Pages

16 Jan 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದೇವಿನಗರದ ನ್ಯಾಯಾಬೆಲೆ ಅಂಗಡಿ ಹತ್ತಿರ ಒಬ್ಬ ವ್ಯಕ್ತಿಯನ್ನು ಕೊಲೆ : ಪ್ರಕರಣ ದಾಖಲು

           ದಿನಾಂಕ 16.01.2021 ರಂದು ಬೆಳಿಗ್ಗೆ 08 :15 ಗಂಟೆಗೆ ಶ್ರೀಮತಿ ರಾಜೇಶ್ವರಿ ಇವರು ಠಾಣೆಗೆ ಹಾಜಾರಾಗಿ ದೂರು ಸಲ್ಲಿಸಿದ್ದೇನಂದರೆ ತನಗೆ ರಾಯಚೂರಿನ ದೇವಿನಗರದ ದರ್ಶೇಲಿ ಇವರ ಮಗನಾದ ತಿರುಮಲೇಶ ಈತನೊಂದಿಗೆ ಮದುವೆಯಾಗಿದ್ದು ದಿನಾಂಕ 15.01.2021 ರಂದು ರಾತ್ರಿ 8 :00 ಗಂಟೆಗೆ ತನ್ನ ಗಂಡನು ಸರಾಯಿ ತರುವುದಾಗಿ ಹೇಳಿ ಹೊಗಿದ್ದು ರಾತ್ರಿ 10 :00 ಗಂಟೆಯಾದರು ವಾಪಸ್ ಮನೆಗೆ ಬರದೇ ಇದ್ದರಿಂದ ತಮ್ಮ ಚಿಕ್ಕಮ್ಮಳಾದ ಸರೋಜಮ್ಮ ಈಕೆಯ ಮನೆಯ ಹತ್ತಿರ ಹೋಗಿರಬಹುದು ಅಂತಾ ಅಲ್ಲಿಗೆ ಹೋಗಿ ವಿಚಾರಿಸಲು ಅಲ್ಲೀಯು ಸಹ ಬಂದಿರುವುದಿಲ್ಲ ಅಂತಾ ತಿಳಿಸಿದರು. ಮನೆಯಲ್ಲಿ ಯಾರು  ಇಲ್ಲದ ಕಾರಣ ತಾನು ದೊಡ್ಡ ಆತ್ತೆಯಾದ ಲಕ್ಷ್ಮೀ ಗಂಡ ಗಂಗಪ್ಪ ದೇವಿನಗರ ಇವರ ಮೆನೆಗೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ 16-01-2021 ಬೆಳಿಗ್ಗೆ 5 :00 ಗಂಟೆ ಸುಮಾರಿಗೆ ಎದ್ದು ಕೈ ಕಾಲು ಮುಖ ತೊಳೆದುಕೊಂಡು ಮನೆಯ ಹೊರಗಡೆ ಬಂದಾಗ ತಮ್ಮ ಓಣಿಯ ಜನರು ದೇವಿನಗರದ ನ್ಯಾಯಾಬೆಲೆ ಅಂಗಡಿ ಹತ್ತಿರ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುತ್ತಾರೆ ಅಂತಾ ಮಾತನಾಡುವ ವಿಷಯ ತಿಳಿದು ತಾನು ಅಲ್ಲಿಗೆ ಹೋಗಿ  ನೋಡಲು ಮೃತ ವ್ಯಕ್ತಿಯ ಮೈಮೇಲಿದ್ದ ಬಟ್ಟೆ ಮತ್ತು ಚಪ್ಪಲಿಗಳನ್ನು ನೋಡಿ ಗುರುತಿಸಿದ್ದು. ದಿನಾಂಕ : 15.01.2021 ರ ರಾತ್ರಿ 8 :00 ಗಂಟೆಯಿಂದ ದಿನಾಂಖ 16.01.2021ರ ಬೆಳಗಿನ ಜಾವ 05 :00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ದೇವಿನಗರದ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಮುಂದಿನ ಅವರಣದಲ್ಲಿ ಸೀಮೆಂಟ್ ನಿಂದ ಕೂಡಿದ ಕೊಡ್ಡ ಗಡ್ಡೆ ಮತ್ತು ದೊಡ್ಡ ಕಲ್ಲುನಿಂದ ಮುಖ ತಲೆಯ ಮೇಲೆ ಎತ್ತಿಹಾಕಿ ಕಲೊಲೆ ಮಾಡಿದ್ದು ಇಎರುತ್ತದೆ. ತನ್ನ ಗಂಡನನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಮತ್ತು ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಮೊ.ಸಂ.  01/2021 ಕಲಂ 302 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.