Pages

1 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ.
                    ಇಂದು ದಿನಾಂಕ :30-06-2020 ರಂದು 12-20 ಗಂಟೆಗೆ  ಲಿಂಗನಗೌಡ ಎಸ್   ಕವಿತಾಳ  ಠಾಣೆ ರವರು ಠಾಣೆಗೆ ಬಂದು ಒಂದು ಗಣಕೀಕೃತ ಫಿರ್ಯಾದಿಯನ್ನು ತಯಾರಿಸಿ ಮುಂದಿನ ಕ್ರಮ ಜರುಗಿಸುವಂತೆ ನೀಡಿದ್ದರ ದೂರಿನ ಸಾರಾಂಶವೆನೆಂದರೆ ಇತ್ತಿಚ್ಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಮಿಕ ರೋಗ ಹರಡುತ್ತಿದ್ದು. ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಸೂಕ್ತ ಮುಂಜಾಗ್ರತ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಕಲಂ 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿದ್ದು. ಸದರಿ ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 .ಪಿ.ಸಿ ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತಾ ಆದೇಶ ಮಾಡಿದ್ದರಿಂದ ತಾವು ಇಂದು ದಿನಾಂಕ 30-06-2020 ರಂದು 11-00 ಗಂಟೆಗೆ ಸಿಬ್ಬಂದಿಯವರೊಂದಿಗೆ ಕವಿತಾಳ  ಪಟ್ಟಣದಲ್ಲಿ ಪೆಟ್ರೊಲಿಂಗ್ ಹೊರಟು ಪೆಟ್ರೊಲಿಂಗ್ ಮಾಡುತ್ತಾ 11-30 ಗಂಟೆಗೆ ಕವಿತಾಳ ಪಟ್ಟಣದ ಎಸ್ ಬಿ ಹೆಚ್ ಭ್ಯಾಂಕ್ ಎದುಗಡೆಯಲ್ಲಿರುವ ಆರೋಪಿತನ ಕಿರಾಣಿ ಅಂಗಡಿಯಲ್ಲಿ ಆರೋಪಿತನು ವಾಸುದೇವ ತಂದೆ ನಾರಾಯಣಪ್ಪ ವಯಾ 44 ವರ್ಷ ಜಾ: ವೈಶ್ಯ ಉ: ವ್ಯಾಪಾರ ಸಾ: ಕವಿತಾಳ ತಾ: ಸಿರವಾರ ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕರೋನ್ ಸಾಂಕ್ರಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದ್ದರು ಸಹ ನಿರ್ಲಕ್ಷತನದಿಂದ ತನ್ನ ಕಿರಾಣಿ ಅಂಗಡಿಯಲ್ಲಿ ಸ್ಯಾನಿಟೈಜರ್ ವ್ಯವ್ಯಸ್ಥೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿ ರೋಗ ನಿರೋಧಕ ನಿರ್ಭಂದಕ ನಿಯಮಗಳನ್ನು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು ಕಾರಣ ಸದರಿಯನ ಮೇಲೆ ಸೂಕ್ತ ಕಾನೂನು ರಿತ್ಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮೇಲಿಂದ ಕವಿತಾಳ  ಠಾಣೆ ಗುನ್ನೆ ನಂ 61/2020 ಕಲಂ 188, 269,  .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.