ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ವರದಕ್ಷಿಣ ಪ್ರಕರಣದ ಮಾಹಿತಿ.
ಫಿರ್ಯಾಧಿ
²æÃªÀÄw. ¨ÁAiÀĪÀÄä @ ZÀAzÀæªÀÄä UÀAqÀ ZËqÀ¥Àà, ªÀAiÀÄ-34,
eÁ:£ÁAiÀÄPÀ, G:PÀưPÉ®¸À, ¸Á: UÀzÀælV, vÁ:ªÀĹÌ, ºÁ.ªÀ: UÀÄAdºÀ½î, vÁ:
¹AzsÀ£ÀÆgÀÄ. ದಾರಳು ದಿನಾಂಕ: 16-05-2010 ರಂದು ಆರೋಪಿ ನಂ. 01 ರವರ ಸಂಗಡ ಸಿಂಧನೂರು ತಾಲೂಕಿನ
ದೇವಿಕ್ಯಾಂಪಿನ ದುರ್ಗಮ್ಮ ದೇವಸ್ಥಾನದಲ್ಲಿ
ನಡೆದ ಸಾಮೂಹಿಕ ಮದುವೆಯಲ್ಲಿ ಕುಲಸಂಪ್ರದಾಯ
ಪ್ರಕಾರ ಮದುವೆಯಾಗಿದ್ದು , ಮದುವೆ ನಂತರದಲ್ಲಿ ಅವರ
ಸಂಸಾರಿಕ ಜೀವನದಲ್ಲಿ 2 ವರ್ಷಗಳ ನಂತರ ಚೌಡಮ್ಮ ಎನ್ನುವ
ಹೆಣ್ಣು ಮಗು ಜನಿಸಿದ್ದು ಇದೆ. ಮದುವೆಯಾಗಿ 3 ವರ್ಷಗಳ ನಂತರದಲ್ಲಿ ಆರೋಪಿ ನಂ. 01 ಈತನು ಮದ್ಯ ಕುಡಿಯುವ
ದುಷ್ಚಟಕ್ಕೆ ಬಲಿಯಾಗಿ ದಿನಾಲು ಕುಡಿದುಕೊಂಡು ಮನೆಗೆ ಬಂದು ಮನೆಯಲ್ಲಿದ್ದ ತನ್ನ ಸಹೋದರರಾದ ಆರೋಪಿ ನಂ. 2 ರಿಂದ 4 ಮತ್ತು ತಮ್ಮ ಸಂಬಂಧಿ
ಆರೋಪಿನಂ.05 ರವರ ಮಾತು ಕೇಳಿ ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈಯುತ್ತಾ, ಅವಳಿಗೆ ಮಾನಸಿಕ ದೈಹಿಕ
ಹಿಂಸೆ ನೀಡುತ್ತಾ , ಸ್ವಲ್ಪ ತಿಂಗಳುಗಳ ನಂತರ ಅವಳನ್ನು
ಮನೆಯಿಂದ ಹೊರಗೆ ಹಾಕಿದ್ದು, ನಂತರ ಪಿರ್ಯಾದಿಯ ಅಣ್ಣನವರು ಗ್ರಾಮದ ಹಿರಿಯರಲ್ಲಿ ರಾಜಿಪಂಚಾಯಿತಿ ಮಾಡಿಸಲಾಗಿ
ಆರೋಪಿ ನಂ. 01 ZËqÀ¥Àà vÀAzÉ
AiÀĪÀÄ£À¥Àà ªÀĽUÉÃgÀ, ಈತನು ಪುನಃ ಪಿರ್ಯಾದಿದಾರಳನ್ನು ಮನೆಗೆ ಕರೆದುಕೊಂಡು ಹೋಗಿ 6-7 ತಿಂಗಳವರೆಗೆ ಸಂಸಾರ
ನಡೆಸಿ, ನಂತರದಲ್ಲಿ ಅವಳೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿ, ನೀನು ಈ ಮನೆಯಲ್ಲಿಯೇ ಇದ್ದರೇ ನಿನ್ನನ್ನು
ಜೀವಂತ ಉಳಿಸುವುದಿಲ್ಲಾವೆಂದು ಹೇಳಿ ಹೊಡೆಬಡೆ ಮಾಡಿ, ಮನೆಯಿಂದ ಹೊರಗೆ ಹಾಕಿದ್ದುದರಿಂದ ಪಿರ್ಯಾದಿದಾರಳು
ಜೀವ ಭಯದಿಂದ ತನ್ನ ತವರು ಮನೆಗೆ ಬಂದು ವಾಸವಾಗಿದ್ದು,
