Pages

21 Apr 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ.
            ದಿನಾಂಕ:19-04-2020 ರಂದು 5-30 ಪಿ.ಎಮ್ ಸಮಯದಲ್ಲಿ ಕೆ.ಹಂಚಿನಾಳಕ್ಯಾಂಪ್ ಸಮೀಪದಲ್ಲಿ ಕಮ್ಮಾ ರಾಘವೇಂದ್ರ ಇವರ ಹೊಲದ ಹತ್ತಿರ ಇರುವ ಪಚ್ಚಾರ ಹಳ್ಳದ ದಂಡೆಯ ಸಾರ್ವಜನಿಕ ಜಾಗೆಯಲ್ಲಿ ಆರೋಪಿ ಶಂಕ್ರಪ್ಪ ತಂದೆ ಕನಕಪ್ಪ ಮ್ಯಾದಾರ್, ಸಾ:ಕೆ.ಹಂಚಿನಾಳಕ್ಯಾಂಪ್, ಹಾಗೂ ಇತರೆ 6ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ಹಾಗೂ ಕಣದಲ್ಲಿಂದ ಒಟ್ಟು ನಗದು ಹಣ ರೂ.2190/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ 7.15 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು 07 ಜನ ಆರೋಪಿತರನ್ನು ದೂರು,  ದಾಳಿ ಪಂಚನಾಮೆಯೊಂದಿಗೆ ನನಗೆ ಒಪ್ಪಿಸಿದ್ದು, ದೂರು ಮತ್ತು ದಾಳಿ ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.12/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ದಾಖಲಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಸದರಿ ದೂರು, ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.60/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕರಣ ಮಾಹಿತಿ.
            ದಿನಾಂಕ 20.04.2020 ರಂದು 20.00 ಗಂಟೆಗೆ ಹಟ್ಟಿ ಪಟ್ಟಣದ ದನ್ವೀತ್ ಡಾಬಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಂಕರಪ್ಪ ತಂದೆ ಬಸಣ್ಣ ವಯಾ: 32 ವರ್ಷ ಜಾ: ಉಪ್ಪಾರ ಉ: ವ್ಯಾಪಾರ ಸಾ: ಕೋಠಾ ಕ್ರಾಸ್ ಹತ್ತಿರ ಹಟ್ಟಿ ಪಟ್ಟಣ ತನು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಮತ್ತು ಬಟ್ಟಿ ಸಾರಾಯಿಯನ್ನು ಮಾನವ ಜೀವಕ್ಕೆ ಅಪಾಯಕರವಾಗಿದ್ದರು ಸಹ ಅನಧೀಕೃತವಾಗಿ ತನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುತ್ತಿರುವದನ್ನು ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವನನ್ನು ಹಿಡಿದು ಅವನಿಂದ 1) 180 ಎಂ.ಎಲ್ 35 ಮೆಕ್ ಡೋಲ್ಸ್ ವಿಸ್ಕಿ ಬಾಟಲಿಗಳಿದ್ದು, ಒಂದಕ್ಕೆ 162 ರೂ ಅಂತೆ ಒಟ್ಟು 5670/- ರೂ, 2) 90 ಎಂ.ಎಲ್ 50 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 30 ರೂ ಅಂತೆ ಒಟ್ಟು 1500/- 3) ಒಂದು ಲೀಟರಿನ ಐದು ಬಟ್ಟಿ ಸಾರಾಯಿ ಪಾಕೀಟಗಳು ಅಕಿರೂ 500 ಹೀಗೇ ಒಟ್ಟು 7670/- ರೂ ಬೆಲೆಬಾಳುವ ಮದ್ಯ ಮತ್ತು ಬಟ್ಟಿ ಸಾರಾಯಿ ಮತ್ತು ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 58/2020 ಕಲಂ: 273, 284 L¦¹ & PÀ®A 32, 34 PÉ.F PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.