Pages

10 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಪ್ರಕರಣದ ಮಾಹಿತಿ
            ದಿ.09-06-20 ರಂದು 9-50 PM ಕ್ಕೆ ಸಿಪಿಐ ಸಿಂಧನೂರು ವೃತ್ತರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ಮಟಕಾ ಜೂಜಾಟದ ದಾಳಿ ಪಂಚನಾಮೆ, ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಆರೋಪಿ ನರಸಪ್ಪ ತಂದೆ ಅಮರಪ್ಪ ಸೋಸೈಟಿ  51 ವರ್ಷ, ಜಾ:-ಕುರುಬರು,ಉ:-ಒಕ್ಕಲುತನ, ಸಾ;-ಗೋರೆಬಾಳ ಗ್ರಾಮ ತಾ:-ಸಿಂಧನೂರು. ಹಾಗೂ ಮಟಕಾ  ಜೂಜಾಟದ ಸಾಮಾಗ್ರಿಗಳನ್ನು ಜಪ್ತಿ ಪಡಿಸಿಕೊಂಡು ಬಂದು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿತನು ಮಟಕಾ (O.C)ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಮೇರೆಗೆ, ಪಿ.ಎಸ್.ಐ ಗ್ರಾ ಠಾಣೆ ಹಾಗೂ ಸಿಬ್ಬಂದಿ, ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಆರೋಪಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿಯಲ್ಲಿ ಓಸಿ ನಂಬರಗಳನ್ನು ಬರೆದು ಕೊಳ್ಳುತ್ತಿರು ವುದು ಕಂಡುಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ರಾತ್ರಿ 8-10 ಗಂಟೆಗೆ ದಾಳಿ ಮಾಡಿ ಹಿಡಿದು ಕೊಂಡಿದ್ದು. ಸದರಿಯವನಿಂದ ಮಟಕಾ ನಂಬರ ಬರೆದ ಜೂಜಾಟದ ನಗದು ಹಣ 750/-ರೂಪಾಯಿ, 1-ಬಾಲ್ ಪೆನ್ನ ಮತ್ತು ಮಟಕಾ ನಂಬರ ಬರೆದ ಪಟ್ಟಿಯನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು, ಸದರಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ.ನಂ 21/2020 ರಲ್ಲಿ ನಮೂಧಿಸಿಕೊಂಡು ಆರೋಪಿ ವಿರುದ್ದ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಸಂಖ್ಯೆ 76/2020. ಕಲಂ. 78(iii). ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.