ಕಳೆದ 2 ವರ್ಷಗಳ ಹಿಂದೆ ಆರೋಪಿ ನಂ.1 ನೇದ್ದವನು ಉಳಿದ ಆರೋಪಿತರ ಮಾತು ಕೇಳಿ ಅಂಜಿನೆಮ್ಮ ತಂದೆ ಗುಂಡಪ್ಪ ಸಾ: ಕೆಂಚನಗುಡ್ಡ ತಾ: ಸಿರುಗುಪ್ಪ ಎನ್ನುವವಳನ್ನು
ದಿನಾಂಕ: 18-04-2018 ರಂದು ಕಾನೂನು ಬಾಹಿರವಾಗಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದುದರಿಂದ ಪಿರ್ಯಾದಿಯು
ವಿಷಯ ತಿಳಿದು, ತನ್ನ ಗಂಡನ ಮನೆಗೆ ಹೋಗಿ ವಿಚಾರಿಸಲಾಗಿ ಆರೋಪಿತರು ಅವಳಿಗೆ ಮನೆಯಲ್ಲಿ ಸೇರಿಸಿಕೊಳ್ಳದೇ
ಅವಾಚ್ಯ ಬೈದು ಕಳಿಸಿದ್ದು, ಪಿರ್ಯಾದಿಯು ತನ್ನ ಹಾಗೂ ತನ್ನ ಮಗಳ ಜೀವನಾಂಶಕ್ಕೆ ಪರಿಹಾರ ಕೇಳಲು ಪುನಃ
ದಿನಾಂಕ: 26-07-2019 ರಂದು ಬೆಳಿಗ್ಗೆ 11-00 ಗಂಟೆಗೆ ತನ್ನ ಗಂಡನ ಮನೆಗೆ ಹೋಗಿದ್ದಾಗ, ಆರೋಪಿ ನಂ.
01 ರಿಂದ 04 ರವರು ಕೂಡಿ ಪಿರ್ಯಾದಿಗೆ ‘’ ಲೇ ಸೂಳೇ ನೀನು ನಮಗೆ ಸಾಕಾಗಿ
ಬಿಟ್ಟಿದ್ದಿಯಾ, ನಿನ್ನನ್ನು ಇವತ್ತು ಜೀವಂತ ಉಳಿಸುವುದಿಲ್ಲಾವೆಂದು ಆಕೆಗೆ ಕೈಯಿಂದ ಹೊಡೆದು, ಮೈಮೇಲಿನ
ಸೀರೆ ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಮಾನಭಂಗಪಡಿಸಿ, ನಂತರ ಆರೋಪಿ ನಂ. 02 ನೇದ್ದವನು ಚಪ್ಪಲಿಯಿಂದ
ಆಕೆಯ ಕಪಾಳಕ್ಕೆ ಹೊಡೆದು ನಂತರ ಎಲ್ಲರೂ ಸೇರಿ ಅವಳಿಗೆ ‘’ ನೀನು ಇನ್ನೊಂದು
ಸಲ ಜೀವನಾಂಶ ಕೇಳಿ ಮನೆಗೆ ಕಡೆಗೆ ಕಾಲಿಟ್ಟರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ
ಹಾಕಿ ಕಳಿಸಿದ್ದುದರಿಂದ ಪಿರ್ಯಾದಿಯು ಜೀವ ಭಯದಿಂದ ಇಲ್ಲಿಯವರೆಗೆ ಪಿರ್ಯಾದಿ ಸಲ್ಲಿಸದೇ ಇದ್ದು, ಇಂದು
ತಡವಾಗಿ ಠಾಣೆಗೆ ಬಂದು ಮೇಲಿನಂತೆ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ
ಗುನ್ನೆ ನಂಬರ 40/2020 U/s- 498(A),
323, 354, 355, 109, 504, 506 R/w 149 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅವಶ್ಯಕ ವಸ್ತುಗಳ ಕಾಯ್ದೆಯ ಪ್ರಕರಣದ ಮಾಹಿತಿ.
