ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಚುನಾವಣೆ ಸಂಭಂದ ಪ್ರಕರಣದ ಮಾಹಿತಿ.
ದಿನಾಂಕ:01-04-2019 ರಂದು ರಾತ್ರಿ 8.00 ಗಂಟೆಗೆ ಶ್ರೀ ತಿಮ್ಮಪ್ಪ ಪಿ.ಡಿ.ಒ ಬಿಚ್ಚಲಿ ಗ್ರಾಂ ಪಂಚಾಯತ (ಎಸ್.ಎಸ್.ಟಿ-1) ರಾಯಚೂರು ರವರು ಠಾಣೆಯಲ್ಲಿ ಹಾಜರಾಗಿ
ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ಲೋಕ
ಸಭೆ ಚುನಾವಣೆ-2019 ರ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ
ಆಯುಕ್ತರ ಆದೇಶದ ಮೇರೆಗೆ ತಾವು ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ ಅಧಿಕಾರಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:01-04-2019 ರಂದು ಸಂಜೆ 6-00 ಗಂಟೆ ಸುಮಾರು ಮಂತ್ರಾಲಯದ ರಸ್ತೆಯಲ್ಲಿರುವ ನವೋದಯ ಮೆಡಿಕಲ್
ಕಾಲೇಜ್ ಹತ್ತಿರದ ಚೆಕ್ ಪೋಸ್ಟ್ ಹತ್ತಿರ ನಾನು ಮತ್ತು ನಮ್ಮ ಎಸ್.ಎಸ್.ಟಿ. ಟೀಮ್ ಸದಸ್ಯರಾದ 1) ನಾಗಪ್ಪ ವಾಟರ್ ಮ್ಯಾನ್ ಸಾ: ಸಿದ್ದರಾಂಪೂರು ತಾ:ಜಿ: ರಾಯಚೂರು ನನ್ನ ಕರೆಯ ಮೇರೆಗೆ ಪ್ಲೆಂಯಿಗ್ ಸ್ಕ್ಯಾಡ್ ಟಿಮ್ ನ ಪಶ್ಚಿಮ ಪೊಲೀಸ್ ಠಾಣೆಗೆ ಶಂಕ್ರಪ್ಪ ಎ.ಎಸ್.ಐ ರವರು ಬಂದಿದ್ದು ಮತ್ತು ಚಕ್ ಪೋಸ್ಟ್ ಕರ್ತವ್ಯದಲ್ಲಿ ಇದ್ದ ನೇತಾಜಿನಗರ ಪೊಲೀಸ್
ಠಾಣೆಯ ರಘುನಂದನ್ ಹೆಚ್.ಸಿ. 110, ಬಂದಯ್ಯ ಮಠದ ಪಿ.ಸಿ.653 ರವರು ಕೂಡಿ ರವರು
ಕೂಡಿಕೊಂಡು ದಿನಾಂಕ: 23-04-2019 ರಂದು ನಡೆಯಲಿರುವ ಲೋಕ ಸಭೆ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ
ನವೋದಯ ಚೆಕ್ ಪೊಸ್ಟ್ ಹತ್ತಿರ ವಾಹನ ತಪಾಸಣೆ ಮಾಡುವ ಕಾಲಕ್ಕೆ ಮಂತ್ರಾಲಯ ಕಡೆಯಿಂದ ಮಾನವಿ
ಕಡೆಗೆ ಹೋಗುವ ಮಾರುತಿ ಸುಚುಕಿ ಬೀಳಿ ಬ್ರಿಜಾ ಕಾರ ವಾಹನದ ಸಂಖ್ಯೆ ಇರುವುದಿಲ್ಲ,
ಇದನ್ನು ತಡೆದು
ನಿಲ್ಲಿಸಿ ಸದರಿ ವಾಹನದ ಚಾಲಕನನ್ನು ವಿಚಾರಿಸಲು ತನ್ನ ಹೆಸರು ನಾಗರಾಜ
ತಂದೆ ವಿರುಪಣ್ಣ ದೊಡ್ಡ ಮನಿ ವಯ:23 ಜಾತಿ: ಚುಲುವಾದ ಸಾ: ನಕ್ಕುಂದಿ ತಾ: ಮಾನವಿ ರಾಯಚೂರು
ಅಂತಾ ಹೇಳಿದ್ದು ಸದರಿ ವಾಹನ ತಪಾಸಣೆ ಮಾಡಲು ವಾಹನದ ಹಿಂದಿನ ಡಿಕ್ಕಿಯಲ್ಲಿ ಇರುವುದನ್ನು ಪರಿಶೀಲಿಸಿ ನೋಡಲು ಕಾರ್ಪೋರೇಟ್
ಕೇಸರಿ ಫ್ಯಾಸಿಸ್ಟ್ ಬಿಜೆಪಿಯನ್ನು ಕಿತ್ತೆಸೆಯಿರಿ ! ಕಾಂಗ್ರೆಸ್ ಜನತಾದಳ ದಲ್ಲಾಳಿಗಳನ್ನು ಸೋಲಿಸಿರಿ
! ಸಿಪಿಐ (ಎಂಎಲ್) ರೆಡ್ ಸ್ಟಾರ್ ಹಾಗೂ ನಿಜವಾದ ಜನಪರ ಶಕ್ತಿಗಳನ್ನು ಬೆಂಬಲಿಸಿರಿ ! ಅಂತಾ ಚುನಾವಣೆ ಪ್ರಣಾಳಿಕೆ 20 ಪುಟವುಳ್ಳ 85 ಸಣ್ಣ ಪುಸ್ತಕಗಳನ್ನು ಇರುವ ಬಗ್ಗೆ ವಿಚಾರಿಸಲಾಗಿ
ತನ್ನ ಹತ್ತಿರ ಇದಕ್ಕೆ
ಸಂಬಂಧಪಟ್ಟ
ಯಾವುದೇ ಚುನಾವಣೆ
