Pages

16 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

         ದಿನಾಂಕ: 15.12.2020 ರಂದು 3-45 ಗಂಟೆಗೆ ಪಿ.ಎಸ್.ಐ[ಕಾಸು] ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದರ ಸಾರಾಂಶವೇನೆಂದರೆ,  ಗಂಜ್ ಏರಿಯಾದ ಗಣೇಶ್ ಬಾರ್ ಹಿಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ದುಂಡಾಗಿ ಕುಳಿತುಕೊಂಡು ಒಬ್ಬನು ತನ್ನ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಒಳಗೆ ಹೊರಗೆ ಎಂದು ಕೂಗುತ್ತಾ ಇಸ್ಪೀಟು ಎಲೆಗಳನ್ನು ಹಾಕುತ್ತಿದ್ದು ಉಳಿದವರು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದು ಕಂಡು ಬಂದಿದ್ದು, ಕೂಡಲೇ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 1-45 ಗಂಟೆಗೆ ದಾಳಿ ಮಾಡಲಾಗಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ ಅಬ್ದುಲ್ ವಾಹಿದ್ ತಂದೆ ಶೇಖ್ ಅಹ್ಮದ್ ವಯಾ: 47 ವರ್ಷ, ಜಾ: ಮುಸ್ಲೀಂ, ಉ: ಆಟೋ ಚಾಲಕ, ಸಾ ಹೊಸ ಆಶ್ರಯ ಕಾಲೋನಿ ರಾಯಚೂರು ಹಾಗೂ ನಾಲ್ಕು ಜನರನ್ನು ಹಿಡಿದು  ಅಂಗ ಜಡ್ತಿ ಮಾಡಲಾಗಿ ಸದರಿಯವರ ಹತ್ತಿರ ಒಟ್ಟು ಹಣ ರೂ. 2280/- ರೂಗಳು ಮತ್ತು ಘಟನಾ ಸ್ಥಳದಲ್ಲಿ 52 ಇಸ್ಪೀಟು ಎಲೆಗಳು ಇದ್ದವುಗಳನ್ನು ಒಂದು ಕಾಗದದ ಕವರಿನಲ್ಲಿಹಾಕಿ ಪಂಚರ ಸಹಿ ಚೀಟಿ ಅಂಟಿಸಿ ಜಪ್ತುಮಾಡಿಕೊಂಡು ನಂತರ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ದಿನಾಂಕ: 15.12.2020 ರಂದು   1-45 ಗಂಟೆಯಿಂದ 2-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 3-00 ಗಂಟೆಗೆ ವಾಪಸ ಠಾಣೆಗೆ ಬಂದು ಸದರಿ ಪಂಚನಾಮೆಯ ಮೇಲಿಂದ ಠಾಣಾ ಎನ್.ಸಿ.ನಂ. 49/2020 ರ  ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 5-10  ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ಮಾರ್ಕೇಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.147/2020 ಕಲಂ: ಕಲಂ: 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.