ದಿನಾಂಕ 12.03.2020 ರಂದು ಬೆಳಿಗ್ಗೆ 10-45 ಗಂಟೆಗೆ ಫಿರ್ಯಾದಿ ಶ್ರೀ ಬಿ.ಆರ್
ವೆಂಕಣ್ಣ ತಂದೆ ರುದ್ರಪ್ಪ, ವಯಾ: 55 ವರ್ಷ, ಆಹಾರ ನಿರೀಕ್ಷಕರು ರಾಯಚೂರು ನಗರ, ಸಾ: ಆಹಾರ ನಾಗರಿಕ
ಸರಬರಾಜು ಇಲಾಖೆ ರಾಯಚೂರು ರವರು ಠಾಣೆಗೆ ಹಾಜರಾಗಿ ತಮ್ಮ ದೂರು ಸಲ್ಲಿಸಿದೇನೆಂದರೆ, ಫಿರ್ಯಾದಿದಾರರು ಇಂದು ದಿನಾಂಕ
12.03.2020 ರಂದು ಬೆಳಿಗ್ಗೆ 10-30 ಗಂಟೆಗೆ ರಾಯಚೂರು ನಗರದ ಸ್ಟೇಷನ್ ರಸ್ತೆಯ ಮಹಾತ್ಮ ಗಾಂಧಿ ಕ್ರೀಡಾಂಗಣದ
ಎದರುಗಡೆ ಇರುವ ಮತ್ತು ಟ್ಯಾಗೋರ ಕಾಲೇಜಿಗೆ ಹೊಂದಿಕೊಂಡಿದ್ದ ಮಳಿಗೆಯ ಮುಂದುಗಡೆ ಆರೋಪಿತನು ತುಂಬಿದ
ಸಿಲೆಂಡರಗಳನ್ನು ಇಟ್ಟುಕೊಂಡು ಬಂದು ಹೋಗುವ ಆಟೋಗಳಿಗೆ {ಗ್ಯಾಸ್ ಮೇಲೆ ನಡೆಯುವ ಆಟೋಗಳಿಗೆ} ಸಿಲೆಂಡರಗಳಿಂದ
ಗ್ಯಾಸನ್ನು ತುಂಬುತ್ತಿರುವುದು ಕಂಡು ಬಂದು ಫಿರ್ಯಾದಿದಾರರು ಕೂಡಲೇ ಸದರಿ ಮಳಿಗೆಯ ಮುಂದುಗಡೆ ಗ್ಯಾಸ್
ತುಂಬುತ್ತಿದ್ದ ಆರೋಪಿತನನ್ನು ವಿಚಾರಿಸಲಾಗಿ ಸದರಿ ಮಳಿಗೆಯನ್ನು ತಾನು ಬಾಡಿಗೆ ಪಡೆದು ಮಳಿಗೆಯಲ್ಲಿ
ಸರ್ಕಾರದಿಂದ ಬಂದ ಸಬ್ಸಿಡಿಯಲ್ಲಿರುವ ಸಿಲೆಂಡರಗಳನ್ನು ರಾಯಚೂರುನಲ್ಲಿರುವ ಗ್ಯಾಸ ಏಜೆನ್ಸಿಗಳಿಂದ
ಮನೆ ಮನೆಗಳಿಗೆ ಸಪ್ಲೈ ಮಾಡುತ್ತಿರುವ ಸಪ್ಲೈಯರ್ ಗಳಿಂದ ತುಂಬಿದ 14.2 ಕೆಜಿ ವುಳ್ಳ ಇಂಡಿಯನ್ ಗ್ಯಾಸಗಳನ್ನು
1000/- ರೂ ಖರೀದಿಸಿ ಅದರಿಂದ ಒಡಾಡುವ ಆಟೋಗಳಿಗೆ 2 ಕೆಜಿ ಯಷ್ಟು ಸಿಲೆಂಡರನ್ನು ತುಂಬಿ ಅವರಿಂದ
250/- ರೂ ಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿಸಿದ್ದು ಇರುತ್ತದೆ ಒಂದು ಸಿಲೆಂಡರನಿಂದ ಆಟೋಗಳಿಗೆ
ತುಂಬಿದ ಗ್ಯಾಸನಿಂದ 1750/- ರೂ ಗಳನ್ನು ಪಡೆದು ಇದರಲ್ಲಿ ಒಂದು ಗ್ಯಾಸ್ ಗೆ 750/- ಲಾಭಪಡೆಯುತ್ತೇನೆ
ಅಂತಾ ತಿಳಿಸಿದನು, ಸದರಿ ಆರೋಪಿತನು ತನ್ನ ಅಂಗಡಿಯ ಮಳಿಗೆಯಲ್ಲಿ 08 ತುಂಬಿದ ಸಿಲೆಂಡರಗಳ ಅ.ಕಿ
8000/- ರೂ ಹಾಗೂ 03 ಖಾಲಿ ಸಿಲೆಂಡರಗಳು ಅ.ಕಿ 2000/- ರೂ ಹೀಗೆ ಒಟ್ಟು 10,000/- ರೂ ಬೆಲೆಬಾಳುವ
ಸಿಲೆಂಡರಗಳನ್ನು ಅನಧಿಕೃತವಾಗಿ ಮತ್ತು ಯಾವುದೇ ಲೈಸನ್ಸ್ ಇಲ್ಲದೇ ಕಾಳ ಸಂತೆಯಲ್ಲಿ ಮಾರಾಟ ಮಾಡಲು
ಇಟ್ಟುಕೊಂಡಿರುತ್ತಾನೆ ಅಂತಾ ಇದ್ದ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ
ನಂ 39/2020, ಕಲಂ 3, & 7 ESSENTIAL
COMMODITIES ACT, 1955. ಅಡಿಯಲ್ಲಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.