Pages

22 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ:22-02-2019 ರಂದು ಬೆಳಗಿನ ಜಾವ 5-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯ ಗುಂಡಮ್ಮ ಕಾಲುವೆ ಹತ್ತಿರದ ಕೆ. ಸತ್ಯನಾರಾಯಣ ರವರ ಮನೆಯ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ಪರಿಕ್ಷೀತ್ ಬಳಾಯಿ ತಂದೆ ಹರಿದಾಸ ಬಳಾಯಿ : 25 ವರ್ಷ ಜಾ: ನಮಶೂದ್ರ : ಕಾಯಿಪಲ್ಲೆ ವ್ಯಾಪಾರ ಸಾ: ಆರ್.ಹೆಚ್ ಕ್ಯಾಂಪ್ ನಂ 2 ತಾ: ಸಿಂಧನೂರು ಇವರ ಭಾವ ಬಿಪುಲ್ ಮೇಸ್ರಿ ಇತನು ತನ್ನ ಮೋಟರ್ ಸೈಕಲ್ ಚೆಸ್ಸಿ ನಂ MD634BE48H2P35875 ಇಂಜನ್ ನಂ BE4PH2733667 ನೇದ್ದರ ಮೇಲೆ ಸಿಂಧನೂರು ಕಡೆಗೆ ಬರುತ್ತಿರುವಾಗ. ಯಾವುದೋ ಅಪರಿಚಿತ ವಾಹನದ ಚಾಲಕನ್ನು  ರಾಯಚೂರು ರಸ್ತೆಯ ಕಡೆಯಿಂದ ಸಿಂಧನೂರು ಕಡೆಗೆ ಅತೀವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲಿಗೆ ಟಕ್ಕರ ಕೊಟ್ಟಾದ್ದು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದ ಬಿಪುಲ್ ಮೇಸ್ರಿ ಮೇಲೆ  ವಾಹನವನ್ನು ಹಾಯಿಸಿಕೊಂಡು ಹೋಗಿದ್ದರ ಪರಿಣಾಮವಾಗಿ ಬಿಪುಲ್ ಮೇಸ್ರಿಗೆ ತಲೆಗೆ ಹಿಂದೆ ಭಾರಿ ರಕ್ತಗಾಯ, ಹಣೆಯು ಸೀಳಿದ ರಕ್ತಗಾಯ,ಹೊಟ್ಟೆಗೆ ಸಹ ಭಾರಿ ಗಾಯವಾಗಿ ಕರಳುಗಳು ಹೊರಗೆ ಬಂದಿದ್ದು.ಬಲಗಾಲಿನ ಪಾದ ಕಟ್ಟಾಗಿದ್ದು,ಎಡಗಾಲು ತೊಡೆಗೆ ಮತ್ತು ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು. ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.ಅಂತ ತಡವಾಗಿ ಫಿರ್ಯಾದಿದಾರರು ಗಣಕಿಕೃತದಲ್ಲಿ ಅಳವಡಿಸಿದ ಫಿರ್ಯಾದಿ ನೀಡಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 12/2019 ಕಲಂ 279,304() ಐಪಿಸಿ ಮತ್ತು 187 .ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.