಿತರು ಫಾತಿಮಾ
ಬೀ ಇವರಿಗೆ ಹೊಡೆಬಡೆ ಮಾಡುತ್ತಿರುವಾಗ ಫಿರ್ಯಾದಿಯ ತಂಗಿ ಇಂದ್ರೂಸ್ಬೀ
ಇವರು ಫೊನ್ ಮಾಡಿ ತಿಳಿಸಿದಾಗ ಫಿರ್ಯಾದಿದಾರರು ವಿರೇಶ
ಸ್ವಾಮಿ ಇವರ ಮನೆ ಹತ್ತಿರ ಹೋದಾಗ ಆರೋಪಿತರು ಎಲ್ಲರೂ ಸೇರಿ ಫಿರ್ಯಾದಿದಾರರಿಗೆ ಹಾಗೂ
ಅವರ ತಾಯಿಗೆ ಕೈಗಳಿಂದ ಹೊಡೆಬಡೆ ಮಾಡಿ, ಕೆಳಗಡೆ ಹಾಕಿ ಕಾಲುಗಳಿಂದ
ಒದ್ದು ಒಳಪೆಟ್ಟುಗೊಳಿಸಿದ್ದು, ಈ ಸೂಳೆಯನ್ನು ಹಾಕಿರಿ
ಮುಗಿಸಿಯೇ ಬಿಡೋಣ ಅಂತಾ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿರುತ್ತಾರೆ
ಕಾರಣ ಸದರಿಯವರ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಇರುವ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು 19-00
ಗಂಟೆ ವಾಪಸು ಠಾಣೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾಕೇಟ್ ಯಾರ್ಡ್ ಠಾಣಾ ಗುನ್ನೆನಂ.19/2020 ಕಲಂ: 143,148, 323, 324,
504, 506 ರೆ/ವಿ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ
ಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ
ದಿನಾಂಕ:
23.02.2020 ರಂದು ಸಂಜೆ 4.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಳು ತನ್ನ
ಗಂಡ ಲಕ್ಷ್ಮಣ ತಂ: ಪೆಂಟಪ್ಪ ವಯ: 42 ವರ್ಷ ರವರ ಇನ್ನೂ
ರಜಿಸ್ಟ್ರೇಷನ್ ನಂಬರ್ ನಮೂದಿಸದೇ ಇರುವ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೊ
ಮೊಟಾರ ಸೈಕಲ್ ಇಂಜನ್ ನಂ: HA10EHBHB08831 ಹಾಗೂ ಚಾಸಿ ನಂ: MBLHA10ACBHB02943 ನೇದ್ದರ
ಹಿಂದಿನ ಸೀಟಿನಲ್ಲಿ ಕುಳಿತು ರಾಯಚೂರಿನಿಂದ ಮಾಗನೂರಿಗೆ ದೇವರ ದರ್ಶನಕ್ಕೆಂದು ಹೋಗಿ ವಾಪಸ್ ಬರುವಾಗ್ಗೆ
ದಾರಿಯಲ್ಲಿ ಅಂದರೆ ಶಕ್ತಿನಗರ - ರಾಯಚೂರು ರಸ್ತೆಯ ನಾಗಲಾಪೂರ ಕ್ರಾಸ್ ಹತ್ತಿರದ
ಕಲ್ವರ್ಟ ಹತ್ತಿರ ಬರುವಾಗ್ಗೆ ಅದೇ ವೇಳೆಗೆ ಶಕ್ತಿನಗರ ಕಡೆಯಿಂದ
ಅಂದರೆ ತಮ್ಮ ಹಿಂದಿನಿಂದ ಯಾವುದೋ ಅಪರಿಚಿತ ಆರೋಪಿತನು ತನ್ನ ಯಾವುದೋ ಲಾರಿಯನ್ನು ಅತೀವೇಗ ಮತ್ತು
ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುವ ಕಾಲಕ್ಕೆ ಲಾರಿಯ ಹಿಂಬದಿಯ ಪಾಟಕ್ ಟಚ್ ಆಗಿ
ತಾವುಗಳು ರಸ್ತೆಯಲ್ಲಿ ಬಿದ್ದಿದ್ದು, ಇದರಿಂದಾಗಿ ಫಿರ್ಯಾದಿದಾರರಿಗೆ ತನ್ನ ಎರಡೂ
ತುಟಿಗಳಿಗೆ ಹಾಗೂ ಮೂಗಿನ ತುದಿಗೆ ರಕ್ತಗಾಯ ಎಡಗಾಲ ಮೊಣಕಾಲಿಗೆ ಹಾಗೂ ಪಾದದ ಹತ್ತಿರ ತರಚಿದ ಗಾಯವಾಗಿದ್ದು,
ಮೊಟಾರ ಸೈಕಲ್ ಚಲಾಯಿಸುತ್ತಿದ್ದ ತನ್ನ ಗಂಡನಿಗೆ ಬಲಹಣೆಗೆ ರಕ್ತಗಾಯ, ಬಲ ಮುಂಗೈಗೆ ಒಳಪೆಟ್ಟು, ಬಲಗೈ
ಮುಂಗೈಗೆ ಒಳಪೆಟ್ಟು, ಎಡಗಾಲ ಮೊಣಕಾಲಿಗೆ ಒಳಪೆಟ್ಟು ಮತ್ತು ಬಲಗಾಲ ತೊಡೆಗೆ ತರಚಿದ ಗಾಯವಾಗಿದ್ದು,
ಮುಂದೆ ಕುಳಿತಿದ್ದ ತಮ್ಮ 7ವರ್ಷದ ಮಗಳು ಜಮಲಮ್ಮಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಂತರ ತಾವು ಯಾವುದೋ ಅಂಬ್ಯುಲೆನ್ಸನಲ್ಲಿ ರಿಮ್ಸ ಆಸ್ಪತ್ರೆಗೆ
ಇಲಾಜಿಗೆ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಈ ಬಗ್ಗೆ ಟಕ್ಕರ್ ಕೊಟ್ಟ ಅಪರಿಚಿತ ಲಾರಿ ಚಾಲಕನ
ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದುವಿನ
ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 39/2020
ಕಲಂ: 279, 337 IPC & 187 IMV Act. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.