ಆಯೋಗದಿಂದ ಪರವಾನಿಗೆ ಇಲ್ಲದೆ ಹೋಗುವಾಗ ಹಡಿದು ಪರಿಶೀಲಿಸಿ ಇವುಗಳು ಸಿಪಿಐ (ಎಂಎಲ್) ಚುನಾವಣಾ ಪ್ರಣಾಳಿಕೆಗಳ 20 ಪುಟಗಳಿರುವ 85 ಸಣ್ಣ ಪುಸ್ತಕಗಳನ್ನು ಮತ್ತು ಮಾರುತಿ ಸುಜುಕಿ ಬ್ರೀಜಾ ಬಿಳಿ ಬಣ್ಣ ಕಾರ ನಂಬರ
ಇರುವುದಿಲ್ಲ. ಸದರಿ ವಾಹನವನ್ನು
ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಕಾನೂನು ಕ್ರಮ ಜರುಗಿಸಲು ಫಿರ್ಯಾದಿ ನೀಡಿದ್ದು ಸ್ವೀಕರಿಸಿಕೊಂಡು ಈ ಸಾರಾಂಶ ಮೇಲಿಂ ದ ಈ
ಅಪರಾಧವು ಆಸಂಜ್ಞೆಯ ಅಪರಾಧವಿದ್ದು ಅರೋಪಿತರ ವಿರುದ್ದ ಕಲಂ:171
(ಹೆಚ್) ಐಪಿಸಿ
ಪ್ರಕರಣದ ಅಡಿಯಲ್ಲಿದಾಖಲಿಸಿಕೊಳ್ಳು & ತನಿಖೆ ಪೂರೈಸಿ ಅಂತಿಮ ವರದಿ ಸಲ್ಲಿಸಲು ಪರವಾನಿಗೆ ಪಡೆದುಕೊಂಡು ರಾತ್ರಿ 11-30 ಗಂಟೆಗೆ ಸದರಿ
ಫಿರ್ಯಾದಿಯ
ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 23/2019 ಕಲಂ.171(ಹೆಚ್),ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮಟಕಾ
ಜೂಜಾಟ ಪ್ರಕರಣ ಮಾಹಿತಿ.
ದಿನಾಂಕ 01-04-2019 ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿ ¸ÀzÁ²ªÀ vÀAzÉ UÉÆÃ«AzÀgÁd ªÀÄÄAqÀgÀV 35 ªÀµÀð eÁ-G¥ÁàgÀ
¸Á-±ÁªÀAvÀUÀ¯ï ಈತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ನೀಡಿದ್ದೆನೆಂದರೆ, ದಿನಾಂಕ 01-04-2019 ರ ಸಂಜೆ 5-15 ಗಂಟೆಯ ಸುಮಾರಿಗೆ ಶಾವಂತಗಲ್ ಗ್ರಾಮದ ಹನುಮನ ದೇವಸ್ಥಾನದ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಸಧಾಶಿವ ಅಂತಾ ಹೇಳಿದ್ದು ಮಟಕ ಜೂಜಾಟದ ಬಗ್ಗೆ ಕೂಗಾಡುತ್ತಿದ್ದವನ ಬಗ್ಗೆ ವಿಚಾರಿಸಲಾಗಿ ಅವನ ಹೆಸರು ದೇವಪ್ಪ ದೋಷಿ ಅಂತಾ ಹೇಳಿದ್ದು ಅಲ್ಲದೆ ಆರೋಪಿ ಸದಾಶಿವನನ್ನು ತಾನು ಬರೆದ ಮಟಕಾ ಚೀಟಿಯನ್ನು ಸಾಬಯ್ಯನಿಗೆ ಕೊಡುವುದಾಗಿ ತಿಳಿಸಿದ್ದು, ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಆರೋಪಿತನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ
10,150/- ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಆದಾರದ ಮೇಲಿಂದ ಪ್ರಕರಣದ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದು ಇದನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ನೀಡಿದ್ದು ಸದರಿ ಅನುಮತಿಯನ್ನು ಪಿಸಿ-41 ರವರು ಇಂದು ದಿನಾಂಕ 02-04-2019 ರಂದು ಬೆಳಿಗ್ಗೆ 9-30 ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಮಾನ್ಯ ಪಿ.ಎಸ್.ಐ ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 42/2019 PÀ®A.78(3) PÉ ¦
PÁ¬ÄzÉ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.