Pages

15 Feb 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ರಸ್ತೆ ಅಪಘಾತ ಪ್ರಕರಣದ ಮಾಹಿತಿ.

            ದಿನಾಂಕ: 14.02.2021 ರಂದು ಬಾನುವಾರ ರಜಾ ದಿನವಿದ್ದುದರಿಂದ ಫಿರ್ಯಾದಿ ಪುಷ್ಪೇಂದರ್ ಲಿಟೋರಿಯಾ ತಂ; ರಾಮಬಾಬು ಲಿಟೋರಿಯಾ ವಯ: 24ವರ್ಷ, ಜಾ: ಬ್ರಾಹ್ಮಣ, ಉ:  YTPSನಲ್ಲಿ ಪೆಂಟಿಂಗ್ ಕೆಲಸ, ಸಾ: ಸರಸಾಯಿ ಪೋಸ್ಟ, ತಾ: ಪ್ಯಾವಲ್ ಜಿ: ದಾತಿಯಾ, (ಮಧ್ಯಪ್ರದೇಶ) ಹಾ/ವ/ ಬಿ.ಎಸ್.ಯಡಿಯೂರಪ್ಪ ಕಾಲೋನಿ, ಚಿಕ್ಕಸ್ಗೂರು. ತಾ: ರಾಯಚೂರು ಹಾಗೂ ಆತನ ತಮ್ಮ ಅಮೀತ್ ಲಿಟೋರಿಯಾ, ಫಿರ್ಯಾಧಿಯ ಗ್ರಾಮಸ್ಥ ರೋಹಿತ್ ರವರನ್ನು ನಮಗೆ ಪರಿಚಯದ ಹರ್ಷ ಕುಮಾರ ತಂ: ಎಸ್.ಮಣಿ ರವರ ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿನ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿ ಮದ್ಯಾಹ್ನ ಊಟ ಮಾಡಿಕೊಂಡು ವಾಪಸ್ ಬರುವಾಗ್ಗೆ ಫಿರ್ಯಾದಿಯ ತಮ್ಮ ಅಮೀತ್ ಲಿಟೋರಿಯಾ ಈತನು ತನ್ನ ಯಮಹಾ FZ ಮೊಟಾರ ಸೈಕಲ್ ನಂ: KA36EH3281 ನೇದ್ದರ ಹಿಂದಿನ ಸೀಟಿನಲ್ಲಿ ರೋಹಿತ್ ತಂ: ಮಹೇಶ ಈತನನ್ನು ಕೂರಿಸಿಕೊಂಡು ಶಕ್ತಿನಗರದಿಂದ ಚಿಕ್ಕಸ್ಗೂರು ಕಡೆಗೆ ಹೋಗುತ್ತಿದ್ದು, ಅವರ ಹಿಂದೆ ಫಿರ್ಯಾದಿಯನ್ನು ಹರ್ಷ ಕುಮಾರ ತಂ: ಎಸ್.ಮಣಿ ರವರು ತನ್ನ ಮೊಟಾರ ಸೈಕಲ್ ನ ಹಿಂದಿನ ಸೀಟಿನಲ್ಲಿ ಕೂರಿಸಿ ಕರೆದುಕೊಂಡು ಅವರ ಹಿಂದೆಯೇ ಹೋಗುವಾಗ್ಗೆ ದಾರಿಯಲ್ಲಿ ಮದ್ಯಾಹ್ನ 3.30 ಗಂಟೆಗೆ ಚಿಕ್ಕಸ್ಗೂರು ಕಡೆಯಿಂದ ಶಕ್ತಿನಗರ ಕಡೆಗೆ ಆರೋಪಿತನು ತನ್ನ ಅಶೋಕ ಲೈಲ್ಯಾಂಡ್ ಕಂಪನಿಯ ಲಾರಿ ನಂ: KA560054 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೆಗ್ಗಸನಹಳ್ಳಿ ಕಾಲುವೆಯ ಬ್ರಿಡ್ಜ್ ಮೇಲೆ ರಸ್ತೆಯಲ್ಲಿ ಕಂಟ್ರೋಲ್ ಮಾಡದೇ ಫಿರ್ಯಾದಿಯ ತಮ್ಮನ ಮೊಟಾರ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು, ಅವರಿಬ್ಬರು ಮೊಟಾರ ಸೈಕಲ್ ಸಮೇತ ರಸ್ತೆಯಲ್ಲಿ ಬೀಳಲಾಗಿ ಲಾರಿ ಚಾಲಕನು ಹಿಂದೆ ತಿರುಗಿ ನೋಡಿ ಲಾರಿಯನ್ನು ಅಲ್ಲಿ ನಿಲ್ಲಿಸದೇ ಹಾಗೆಯೇ ಚಲಾಯಿಸಿಕೊಂಡು ಹೋಗಿದ್ದು, ಮೊಟಾರ ಸೈಕಲ್ ನಡೆಸುತ್ತಿದ್ದ ಅಮೀತ್ ಲಿಟೋರಿಯಾ ಹಾಗೂ ಮೊಟಾರ ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತ ರೋಹಿತ್ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ನೀಡಿದ ಫಿರ್ಯಾದಿಯ ಸಾರಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ 15/2021 ಕಲಂ 279,304(ಎ) ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.