Pages

19 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟ್ಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 17-12-2018  ರಂದು 18.30  ಗಂಟೆ ಸುಮಾರು ತಲೇಖಾನ ಗ್ರಾಮದ ಗುಡಿಹಾಳ ಮಲ್ಲಪ್ಪನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿಯು ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿ ಶ್ರೀ ಚನ್ನಯ್ಯ ಎಸ್ ಹಿರೇಮಠ ಸಿಪಿಐ ಮಸ್ಕಿ ವೃತ್ತ ರವರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿಲಾಗಿ ಆರೋಪಿತನು ಸಿಕ್ಕಿದ್ದು,  ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 2140/- ರೂ ದೊರೆತಿದ್ದು, ಸಿಕ್ಕಿಬಿದ್ದ ಆರೋಪಿ ಯಂಕಪ್ಪ ತಂದೆ ರಾಮಣ್ಣ ಗುಡಿಹಾಳ, 26 ವರ್ಷ, ನಾಯಕ ತಾನು ಬರೆದ ಮಟ್ಕಾ ಚೀಟಿಯನ್ನು ಆರೋಪಿ ನಂ 02 ಹನುಮನಗೌಡ ಮರ್ಕಿ ಹಾಗೂ ಆರೋಪಿ ನಂ 03 ಕೃಷ್ಣಕಾಂತಸಿಂಗ್ ಇವರಿಗೆ ಕೊಡುವದಾಗಿ ಹೇಳಿದ್ದು ಇರುತ್ತದೆ, ಸಿಕ್ಕಿಬಿದ್ದ ಆರೋಪಿತನಿಂದ ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 181/2018 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.